ನವದೆಹಲಿ: ಲಾಕ್‌ಡೌನ್ ಸಂಕಷ್ಟದ ಮಧ್ಯೆ ದೆಹಲಿ ಮೂಲದ ಆನ್‌ಲೈನ್ ಆರೋಗ್ಯ ಸಮಾಲೋಚನಾ ಕಂಪನಿಯು ತನ್ನ 170 ಉದ್ಯೋಗಿಗಳನ್ನು ಒಂದೇ ಬಾರಿಗೆ ಕೆಲಸದಿಂದ ತೆಗೆದುಹಾಕಿದೆ.
ಲಾಕ್‌ಡೌನ್ ಸಮಯದಲ್ಲಿ ಕಂಪನಿಗಳು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿಸಿದ ನಂತರ, 220 ಉದ್ಯೋಗಿಗಳು ಮಂಗಳವಾರ ಕಚೇರಿಗೆ ಹಾಜರಾದರು. ಯಾವುದೇ ಮುನ್ಸೂಚನೆ ನೀಡದೇ 170 ಉದ್ಯೋಗಿಗಳಿಗೆ ಫೈರಿಂಗ್ ಲೆಟರ್ ಹಸ್ತಾಂತರಿಸಿದೆ.
ವರದಿಗಳ ಪ್ರಕಾರ, '1 ಎಂಜಿ' ಗ್ರಾಹಕ ಆರೋಗ್ಯ ವೇದಿಕೆಯನ್ನು ನಿರ್ವಹಿಸುತ್ತದೆ. ಇದು ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಔಷಧಗಳನ್ನು ಮತ್ತು ಆರೋಗ್ಯ ಉತ್ಪನ್ನಗಳನ್ನು, ಚಾಟ್‌ನಲ್ಲಿ ಅರ್ಹ ಮತ್ತು ನೋಂದಾಯಿತ ವೈದ್ಯರನ್ನು ಸಂಪರ್ಕಿಸಲು, ಆನ್‌ಲೈನ್‌ನಲ್ಲಿ ಬುಕ್ ಲ್ಯಾಬ್ ಪರೀಕ್ಷೆಗಳನ್ನು ಮಾಡಲು ಅನುಮತಿಸುತ್ತದೆ.
ಮೇ 10 ರಂದು ಕಂಪನಿಯ ಉದ್ಯೋಗಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಬಳಿಕ ಕಂಪನಿಯು ತನ್ನ ಉದ್ಯೋಗಿಗಳಿಗೆ ರಜೆಗೆ ಹೋಗಲು ನಿರ್ದೇಶಿಸಿತು. ಹಿಂದುರಿಗಿದಾಗ ಅವರಲ್ಲಿ 170 ಜನರನ್ನು ಕೆಲಸದಿಂದ ತೆಗೆದುಹಾಕಿದೆ.