ಪುಣೆ: ಬರೋಬ್ಬರಿ 2.10 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಚರಸ್ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಪುಣೆ ಕಸ್ಟಮ್ ಅಧಿಕಾರಿಗಳು ನಾಲ್ವರ ಬಂಧನ ಮಾಡಿದ್ದಾರೆ.
ಆಂಧ್ರಪ್ರದೇಶದಿಂದ ಬರುತ್ತಿದ್ದ ಎರಡು ಟ್ರಕ್ನಲ್ಲಿ 1.04 ಕೋಟಿ ರೂ. ಮೌಲ್ಯದ 868 ಕೆ.ಜಿ ಗಾಂಜಾ ಹಾಗೂ 75 ಲಕ್ಷ ರೂ ಮೌಲ್ಯದ ಚರಸ್ ವಶಕ್ಕೆ ಪಡೆದುಕೊಂಡಿದ್ದು, ವಾಹನ ಸೀಜ್ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಸ್ಟಮ್ ಅಧಿಕಾರಿ ಖಚಿತ ಮಾಹಿತಿ ಮೇರೆಗೆ ನಲ್ದುರ್ಗಾ-ಸೋಲಾಪುರ ಹೆದ್ದಾರಿ ಬಳಿ ಕಾರ್ಯಾಚರಣೆ ನಡೆಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.