ನವದೆಹಲಿ: ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಬಳಸಿ ಗಣೇಶ ವಿಗ್ರಹಗಳನ್ನು ನಿರ್ಮಿಸುವುದರ ಮೇಲೆ ಹೇರಲಾಗಿದ್ದ ನಿಷೇಧವನ್ನು ಒಂದು ವರ್ಷದವರೆಗೆ ತಡೆಹಿಡಿಯಲಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಪ್ರಕಟಿಸಿದ್ದಾರೆ.
-
गणेश मूर्ति के लिए plaster of paris पर पाबन्दी का निर्णय १ साल के लिए स्थगित कर दिया गया है। इससे इस साल जिनकी मूर्तियां बनी है उनको नुकसान नहीं होगा।@PIB_India @PIBMumbai @DDNewsHindi
— Prakash Javadekar (@PrakashJavdekar) May 22, 2020 " class="align-text-top noRightClick twitterSection" data="
">गणेश मूर्ति के लिए plaster of paris पर पाबन्दी का निर्णय १ साल के लिए स्थगित कर दिया गया है। इससे इस साल जिनकी मूर्तियां बनी है उनको नुकसान नहीं होगा।@PIB_India @PIBMumbai @DDNewsHindi
— Prakash Javadekar (@PrakashJavdekar) May 22, 2020गणेश मूर्ति के लिए plaster of paris पर पाबन्दी का निर्णय १ साल के लिए स्थगित कर दिया गया है। इससे इस साल जिनकी मूर्तियां बनी है उनको नुकसान नहीं होगा।@PIB_India @PIBMumbai @DDNewsHindi
— Prakash Javadekar (@PrakashJavdekar) May 22, 2020
ಕಳೆದ ಬಾರಿ ಗಣೇಶ ಚತುರ್ಥಿಗೆ ಕೆಲ ತಿಂಗಳುಗಳಿದ್ದಾಗ ಪರಿಸರ ಮಾಲಿನ್ಯ ತಗ್ಗಿಸುವ ಸಲುವಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ ವಿಗ್ರಹಗಳನ್ನು ನಿರ್ಮಿಸಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್, ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿತ್ತು. ಹಾಗೆಯೇ ವಿಗ್ರಹಗಳನ್ನು ಪರಿಸರ ಸ್ನೇಹಿ, ಜೈವಿಕ ವಿಘಟನೀಯ ವಸ್ತುಗಳಿಂದ ಮಾತ್ರ ತಯಾರಿಸಬಹುದು ಎಂದು ಮಂಡಳಿ ತಿಳಿಸಿತ್ತು.
ಈ ಬಾರಿ ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಲಕ್ಷಾಂತರ ಕುಶಲಕರ್ಮಿಗಳ ಜೀವನ ಬೀದಿಗೆ ಬಿದ್ದಿದೆ. ಇನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ವಿಗ್ರಹಗಳನ್ನು ತಯಾರಿಸುವ ಕುಶಲಕರ್ಮಿಗಳಿಗೆ ಈ ನಿಷೇಧದಿಂದ ಇನ್ನಷ್ಟು ಸಂಕಷ್ಟ ಎದುರಾಗಿ ಜೀವನೋಪಾಯವೇ ಇಲ್ಲದಂತಾಗುತ್ತದೆ. ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವರು, “ಈ ವರ್ಷದ ಗಣೇಶ ಚತುರ್ಥಿಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ವಿಗ್ರಹಗಳನ್ನು ತಯಾರಿಸಲು ಶ್ರಮಿಸುತ್ತಿರುವ ಕುಶಲಕರ್ಮಿಗಳು ನಷ್ಟವನ್ನು ಅನುಭವಿಸದಂತೆ ನೋಡಿಕೊಳ್ಳುವ ದೃಷ್ಟಿಯಿಂದ ನಿಷೇಧ ನಿರ್ಧಾರವನ್ನು ತಡೆಹಿಡಿಯಲಾಗಿದೆ" ಎಂದು ತಿಳಿಸಿದ್ದಾರೆ.