ಚಡೀಗಢ(ಪಂಜಾಬ್): ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ತಾವು ಬೆಳೆದ ಬೆಳೆಯನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಸಾಗಿಸಲು ಹಾಗೂ ಹೊಲಗಳಲ್ಲಿರುವ ಬೆಳೆ ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗದೇ ತೊಂದರೆಗೆ ಸಿಲುಕಿದ್ದಾರೆ.
ಪಂಜಾಬ್ನಲ್ಲಿ ರೈತರಿಗೀಗ ಗೋದಿ ಕೊಯ್ಲು ಮಾಡಬೇಕಾದ ಸಮಯ. ಲಾಕ್ಡೌನ್ ಇರುವುದರಿಂದ ಕೂಲಿಯಾಳುಗಳು ಸಿಗುತ್ತಿಲ್ಲ. ಈ ಸಮಸ್ಯೆ ಮನಗಂಡ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ರಾಜ್ಯದಲ್ಲಿನ ಅನ್ನದಾತರಿಗಾಗಿ ಮಾತ್ರ ಲಾಕ್ಡೌನ್ನಿಂದ ತಾತ್ಕಾಲಿಕವಾಗಿ ನಿರ್ಬಂಧ ಸಡಿಲಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಇದು ಸೂಚಿಸಿದ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ ಎಂದಿದ್ದಾರೆ.
ರಾಜ್ಯದಲ್ಲಿ 185 ಲಕ್ಷ ಟನ್ ಗೋದಿ ಉತ್ಪಾದನೆಯಾಗಲಿದ್ದು, ಕೊಯ್ಲಿಗೆ ರೈತರು ಯಾವುದೇ ತೊಂದರೆ ಪಡಬೇಕಿಲ್ಲ ಎಂಬ ಭರವಸೆ ಅಲ್ಲಿನ ಸರ್ಕಾರದಿಂದ ಸಿಕ್ಕಿದೆ.
ಪಂಜಾಬ್ನಲ್ಲಿ ಇಲ್ಲಿಯವರೆಗೆ 132 ಕೋವಿಡ್ ಸೋಂಕಿತ ಪ್ರಕರಣಗಳು ಕಂಡು ಬಂದಿವೆ. 11 ಜನರು ಸಾವನ್ನಪ್ಪಿದ್ದಾರೆ.