ನವದೆಹಲಿ: ತಿಲಕ್ ವಿಹಾರ್ ಪೊಲೀಸ್ ಪೋಸ್ಟ್‌ನಲ್ಲಿ ನೇಮಕಗೊಂಡಿದ್ದ ಪೇದೆಯ ಕೋವಿಡ್ -19 ವರದಿ ಪಾಸಿಟಿವ್ ಬಂದಿದ್ದು, ಅಲ್ಲಿ ನೇಮಕಗೊಂಡಿದ್ದ ಎಲ್ಲಾ 70 ಪೇದೆಗಳನ್ನು ಹೋಮ್ ಕ್ವಾರಂಟೈನ್ಗೆ ಹೋಗಲು ತಿಳಿಸಲಾಗಿದೆ.
ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಶ್ವಾಹಾ ಅವರ ಪ್ರಕಾರ, ಲೋಧಿ ಕಾಲೋನಿ ಪೊಲೀಸ್ ಠಾಣೆಯ ವಿಶೇಷ ಕೋಶದಲ್ಲಿ ನಿಯೋಜಿಸಲಾಗಿದ್ದ ಪೇದೆಯ ಕೋವಿಡ್-19ಗೆ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಉಳಿದೆಲ್ಲಾ ಸಿಬ್ಬಂದಿಯನ್ನು 14 ದಿನಗಳವರೆಗೆ ಕ್ವಾರಂಟೈನ್ ಆಗಲು ತಿಳಿಸಲಾಗಿದೆ.
ಇನ್ನೂ, ಪೇದೆ ಇತ್ತೀಚೆಗೆ ಹೆಚ್ಚು ಸಂಪರ್ಕ ಹೊಂದಿದ್ದವರ ಬಗ್ಗೆ ಪೊಲೀಸ್ ಸಿಬ್ಬಂದಿ ಖಚಿತಪಡಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ, ದೆಹಲಿಯಲ್ಲಿ ಈ ವರೆಗೂ ದಾಖಲಾಗಿದ್ದ 2156 ಕೋವಿಡ್-19 ಪ್ರಕರಣಗಳಲ್ಲಿ 47 ಸಾವುಗಳು ದಾಖಲಾಗಿವೆ.