ETV Bharat / bharat

''ಡೆತ್ ಕ್ಯಾಪ್''​ ಸೇವಿಸಿ 6 ಮಂದಿ ಸಾವು: 18 ಮಂದಿ ಅನಾರೋಗ್ಯ - ಮೇಘಾಲಯದಲ್ಲಿ ಅಣಬೆ

ಕಾಡುಗಳಲ್ಲಿ ಸಿಗುವ ವಿಷಕಾರಿ ಅಣಬೆಗಳನ್ನು ತಿಂದು 6 ಮಂದಿ ಸಾವನ್ನಪ್ಪಿ, 18 ಮಂದಿ ಅನಾರೋಗ್ಯಕ್ಕೆ ಈಡಾದ ಘಟನೆ ಮೇಘಾಲಯದ ಕುಗ್ರಾಮವೊಂದರಲ್ಲಿ ನಡೆದಿದೆ.

mushroom
ಹಣಬೆಗಳು
author img

By

Published : May 9, 2020, 3:50 PM IST

ಶಿಲ್ಲಾಂಗ್​ (ಮೇಘಾಲಯ): ವಿಷಕಾರಿ ಅಣಬೆಗಳನ್ನು ಸೇವಿಸಿ ಆರು ಮಂದಿ ಮೃತಪಟ್ಟಿರುವ ಘಟನೆ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ನಡೆದಿದೆ. ಈ ಅಣಬೆಗಳನ್ನು ವೈಜ್ಞಾನಿಕವಾಗಿ ಅಮನಿಟಾ ಫಲ್ಲೋಡೆಸ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಡೆತ್​ ಕ್ಯಾಪ್​ ಎಂಬ ಹೆಸರೂ ಇದೆ.

ಭಾರತ- ಬಾಂಗ್ಲಾದೇಶ ಗಡಿಯಲ್ಲಿರುವ ಅಮ್ಲಾರೆಮ್​ ಉಪ ವಿಭಾಗಕ್ಕೆ ಸೇರಿದ ಲಮಿನ್​ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಬಾಲಕಿ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಅಣಬೆಗಳನ್ನು ಹತ್ತಿರದ ಕಾಡಿನಿಂದ ಸಂಗ್ರಹಿಸಲಾಗಿದ್ದು, ಅವುಗಳನ್ನು ಅಡುಗೆಯಲ್ಲಿ ಬಳಸಿ ಸೇವಿಸಿದ ನಂತರ ಅವರು ಮೃತಪಟ್ಟಿದ್ದಾರೆ.

ಒಟ್ಟು ಮೂರು ಕುಟುಂಬಗಳ 18 ಮಂದಿ ಅಣಬೆಗಳನ್ನು ಸೇವಿಸಿ ಅನಾರೋಗ್ಯಕ್ಕೆ ಈಡಾಗಿದ್ದಾರೆ. ನಂತರ ಅವರಲ್ಲಿ ವಾಂತಿ, ತಲೆನೋವು, ಮೂರ್ಛೆಯ ಲಕ್ಷಣಗಳು ಕಂಡುಬಂದಿವೆ ಎಂದು ಹಿರಿಯ ವೈದ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಓರ್ವ ಗರ್ಭಿಣಿ ಅನಾರೋಗ್ಯಕ್ಕೆ ಈಡಾಗಿದ್ದು, ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ಎಷ್ಟು ಅಣಬೆ ಸೇವಿಸಿದ್ದಾರೆಂಬುದರ ಆಧಾರದ ಮೇಲೆ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕಡಿಮೆ ಅಣಬೆ ಸೇವಿಸಿದ್ದ, ಓರ್ವ ವ್ಯಕ್ತಿಯ ಮೇಲೆ ಯಾವುದೇ ಅನಾರೋಗ್ಯ ಕಂಡುಬಂದಿಲ್ಲ

ಮೂವರಿಗೆ ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಿಗೆ ಈಶಾನ್ಯ ಇಂದಿರಾಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ಕೇಂದ್ರದಲ್ಲಿ, ಮತ್ತೊಬ್ಬ ವ್ಯಕ್ತಿಗೆ ವುಡ್​ ಲ್ಯಾಂಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಣಬೆಗಳನ್ನು ಸೇವಿಸಿದ ನಂತರ ಅದು ನೇರವಾಗಿ ಲಿವರ್​ ಮೇಲೆ ಪರಿಣಾಮ ಬೀರಲಿದೆ ಎಂದು ಮೆಡಿಕಲ್​ ಇನ್​ಸ್ಟಿಟ್ಯೂಷನ್​​ನ ಆರೋಗ್ಯ ಸೇವೆಗಳ ನಿರ್ದೇಶಕ ಡಾ. ಅಮನ್​ ಅಭಿಪ್ರಾಯಪಟ್ಟಿದ್ದಾರೆ. ಕಾಡಿನಲ್ಲಿ ಸಿಗುವ ಇಂತಹ ಅಣಬೆಗಳನ್ನು ಸೇವಿಸಬಾರದೆಂದು ಆರೋಗ್ಯ ಇಲಾಖೆ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.