ETV Bharat / bharat

ದೆಹಲಿಯನ್ನಾವರಿಸಿದ ದಟ್ಟ ಮಂಜು: ರೈಲ್ವೆ-ವಿಮಾನ ಸೇವೆಯಲ್ಲಿ ಬದಲಾವಣೆ

author img

By

Published : Dec 30, 2019, 9:06 AM IST

ಉತ್ತರದಲ್ಲಿ ಚಳಿಗೆ ಜನರು ತತ್ತರಿಸಿದ್ದು, ಭಾನುವಾರ ದೆಹಲಿಯಲ್ಲಿ 2.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ತಾಪಮಾನ ದಾಖಲಾಗಿತ್ತು. ಇಂದು ಸಹ ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆ ಆಗಿರುವುದರಿಂದ ದೆಹಲಿಯ ರೈಲ್ವೆ-ವಿಮಾನ ಸೇವೆಯಲ್ಲಿ ಬದಲಾವಣೆ ಆಗಲಿದೆ.

dense fog and cold wave continues in Delhi
ದೆಹಲಿಯನ್ನಾವರಿಸಿದ ದಟ್ಟ ಮಂಜು

ನವದೆಹಲಿ: ಶೀತಗಾಳಿ ಹಾಗೂ ದಟ್ಟವಾದ ಮಂಜು ರಾಷ್ಟ್ರ ರಾಜಧಾನಿಯನ್ನು ಆವರಿಸುತ್ತಲೇ ಇದ್ದು, ಇಂದು ರೈಲ್ವೆ ಹಾಗೂ ವಿಮಾನ ಸೇವೆ ಮೇಲೆ ಅಡ್ಡಪರಿಣಾಮ ಬೀರಿದೆ.

  • Delhi: Foggy weather conditions at New Delhi railway station. 30 trains are running late due to low visibility in the Northern Railway region. Minimum temperature of 2.5°C was recorded in the national capital, on 29th December (yesterday). pic.twitter.com/M3tADXSieB

    — ANI (@ANI) December 30, 2019 " class="align-text-top noRightClick twitterSection" data=" ">

ಉತ್ತರದಲ್ಲಿ ಚಳಿಗೆ ಜನರು ತತ್ತರಿಸಿ ಹೋಗಿದ್ದು, ಭಾನುವಾರ ದೆಹಲಿಯಲ್ಲಿ 2.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ತಾಪಮಾನ ದಾಖಲಾಗಿತ್ತು. ದೆಹಲಿಯ ಕಂಟೋನ್ಮೆಂಟ್ ಪ್ರದೇಶವನ್ನ ಮಂಜು ಆವರಿಸಿದೆ. ಇನ್ನು ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆ ಆಗಿರುವುದರಿಂದ ನವದೆಹಲಿ ರೈಲ್ವೆ ನಿಲ್ದಾಣದಿಂದ 30 ರೈಲುಗಳು ತಡವಾಗಿ ಸಂಚರಿಸಲಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ. ಅಲ್ಲದೇ ದೆಹಲಿ ಏರ್​ಪೋರ್ಟ್​ನಲ್ಲಿ ವಿಮಾನ ಸೇವೆಯ ಸಮಯದಲ್ಲೂ ಬದಲಾವಣೆ ಆಗಿದೆ, ಆದರೆ ಯಾವುದೇ ವಿಮಾನ ರದ್ದಾಗಿಲ್ಲ.

ಇನ್ನು ಆನಂದ್ ವಿಹಾರ್ ಇಂಟರ್​​ಸ್ಟೇಟ್ ಬಸ್ ಟರ್ಮಿನಲ್ (ISBT) ರಾತ್ರಿ ಆಶ್ರಯ ಮನೆಯಲ್ಲಿ ಕೆಲ ಜನರು ಆಶ್ರಯ ಪಡೆದರೆ, ಮನೆ-ಮಠ ಇಲ್ಲದ ಜನರು ತುರ್ಕಮನ್ ಗೇಟ್ ಬಳಿ ರಾತ್ರಿ ಮಲಗಿದ್ದಾರೆ.

  • Delhi: People take refuge at a night shelter near Anand Vihar Inter State Bus Terminal (ISBT). Minimum temperature of 2.5°C was recorded in the national capital, on 29th December (yesterday). pic.twitter.com/CQLGW05tQ1

ಭಾರತದ ಹವಾಮಾನ ಇಲಾಖೆಯು ಶನಿವಾರ ದೆಹಲಿಗೆ 'ರೆಡ್​​ ವಾರ್ನಿಂಗ್​' ನೀಡಿತ್ತು (ಕೆಂಪು ಬಣ್ಣವು ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಸೂಚಿಸುತ್ತದೆ). ಡಿಸೆಂಬರ್ 31 ರಿಂದ ದೆಹಲಿ ಹಾಗೂ ಅದರ ಪಕ್ಕದ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ನಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಇದೇ ವಾತಾವರಣ ಜನವರಿ 3 ರ ವರೆಗೂ ಮುಂದುವರೆಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.