ಜುನಾಗಡ್/ಗುಜರಾತ್: ಗಿರ್ನಾರ್ ಪರ್ವತದ ಪರಿಧಿಯಲ್ಲಿರುವ ದೂಧೇಶ್ವರ ಮಹಾದೇವ್ ಮಂದಿರದ ಸಂಸ್ಥಾಪಕ ಭೈರವಾನಂದ ಬ್ರಹ್ಮಚಾರಿ ಅವರನ್ನು ಭಕ್ತರು ‘ದೀಪ್ಡಾ ಬಾಪಾ’ (ಚಿರತೆ ಸಂತ) ಎಂಬ ಹೆಸರಿನಲ್ಲಿ ಇಂದಿಗೂ ಪೂಜಿಸುತ್ತಾ ಬರುತ್ತಿದ್ದಾರೆ.
ದೀಪ್ಡಾ ಬಾಪಾ ಅವರು ಸ್ವಾಮಿ ಸಹಜಾನಂದ್ ಅವರ ಸಮಕಾಲೀನರಾಗಿದ್ದರು ಹಾಗೂ ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಇಲ್ಲಿನ ಭಕ್ತರು ನಂಬಿದ್ದಾರೆ.
ದೀಪ್ಡಾ ಬಾಪಾ ಎಂದೂ ಕರೆಯಲ್ಪಡುವ ಭೈರವಾನಂದ ಬ್ರಹ್ಮಚಾರಿ 250 ವರ್ಷಗಳ ಹಿಂದೆ ಧ್ಯಾನಕ್ಕೆ ಕುಳಿತಿದ್ದರಂತೆ. ಜುನಾಗಡ್ನ ಭಾವನಾಥ್ ವೃತ್ತದಲ್ಲಿರುವ ದೂಧೇಶ್ವರ ಮಹಾದೇವ್ ಮಂದಿರದಲ್ಲಿ ಅವರ ಧ್ಯಾನ ಸ್ಥಾನವಿದೆ. ದೇವಯತ್ ಪಂಡಿತ್ ಮಾಡಿದ ಮುನ್ಸೂಚನೆಯ ಪ್ರಕಾರ, ಭೈರವಾನಂದ ಬ್ರಹ್ಮಚಾರಿ ದೇವರ ಪ್ರಾರ್ಥನೆಯಲ್ಲಿ ಮುಳುಗಿದ್ದಾರೆಂದೇ ಇಲ್ಲಿಯವರೆಗೂ ನಂಬಲಾಗಿದೆ. ಅವರು ತನ್ನ ಸ್ವರೂಪವನ್ನು ಬದಲಾಯಿಸುವ ಶಕ್ತಿಯನ್ನು ಪಡೆದಿದ್ದು, ಅಂದಿನಿಂದ ಅವರನ್ನು ದೀಪ್ಡಾ ಬಾಪಾ ಅಥವಾ ಚಿರತೆ ಸಂತ ಎಂದು ಇಲ್ಲಿನ ಭಕ್ತರು ಕರೆದುಕೊಂಡು ಬಂದಿದ್ದಾರೆ.
ಚಿರತೆ ಸಂತ ಹೇಗಾದ ಗೊತ್ತಾ...
ಒಂದು ದಿನ, ಚಿರತೆ ರೂಪದಲ್ಲಿ ಸಂತನು ಕಾಡುಗಳಲ್ಲಿ ತಿರುಗಾಡುತ್ತಿದ್ದಾಗ, ವನ್ಯಜೀವಿಗಳನ್ನು ಬೇಟೆಯಾಡಲು ಬಂದ ಜುನಾಗಡ್ನ ನವಾಬ್ ಬಂದೂಕಿನಿಂದ ಗುಂಡು ಹಾರಿಸಿ ಸಂತನ ಕಾಲಿಗೆ ಗಾಯ ಮಾಡಿದ್ದನಂತೆ. ಈ ನವಾಬನೂ ಸಹ ಭೈರವಾನಂದನ ಭಕ್ತನಾಗಿದ್ದನು. ಹೀಗೆ ನವಾಬ್ ದೂಧೇಶ್ವರ ಮಹಾದೇವ್ ಮಂದಿರಕ್ಕೆ ಭೇಟಿ ನೀಡಿದಾಗ ಸಂತನಿಗೆ ಆದ ಕಾಲಿನ ಗಾಯ ಕಂಡು ಹೇಗಾಯಿತು ಎಂದು ಕೇಳಿದಾಗ, ನವಾಬನಂತಹ ಬೇಟೆಗಾರನು ಚಿರತೆಯನ್ನು ಕೊಲ್ಲಲು ಗುಂಡು ಹಾರಿಸಿದನು ಎಂದು ಸಂತ ಬಹಿರಂಗಪಡಿಸಿದ್ದರಂತೆ.
ಈ ಘಟನೆ ಬಳಿಕ ನವಾಬ್ ಬಂಗಾಳದ ಅತ್ಯುತ್ತಮ ಕುಶಲಕರ್ಮಿಗಳನ್ನು ಭೇಟಿಯಾಗಿ ಸಂತನ ಸುರಕ್ಷತೆಗಾಗಿ ದೂಧೇಶ್ವರ ಮಹಾದೇವ್ ಮಂದಿರದಲ್ಲಿ ಗುಹೆ ನಿರ್ಮಿಸಿದರು. ಅಂದಿನಿಂದ ಭೈರವಾನಂದ್ ಬಾಪು ಗುಹೆಯಲ್ಲಿ ಕುಳಿತು ಧ್ಯಾನಸ್ತನಾಗಿ ಸರ್ವಶಕ್ತ ದೇವರನ್ನು ಪ್ರಾರ್ಥಿಸುತ್ತಿದ್ದಾರೆ ಎಂಬುದು ನಂಬಿಕೆ.
ಬಂಗಾಳಿ ಕುಶಲಕರ್ಮಿಗಳು ಶ್ರೀ ಯಂತ್ರವನ್ನು ಆಧರಿಸಿ ಈ ಗುಹೆಯನ್ನು ನಿರ್ಮಿಸಿದ್ದು, ಈ ಗುಹೆ ಬಾವಿ ಮತ್ತು ಶೌಚಾಲಯವನ್ನೂ ಹೊಂದಿದೆ. ತನ್ನ ದೇಹದ ಸ್ವರೂಪವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುವ ಭೈರವಾನಂದ್ ಬಾಪು ಕಳೆದ 250 ವರ್ಷಗಳಿಂದ ಗುಹೆಯಲ್ಲಿ ಅತೀಂದ್ರಿಯ ರೂಪದಲ್ಲಿ ವಾಸಿಸುತ್ತಿದ್ದಾರೆ ಮತ್ತು ತನ್ನ ಭಕ್ತರಿಗೆ ಗೋಚರಿಸುವಂತೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.