ನವದೆಹಲಿ: "ನಾನು ದೇಶವನ್ನು ಉದ್ದೇಶಿಸಿ 11.45ರಿಂದ 12 ಗಂಟೆ ಸುಮಾರಿಗೆ ಮಾತನಾಡಲಿದ್ದೇನೆ. ಈ ವೇಳೆ ಅತ್ಯಂತ ಮಹತ್ವದ ವಿಚಾರವನ್ನು ನಿಮ್ಮ ಮುಂದಿಡಲಿದ್ದೇನೆ." ಮೋದಿಯ ಇದೊಂದು ಟ್ವೀಟ್ ಭಾರತೀಯರಲ್ಲಿ ಕುತೂಹಲ ಹುಟ್ಟಿಸಿತ್ತು.
ಇಂದು ಬೆಳಗ್ಗೆ 11.23ಕ್ಕೆ ಮೋದಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾಡಿದ್ದ ಟ್ವೀಟ್ ಕೆಲ ನಿಮಿಷಗಳಲ್ಲೇ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಮೋದಿ ಭಾಷಣದಲ್ಲಿರಬಹುದಾದ ಆ ಮಹತ್ವದ ವಿಚಾರ ಏನು ಎನ್ನುವ ಕುರಿತಾಗಿ ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಆ ಕ್ಷಣದಿಂದ ಮೋದಿ ಭಾಷಣ ಆರಂಭದವರೆಗೆ ಗೂಗಲ್ನಲ್ಲಿ ಯಾವ ವಿಷಯ ಹೆಚ್ಚು ಹುಡುಕಲಾಯಿತು ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಮೋದಿ ಟ್ವೀಟ್ ಬಳಿಕ ಲಕ್ಷಾಂತರ ಮಂದಿ ಸರ್ಜಿಕಲ್ ಸ್ಟ್ರೈಕ್ ಹಾಗೂ ನೋಟ್ಬ್ಯಾನ್(ಡಿಮಾನಿಟೈಸೇಷನ್) ಬಗ್ಗೆ ಗೂಗಲ್ನಲ್ಲಿ ಹೆಚ್ಚು ಹುಡುಕಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗೂಗಲ್ ಟ್ರೆಂಡ್ನಲ್ಲಿ ಸರ್ಜಿಕಲ್ ಸ್ಟ್ರೈಕ್ ಹಾಗೂ ಡಿಮಾನಿಟೈಸೇಷನ್ಗಳು ಹೆಚ್ಚು ಹುಡುಕಾಟ ನಡೆದಿದೆ ಎಂದು ಹೇಳಿದೆ. ಇದರ ಜೊತೆಗೆ ದಾವೂದ್ ಇಬ್ರಾಹಿಂ ಹಾಗೂ ಮಸೂದ್ ಅಜರ್ ಹೆಸರು ಸಹ ಕೆಲ ಹೊತ್ತು ಟ್ರೆಂಡಿಂಗ್ನಲ್ಲಿತ್ತು.