ETV Bharat / bharat

'ವೈದ್ಯರೇ ನಮ್ಮ ಸೂಪರ್​ ಹೀರೋಗಳು, ಅವರ ರಕ್ಷಣೆ ಅತ್ಯಗತ್ಯ' ಎಂದ ಕನಸಿನ ಕನ್ಯೆ - undefined

ವೈದ್ಯರು ನಮ್ಮ ಸೂಪರ್​ ಹೀರೋಗಳು, ದೇಶದ ಆಸ್ತಿ. ನಾವು ದೇವರನ್ನು ನಂಬುತ್ತೇವೆ, ಅಂತೆಯೇ ವೈದ್ಯರ ಮೇಲೂ ವಿಶ್ವಾಸವಿರಿಸಬೇಕು. ವೈದ್ಯಕೀಯ ಸಮುದಾಯದ ರಕ್ಷಣೆಗೆ ಪ್ರಬಲ ಕಾನೂನು ಅಗತ್ಯವಿದೆ ಎಂದು ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಲೋಕಸಭೆಯಲ್ಲಿ ಹೇಳಿದರು.

ಹೇಮಾಮಾಲಿನಿ
author img

By

Published : Jul 4, 2019, 2:09 PM IST

ನವದೆಹಲಿ: ವೈದ್ಯರೇ ನಮ್ಮ ಸೂಪರ್​ ಹೀರೋಗಳು, ಅವರ ರಕ್ಷಣೆಗೆ ಬಲವಾದ ಕಾನೂನು ಅಗತ್ಯವಿದೆ ಎಂದು ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಲೋಕಸಭೆಯಲ್ಲಿ ಹೇಳಿದರು.

ಸಂಸತ್ ಅಧಿವೇಶನದ ವೇಳೆ ಮಾತನಾಡಿದ ಅವರು, ದೇಶದ ವಿವಿಧೆಡೆ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಗಳು ಆತಂಕ ಮೂಡಿಸಿವೆ. ಇದೇ ಕಾರಣಕ್ಕೆ ಜೂನ್ 17ರಂದು 8 ಲಕ್ಷ ವೈದ್ಯರು ರಾಷ್ಟ್ರವ್ಯಾಪಿ ಬಂದ್​ ನಡೆಸಲು ಮುಂದಾದರು. ರೋಗಿಯ ಜೀವ ಉಳಿಸುವ ಸಂದರ್ಭದಲ್ಲಿ ವೈದ್ಯರ ಸಾಕಷ್ಟು ಒತ್ತಡದಲ್ಲಿರುತ್ತಾರೆ ಎಂದು ವೈದ್ಯರ ಸಮಸ್ಯೆ ಬಿಚ್ಚಿಟ್ಟರು.

ವೈದ್ಯರು ನಮ್ಮ ಸೂಪರ್​ ಹೀರೋಗಳು, ದೇಶದ ಆಸ್ತಿ. ನಾವು ದೇವರನ್ನು ನಂಬುತ್ತೇವೆ, ಅಂತೆಯೇ ವೈದ್ಯರ ಮೇಲೂ ವಿಶ್ವಾಸವಿರಿಸಬೇಕು. ವೈದ್ಯಕೀಯ ಸಮುದಾಯದ ರಕ್ಷಣೆಗೆ ಪ್ರಬಲ ಕಾನೂನು ಅಗತ್ಯವಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರನ್ನು ಬ್ಲಾಕ್​ಲಿಸ್ಟ್​ಗೆ ಸೇರಿಸಬೇಕು. ಅಂತಹವರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಸಿಗದಂತೆ ಮಾಡಬೇಕು ಎಂದು ಆಕ್ರೋಶದಿಂದ ನುಡಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.