ETV Bharat / bharat

ನಿಮ್ಮ ಸ್ಮಾರ್ಟ್​ಫೋನ್ ಕೂಡ ಹಾವಾಗಿ ಕಚ್ಚೀತು ಹುಷಾರ್​....!

ಸ್ಮಾರ್ಟ್​ಫೋನ್​ ಈಗ ಎಲ್ಲರ ಜೀವನದ ಅವಿಭಾಜ್ಯ ಅಂಗ. ಎಲ್ಲೇ ಹೋದರೂ ಇದು ಕೈಲಿರಲೇಬೇಕು. ಅಂದ ಮೇಲೆ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ಇದಕ್ಕೆ ಅಂಟಿಕೊಳ್ಳುವುದು ಸಹಜ. ಹೀಗಾಗಿ ಕೇವಲ ನಿಮ್ಮ ಕೈ ತೊಳೆದರೆ ಸಾಲದು, ಸ್ಮಾರ್ಟ್​ಫೋನ್​ ಅನ್ನು ಕೂಡ ಸ್ಯಾನಿಟೈಜರ್​ನಿಂದ ಸ್ವಚ್ಛಗೊಳಿಸುವುದು ಅಗತ್ಯ.

Disinfect your smartphone
Disinfect your smartphone
author img

By

Published : Mar 31, 2020, 6:59 PM IST

ಎಲ್ಲೆಡೆ ಕೊರೊನಾ ವೈರಸ್ ಆತಂಕ ಹರಡಿರುವಾಗ ಎಲ್ಲರೂ ಕೈಗಳನ್ನು ಆಗಾಗ ತೊಳೆಯುವುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು. ಆದರೆ, ನಿಮ್ಮ ಸ್ಮಾರ್ಟ್​ಫೋನ್​ ಕೊಳೆಯಾಗಿದ್ದು, ಕೈಗಳನ್ನು ಮಾತ್ರ ತೊಳೆಯುತ್ತಿದ್ದಲ್ಲಿ ಏನೂ ಪ್ರಯೋಜನವಿಲ್ಲ ಎಂಬುದು ಗೊತ್ತಿರಲಿ.

ಹೌದು... ನಿಮ್ಮ ಸ್ಮಾರ್ಟ್​ಫೋನ್​ ಸದಾ ಕೈಯಲ್ಲಿರುವುದರಿಂದ ಅದನ್ನು ಸ್ವಚ್ಛಗೊಳಿಸುವುದು ಅನಿವಾರ್ಯ. ಡಾಕ್ಟರ್​ ಸ್ಪಿರಿಟ್ ಅಥವಾ ಅಲ್ಕೊಹಾಲ್​ ಆಧರಿತ ಸ್ಯಾನಿಟೈಜರ್​ನಿಂದ 90 ನಿಮಿಷಗಳಿಗೊಮ್ಮೆ ಸ್ಮಾರ್ಟ್​ಫೋನ್​ ಸ್ವಚ್ಛಗೊಳಿಸುತ್ತಿರಬೇಕೆಂದು ತಜ್ಞರು ಹೇಳುತ್ತಾರೆ.

ಇನ್ನು ಆಗಾಗ ಸ್ಮಾರ್ಟ್​ಫೋನ್​ ಮುಟ್ಟದಿರುವಂತೆ ಫೋನ್​ ಕವರ್​ ಅಥವಾ ಬ್ಲೂಟೂತ್​ ಬಳಸುವುದು ಸೂಕ್ತ. ಕನಿಷ್ಠ ದಿನಕ್ಕೆ ಎರಡು ಬಾರಿಯಾದರೂ ಸ್ಮಾರ್ಟ್​ಫೋನ್ ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಅವರು.

ಸ್ಮಾರ್ಟ್​ಫೋನ್​ಗಳ ಬಗ್ಗೆ ನಡೆದ ಸಂಶೋಧನೆಯೊಂದರ ಪ್ರಕಾರ, ಸ್ಮಾರ್ಟ್​ಫೋನ್​ ಸ್ಕ್ರೀನ್​ ಒಂದರ ಮೇಲೆ ಶೌಚಾಲಯದಲ್ಲಿರುವುದಕ್ಕಿಂತಲೂ ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆಯಂತೆ. 20 ಜನ ಸ್ಮಾರ್ಟ್​ಫೋನ್​ ಬಳಕೆದಾರರಲ್ಲಿ ಒಬ್ಬರು ಆರು ತಿಂಗಳಿಗೊಮ್ಮೆ ಸಹ ತಮ್ಮ ಫೋನ್​ ಸ್ವಚ್ಛಗೊಳಿಸುವುದಿಲ್ಲವಂತೆ!

"ಕೊರೊನಾ ವೈರಸ್​ನ ಸಂಕಷ್ಟದ ಈ ಸಮಯದಲ್ಲಿ ಸ್ಯಾನಿಟೈಜರ್​ನಿಂದ ಫೋನ್ ಸ್ವಚ್ಛಗೊಳಿಸುವುದು ಸೂಕ್ತ. ಸಂಜೆ ಆಫೀಸಿನಿಂದ ಮರಳಿದ ನಂತರ ಹಾಗೂ ಬೆಳಗ್ಗೆ ಆಫೀಸಿಗೆ ಹೋಗುವಾಗ ಒಂದು ಬಾರಿ ಸ್ಮಾರ್ಟ್​ಫೋನ್​ ಸ್ವಚ್ಛಗೊಳಿಸಬೇಕು." ಎನ್ನುತ್ತಾರೆ ನವದೆಹಲಿಯ ಶ್ರೀ ಬಾಲಾಜಿ ಆಕ್ಷನ್​ ಮೆಡಿಕಲ್​ ಇನ್​ಸ್ಟಿಟ್ಯೂಟ್​ ಮೈಕ್ರೊಬಯಾಲಜಿ ವಿಭಾಗದ ಸೀನಿಯರ್​ ಕನ್ಸಲ್ಟಂಟ್​ ಜ್ಯೋತಿ ಮುತ್ತಾ.

ಯುನೈಟೆಡ್​ ಕಿಂಗಡಂ ನ ಸರ್ರೇ ವಿವಿ ನಡೆಸಿದ ಸಂಶೋಧನೆಯ ಪ್ರಕಾರ, ಸ್ಮಾರ್ಟ್​ಫೋನ್​ನ ಹೋಂ ಬಟನ್​ ಮೇಲೆ ಮಿಲಿಯನ್​ಗಟ್ಟಲೆ ಬ್ಯಾಕ್ಟೀರಿಯಾ ಇರುತ್ತವಂತೆ. ಇದರಲ್ಲಿ ಕೆಲವು ಅಪಾಯಕಾರಿಯೂ ಆಗಿರುತ್ತವಂತೆ.

ಇಷ್ಟೆಲ್ಲ ಸಂಶೋಧನೆಗಳು ಹೇಳುವಂತೆ ಒಟ್ಟಾರೆಯಾಗಿ ನಿಮ್ಮ ಕೈಗಳನ್ನು ಮಾತ್ರ ತೊಳೆದರೆ ಸಾಲದು, ಸ್ಮಾರ್ಟ್​ಫೋನ್​ ಅನ್ನು ಸಹ ಸ್ವಚ್ಛಗೊಳಿಸುತ್ತಿರುವುದು ಅತ್ಯಂತ ಅಗತ್ಯ ಎಂಬುದು ಗೊತ್ತಿರಲಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.