ETV Bharat / bharat

ದೆಹಲಿಯ ನೂತನ ಕೋವಿಡ್​ ಆಸ್ಪತ್ರೆ ವಾರ್ಡ್‌ಗಳಿಗೆ ಗಾಲ್ವಾನ್ ಹುತಾತ್ಮ ಯೋಧರ ಹೆಸರು: DRDO - ಗಾಲ್ವಾನ್ ಹುತಾತ್ಮ ಯೋಧರು

ಗಾಲ್ವಾನ್​ ಕಣಿವೆಯಲ್ಲಿ ಭಾರತ - ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ದೆಹಲಿಯ ನೂತನ ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್​ ಆಸ್ಪತ್ರೆ'ಯ ವಿವಿಧ ವಾರ್ಡ್‌ಗಳಿಗೆ ಹುತಾತ್ಮ ಯೋಧರ ಹೆಸರಿಡುವುದಾಗಿ ಡಿಆರ್‌ಡಿಒ ತಿಳಿಸಿದೆ.

DRDO
ಡಿಆರ್‌ಡಿಒ
author img

By

Published : Jul 4, 2020, 1:07 PM IST

ನವದೆಹಲಿ: ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಹೆಸರನ್ನು ದೆಹಲಿಯ ನೂತನ 'ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್​ ಆಸ್ಪತ್ರೆ'ಯ ವಿವಿಧ ವಾರ್ಡ್‌ಗಳಿಗೆ ಹೆಸರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಧರಿಸಿದೆ.

ಪೂರ್ವ ಲಡಾಖ್​​ನ ಗಾಲ್ವಾನ್​ ಕಣಿವೆಯಲ್ಲಿ ಭಾರತ - ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಆರ್‌ಡಿಒ ಅಧ್ಯಕ್ಷರಿಗೆ ತಂತ್ರಜ್ಞಾನ ಸಲಹೆಗಾರರಾಗಿರುವ ಸಂಜೀವ್ ಜೋಶಿ ತಿಳಿಸಿದ್ದಾರೆ.

ದೆಹಲಿ-ಹರಿಯಾಣ ಗಡಿ ಸಮೀಪವಿರುವ ಚಟ್ಟರ್‌ಪುರ ಪ್ರದೇಶದಲ್ಲಿರುವ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಆವರಣದಲ್ಲಿ ನಿರ್ಮಿಸಲಾಗಿರುವ ದೆಹಲಿಯ ಅತಿದೊಡ್ಡ ಕೋವಿಡ್​ ಕೇಂದ್ರ ಇದಾಗಿದೆ. 10,000 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ 1,000 ವಿಶೇಷ ತೀವ್ರ ನಿಗಾ ಘಟಕದ ಬೆಡ್​ಗಳು ಹಾಗೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ.

ವೈದ್ಯರು ಸೇರಿದಂತೆ 2,000 ಕ್ಕೂ ಹೆಚ್ಚು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಇತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿ ಆಸ್ಪತ್ರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನೂತನ ಕೋವಿಡ್​ ಕೇಂದ್ರವನ್ನು ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಉದ್ಘಾಟಿಸುವ ನಿರೀಕ್ಷೆಯಿದೆ.

ಆಸ್ಪತ್ರೆಯಲ್ಲಿರುವ ಐಸಿಯು ಮತ್ತು ವೆಂಟಿಲೇಟರ್ ವಾರ್ಡ್‌ಗೆ 'ಕರ್ನಲ್ ಬಿ ಸಂತೋಷ್ ಬಾಬು ವಾರ್ಡ್' ಎಂದು ಹೆಸರಿಸಲಾಗಿದೆ. ಗಾಲ್ವಾನ್​ ಸಂಘರ್ಷಣೆ ಬಳಿಕ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನ ಲೇಹ್‌ಗೆ ಭೇಟಿ ನೀಡಿದ ಬಳಿಕ ಡಿಆರ್‌ಡಿಒ ಈ ನಿರ್ಧಾರಕ್ಕೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.