ಹೈದರಾಬಾದ್ (ತೆಲಂಗಾಣ): ಲಾಕ್ ಡೌನ್ ಬಳಿಕ ದೇಶೀಯ ವಿಮಾನ ಸೇವೆಗಳು ಪುನರಾರಂಭಗೊಂಡಿದ್ದರೂ, ಮುನ್ಸೂಚನೆ ನೀಡದೆ ಏರ್ ಇಂಡಿಯಾ, ವಿಮಾನ ಹಾರಾಟ ರದ್ದುಗೊಳಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಏರ್ ಇಂಡಿಯಾ ಸಂಸ್ಥೆಯು ಬೆಂಗಳೂರು-ಹೈದರಾಬಾದ್ ವಿಮಾನದ ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸದೆ ವಿಮಾನವನ್ನು ರದ್ದುಪಡಿಸಿದ್ದು, ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿದ ನಂತರವಷ್ಟೇ ಗೊತ್ತಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದರು.
"ಇಂದು ನಾವು ದೇಶೀಯ ವಿಮಾನಗಳನ್ನು ಮರುಪ್ರಾರಂಭಿಸುತ್ತೇವೆ. ಭಾರತದ ನಾಗರಿಕ ವಿಮಾನಯಾನ ಯಾವಾಗಲೂ ಮುಂಚೂಣಿಯಲ್ಲಿದೆ" ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಆದರೆ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ತಮ್ಮ ವಿಮಾನಗಳಿಗಾಗಿ ಕಾಯುತ್ತಿರುವ ಹಲವಾರು ಪ್ರಯಾಣಿಕರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ದೂರಿದ್ದಾರೆ.