ನವದೆಹಲಿ: ರಾಮೋಜಿ ಗ್ರೂಪ್ 50 ವರ್ಷಗಳಿಂದ ಅನೇಕ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಅದು ಹೀಗೆ ಮುಂದುವರಿಯಲಿದೆ. ನಮ್ಮ ಈ ನಿರಂತರ ಕಾರ್ಯಕ್ಕೆ ಮೌಲ್ಯಗಳು ಮತ್ತು ವಿಶ್ವಾಸವೇ ನಮ್ಮ ಬಲ ಎಂದು ಈಟಿವಿ ಭಾರತ್ ನಿರ್ದೇಶಕಿ ಬೃಹತಿ ಚೆರುಕೂರಿ ತಮ್ಮ ನಿಲುವು ಪ್ರತಿಪಾದಿಸಿದರು.
ನವದೆಹಲಿಯಲ್ಲಿ ನಡೆದ ಎರಡು ದಿನಗಳ ಡಿಜಿಟಲ್ ಮೀಡಿಯಾ-2020 ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಸುದ್ದಿಮನೆಯ ನಾವೀನ್ಯತೆ ಮತ್ತ ಸಂಸ್ಕೃತಿ ಬೆಳೆಸುವ ಪರಿ ಹೇಗೆ ಎಂಬುದರ ಕುರಿತು ಮಾತನಾಡಿದರು.
ಈಟಿವಿ ಭಾರತ್ನಿಂದ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಪ್ರಯುಕ್ತ 'ವೈಷ್ಣವ ಜನತೋ' ಹಾಡನ್ನು ಅರ್ಪಿಸಲಾಗಿತ್ತು. ಅದಕ್ಕೆ ಭಾರೀ ಪ್ರಮಾಣದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ದೇಶದ ಎಲ್ಲ ಪ್ರಮುಖ ಗಾಯಕರು ಅದಕ್ಕೆ ಕಂಠದಾನ ಮಾಡಿದ್ದರು ಎಂದರು.
ಭಾರತೀಯ ಮಹಿಳೆಯರು ತಮ್ಮ ಕನಸುಗಳತ್ತ ಹೆಜ್ಜೆ ಹಾಕಲು ಕಷ್ಟಕರ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ಅವರಿಗೆ ಇನ್ನೂ ಉತ್ತಮ ಬೆಂಬಲ ದೊರೆಯಬೇಕು. ಮತ್ತಷ್ಟು ಪ್ರೋತ್ಸಾಹ ನೀಡಬೇಕು ಎಂದು ಚೆರುಕೂರಿ ಇದೇ ವೇಳೆ ಮನವಿ ಮಾಡಿದರು.
ಮೊದಲನೇ ದಿನದ ಈ ಸಮ್ಮೇಳನದಲ್ಲಿ ಈಟಿವಿ ಭಾರತ್ 'ಬೆಸ್ಟ್ ಡಿಜಿಟಲ್ ನ್ಯೂಸ್ ಸ್ಟಾರ್ಟ್-ಅಪ್' ಪ್ರಶಸ್ತಿ ಮುಡಿಗೇರಿಸಿಕೊಂಡಿರೋದು ಕೂಡ ಗಮನಾರ್ಹ.