ಕನೌಜ್, (ಯುಪಿ) : ಕೇಂದ್ರದಲ್ಲಿ ಐದು ವರ್ಷ ಆಡಳಿತ ನಡೆಸಿದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಕೊಟ್ಟ ಭರವಸೆಗಳನ್ನ ಈಡೇರಿಸಿಲ್ಲ ಅಂತಾ ಸಮಾಜವಾದಿ ಪಕ್ಷದ ಮುಖಂಡೆ ಡಿಂಪಲ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಇವತ್ತು ಉತ್ತರಪ್ರದೇಶದ ಕನೌಜ್ ಕ್ಷೇತ್ರದಿಂದ ಎಸ್ಪಿ-ಬಿಎಸ್‌ಪಿ ನೇತೃತ್ವದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವ್ರು, ಈ ಸಾರಿ ಬಿಎಸ್‌ಪಿ ಕೂಡ ತಮಗೆ ಸಾಥ್ ಕೊಟ್ಟಿರೋದ್ರಿಂದಾಗಿ ಅತೀ ಹೆಚ್ಚು ಮತಗಳ ಅಂತರಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬರೋದಕ್ಕೂ ಮೊದಲು ದೇಶದ ಜನರಿಗೆ ಸಾಕಷ್ಟು ಭರವಸೆ ನೀಡಿದ್ದರು. ಆದರೆ, ತಮ್ಮ ಅಧಿಕಾರದಲ್ಲಿ ಕೊಟ್ಟ ಯಾವುದೇ ಭರವಸೆಗಳನ್ನ ಈಡೇರಿಸಿಲ್ಲ. ಮೋದಿ ಸರ್ಕಾರ ಸಂಪೂರ್ಣವಾಗಿ ಎಲ್ಲ ವಿಧದಲ್ಲೂ ವಿಫಲವಾಗಿದೆ. ಈಗ ಜನರ ಗಮನ ಬೆರೆಯದರತ್ತ ಸೆಳೆಯಲು ಬಿಜೆಪಿ ಸೇನೆಯನ್ನೂ ತಮ್ಮ ಪ್ರಚಾರಕ್ಕೆ ಬಳಿಸಿಕೊಳ್ಳುತ್ತಿದೆ ಅಂತಾ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿಯೂ ಆಗಿರುವ ಡಿಂಪಲ್ ಯಾದವ್ ಕಿಡಿಕಾರಿದರು.
ಇವತ್ತು ಕನೌಜ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಪತಿ ಅಖಿಲೇಶ್ ಯಾದವ್, ಜಯಾಬಚ್ಚನ್, ಬಿಎಸ್‌ಪಿ ಮುಖಂಡ ಎಸ್.ಸಿ ಮಿಶ್ರಾ ಕೂಡ ಹಾಜರಿದ್ದರು. ವಿಶೇಷ ಅಂದ್ರೇ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್, ಡಿಂಪಲ್ ಯಾದವ್‌ರಿಗೆ ಸಪೋರ್ಟ್ ಮಾಡಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿಲ್ಲ.