ಫ್ರಾನ್ಸ್: ಹಲವು ವಿವಾದದ ನಡುವೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆ ಬತ್ತಳಿಕೆಗೆ ಸೇರಿಕೊಂಡಿದೆ. ಮೊದಲ ಯುದ್ಧ ವಿಮಾನವನ್ನ ಫ್ರಾನ್ಸ್ನ ಡಸಾಲ್ಟ್ ಸಂಸ್ಥೆ ಭಾರತಕ್ಕೆ ಹಸ್ತಾಂತರಿಸಿದೆ.
ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾರಾಟ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ರಫೇಲ್ ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಬಲವನ್ನ ಹೆಚ್ಚಿಸಲಿದೆ ಎಂದಿದ್ದಾರೆ.
ರಫೇಲ್ನಿಂದ ನಮ್ಮ ವಾಯು ಪಡೆಯ ಶಕ್ತಿ ಹೆಚ್ಚಾಗಿದೆ. ಆದರೆ ಈ ಶಕ್ತಿ ಇತರರ ಮೇಲೆ ದಾಳಿ ಮಾಡಲು ನಮ್ಮನ್ನ ರಕ್ಷಣೆ ಮಾಡಿಕೊಳ್ಳಲು. ಇದರ ಸಂಪೂರ್ಣ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದಿದ್ದಾರೆ. ಇನ್ನು ರಫೇಲ್ ವಿಮಾನದಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್, ಇಂದೊಂದು ತುಂಬಾ ಆರಾಮದಾಯಕ ಯುದ್ಧ ವಿಮಾನವಾಗಿದೆ. ಒಂದು ದಿನ ನಾನು ಇಂತಾ ಸೂಪರ್ ಸಾನಿಕ್ ವಿಮಾನದಲ್ಲಿ ಹಾರಾಟ ನಡೆಸುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.