ನವದೆಹಲಿ: ಕಡ್ಡಾಯವಾದ ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ತಬ್ಲಿಘಿ ಜಮಾತ್ ಸದಸ್ಯರನ್ನು ಮುಕ್ತವಾಗಿ ಹೋಗಲು ಅನುಮತಿಸುವಂತೆ ದೆಹಲಿ ಅಲ್ಪಸಂಖ್ಯಾತ ಆಯೋಗ ಆರೋಗ್ಯ ಸಚಿವರನ್ನು ಕೇಳಿಕೊಂಡಿದೆ.
ದೆಹಲಿ ಅಲ್ಪಸಂಖ್ಯಾತ ಆಯೋಗ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಪತ್ರ ಬರೆದಿದ್ದು, ಜನರು ಹಜರತ್ ನಿಜಾಮುದ್ದೀನ್‌ನ ಮರ್ಕಾಜ್‌ನಿಂದ ಕ್ವಾರಂಟೈನ್ ಶಿಬಿರಗಳಿಗೆ ಕರೆತಂದಿದ್ದು, ಸೋಮವಾರ 28 ದಿನಗಳು ಪೂರ್ಣಗೊಳ್ಳಲಿವೆ. ಇದು ಡಬ್ಲ್ಯುಎಚ್‌ಒ ಮಾರ್ಗಸೂಚಿಗಳ ಪ್ರಕಾರ ಕೋವಿಡ್-19 ಶಂಕಿತರು ಕಡ್ಡಾಯ ಅವಧಿಯ ದುಪ್ಪಟ್ಟು ದಿನ ಕ್ವಾರಂಟೈನ್ನಲ್ಲಿದ್ದರು.
ಸೋಂಕಿತ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ಳಲು 14 ದಿನಗಳು ಬೇಕು. ಆದರೆ ಇವರು 28 ದಿನಗಳನ್ನು ಪೂರೈಸಿದ್ದಾರೆ. ಈ ಜನರನ್ನು ಅನಗತ್ಯವಾಗಿ ಬಂಧನದಲ್ಲಿಡಲಾಗಿದೆ ಎಂದರ್ಥ. ಕೊರೊನಾ ನೆಗೆಟಿವ್ ವರದಿ ಬಂದ ನಂತರ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ಶಿಬಿರಗಳಲ್ಲಿ 28 ದಿನಗಳನ್ನು ಕಳೆದ ಮತ್ತು ಕೊರೊನ ವರದಿ ನೆಗೆಟಿವ್ ಬರುವ ಎಲ್ಲರಿಗೆ ಮನೆಗೆ ಹೋಗಲು ಅವಕಾಶ ನೀಡಬೇಕು. ಇಲ್ಲವೇ ದೆಹಲಿಯಲ್ಲಿ ಬೇರೆಲ್ಲಿಯಾದರೂ ವಾಸಿಸಲು ಅವಕಾಶ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಜಾಫ್ರುಲ್ ಇಸ್ಲಾಂ ಖಾನ್ ಮನವಿ ಮಾಡಿದ್ದಾರೆ.