ನವದೆಹಲಿ: ಕೊರೊನಾ ಅಟ್ಟಹಾಸ ದೇಶದಲ್ಲೆಡೆ ತೀವ್ರವಾಗಿದೆ. ರಾಷ್ಟ್ರ ರಾಜಧಾನಿಯಲ್ಲೂ ಕೂಡ ಸೋಂಕು ವೇಗವಾಗಿ ಹರಡುತ್ತಿದ್ದು, ಈಗ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೂ ಸೋಂಕು ದೃಢಪಟ್ಟಿದೆ.
ಸ್ವಲ್ಪ ಮಟ್ಟಿನ ಜ್ವರ ಕಾಣಿಸಿಕೊಂಡ ಕಾರಣದಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ಅವರ ವರದಿ ಪಾಸಿಟಿವ್ ಬಂದಿದೆ. ''ನಾನು ಐಸೋಲೇಷನ್ನಲ್ಲಿದ್ದು, ಸದ್ಯಕ್ಕೆ ನನಗೆ ಜ್ವರ ಸೇರಿ ಯಾವುದೇ ಅನಾರೋಗ್ಯವಿಲ್ಲ. ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನಿಮ್ಮ ಆಶೀರ್ವಾದದೊಂದಿಗೆ ನಾನು ಆದಷ್ಟು ಬೇಗ ಕೆಲಸಕ್ಕೆ ಮರಳುತ್ತೇನೆ'' ಎಂದು ದೆಹಲಿ ಡಿಸಿಎಂ ಟ್ವೀಟ್ ಮಾಡಿದ್ದಾರೆ.
ಭಾನುವಾರ ಸಿಸೋಡಿಯಾಗೆ ಜ್ವರದ ಲಕ್ಷಣಗಳಿದ್ದ ಕಾರಣದಿಂದ ಅವರು ವಿಧಾನಸಭೆಯಲ್ಲಿ ಪಾಲ್ಗೊಳ್ಳವುದು ಬೇಡ ಎಂದು ದೆಹಲಿ ಸ್ಪೀಕರ್ ರಾಮ್ ಗೋಯಲ್ ಸೂಚಿಸಿದ್ದರು.
ಇದಾದ ನಂತರ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ಐಸೋಲೇಷನ್ಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.