ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ತನಗೆ ವಿಧಿಸಿರುವ ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಇದೇ 17ಕ್ಕೆ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಆರೋಪಿ ಸಲ್ಲಿಸಿರುವ ಮನವಿ ಆಲಿಸಲಿದೆ. ಇದಕ್ಕೂ ಮೊದಲು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ತಿರಸ್ಕರಿಸಿತ್ತು.
-
Review petition filed by Akshay Kumar Singh, one of the convicts in the December 2012 Delhi gang rape case to be heard by a three-judge bench of Supreme Court, headed by Chief Justice of India Sharad Arvind Bobde, on December 17,Tuesday. pic.twitter.com/q1YaUih6E9
— ANI (@ANI) December 14, 2019 " class="align-text-top noRightClick twitterSection" data="
">Review petition filed by Akshay Kumar Singh, one of the convicts in the December 2012 Delhi gang rape case to be heard by a three-judge bench of Supreme Court, headed by Chief Justice of India Sharad Arvind Bobde, on December 17,Tuesday. pic.twitter.com/q1YaUih6E9
— ANI (@ANI) December 14, 2019Review petition filed by Akshay Kumar Singh, one of the convicts in the December 2012 Delhi gang rape case to be heard by a three-judge bench of Supreme Court, headed by Chief Justice of India Sharad Arvind Bobde, on December 17,Tuesday. pic.twitter.com/q1YaUih6E9
— ANI (@ANI) December 14, 2019
ಇದನ್ನೂ ಓದಿ...ದೆಹಲಿಯ ವಿಷವಾಯುವೇ ಕೊಲ್ಲುತ್ತಿದೆ, ಮರಣದಂಡನೆ ಏಕೆ? ಸುಪ್ರೀಂಕೋರ್ಟ್‌ಗೆ ನಿರ್ಭಯ ಅಪರಾಧಿಯ ಅರ್ಜಿ!
ಪ್ರಕರಣ ಹಿನ್ನೆಲೆ ಏನು?
2012ರ ಡಿಸೆಂಬರ್ 16ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಹಿಂಸಿಸಿ ರಸ್ತೆ ಪಕ್ಕ ಎಸೆದು ಹೋಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಂತ್ರಸ್ತೆ ಸಾವನ್ನಪ್ಪಿದ್ದರು. ನಿರ್ಭಯಾ ಪ್ರಕರಣದ ಈ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಒಂದು ವರ್ಷದ ಹಿಂದೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಹೀಗಾಗಿ ಮರಣ ದಂಡನೆ ನೀಡಬಾರದೆಂದು ಕೋರಿ ಅಪರಾಧಿಗಳು ಕ್ಷಮಾದಾನ ಅರ್ಜಿ ಸಲ್ಲಿಸುತ್ತಾ ಬಂದಿದ್ದರು. ಕೋರ್ಟ್ ಅವುಗಳನ್ನು ತಿರಸ್ಕರಿಸಿದೆ. ಈ ಪ್ರಕರಕರಣದ ಬಾಲಾಪರಾಧಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ಆತನನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.