ಪುಲ್ವಾಮಾ (ಜಮ್ಮು ಕಾಶ್ಮೀರ್): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರನ ಗುರುತು ಪತ್ತೆಯಾಗಿದೆ.
ಕಾಶ್ಮೀರ್ ಪುಲ್ವಾಮಾ ಕಾರ್ ಬಾಂಬ್ ರೂವಾರಿಯ ಗುರುತು ಪತ್ತೆಯಾಗಿದ್ದು, ಈತನನ್ನು ಶೋಪಿಯಾನ್ನ ಹಿದಾಯತ್ಉಲ್ಲಾ ಮಲೀಕ್ ಎಂದು ಗುರುತಿಸಲಾಗಿದೆ.
ಕಾರಲ್ಲಿ ಭಾರೀ ಪ್ರಮಾಣದ ಸ್ಫೋಟಕ ತುಂಬಿಟ್ಟಿದ್ದ ಕಾರಿನ ಮಾಲೀಕ ಈತನೇ ಎಂದು ತಿಳಿದುಬಂದಿದೆ. ಹಿದಾಯತ್ ಉಲ್ಲಾ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ. ಕಳೆದ ವರ್ಷ ಈತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದ ಎಂದು ಜಮ್ಮು ಕಾಶ್ಮೀರ್ ಪೊಲೀಸರು ಮಾಹಿತಿ ನೀಡಿದ್ದಾರೆ.