ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮುಂದುವರೆದ ಕಾಳ್ಗಿಚ್ಚಿನಿಂದಾಗಿ 25 ಜನ ಸಾವನಪ್ಪಿದ್ದು, 2,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಇದು ಇಲ್ಲಿಯವರೆಗೆ ಯುಎಸ್ ರಾಜ್ಯವಾದ ಮೇರಿಲ್ಯಾಂಡ್‌ಗಿಂತ ಎರಡು ಪಟ್ಟು ಹೆಚ್ಚು ಪ್ರದೇಶವನ್ನು ಸುಟ್ಟುಹಾಕಿದೆ.
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಳ್ಗಿಚ್ಚು ಪ್ರಾರಂಭವಾಗಿದ್ದು, ನ್ಯೂ ಸೌತ್ ವೇಲ್ಸ್‌ನಾದ್ಯಂತ 135 ಕ್ಕೂ ಹೆಚ್ಚು ಭಾಗಗಳಲ್ಲಿ ಬೆಂಕಿ ಇನ್ನೂ ಹೊತ್ತಿ ಉರಿಯುತ್ತಿದೆ. ಇನ್ನು ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಸೋಮವಾರದಂದು ಕೆಟ್ಟ ಗಾಳಿಯ ಪ್ರಮಾಣ ಜಾಸ್ತಿ ಆಗಿತ್ತು. ನಗರವನ್ನು ದಟ್ಟ ಹೊಗೆ ಉಸಿರುಗಟ್ಟಿಸುವುದರಿಂದ ಮನೆಯಲ್ಲಿಯೇ ಇರಬೇಕೆಂದು ವಿಪತ್ತುಗಳಿಗೆ ದೇಶದ ಪ್ರತಿಕ್ರಿಯೆಯನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಗೃಹ ವ್ಯವಹಾರಗಳ ಇಲಾಖೆ ಸೂಚಿಸಿದೆ.
ಕಾಳ್ಗಿಚ್ಚಿಗೆ ಕಾರಣ: ದಕ್ಷಿಣ ಗೋಳಾರ್ಧದ ಬೇಸಿಗೆಯಲ್ಲಿ ಕಾಳ್ಗಿಚ್ಚು ಸಾಮಾನ್ಯವಾಗಿದ್ದು, ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿದೆ. ವಿಜ್ಞಾನಿಗಳ ಪ್ರಕಾರ ಮಾನವ ನಿರ್ಮಿತ ಜಾಗತಿಕ ತಾಪಮಾನವು ಇದಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಒಣ ಮರಗಳು ಮತ್ತು ಬಲವಾದ ಗಾಳಿಯಂತಹ ಅಂಶಗಳು ಸಹ ಇದನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಇದನ್ನು ಆಸ್ಟ್ರೇಲಿಯಾದ ಗ್ಯಾಲಪಗೋಸ್ ದ್ವೀಪಗಳು ಎಂದು ವಿವರಿಸಲಾಗಿದೆ ಮತ್ತು ಇದು ದೇಶದ ಅತ್ಯಂತ ಅಳಿವಿನಂಚಿನಲ್ಲಿರುವ ಕೆಲವು ಜೀವಿಗಳಿಗೆ ಆಶ್ರಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿನಾಶಕಾರಿ ಕಾಳ್ಗಿಚ್ಚು, ದ್ವೀಪದ ಕೆಲವು ವಿಶಿಷ್ಟ ಪ್ರಾಣಿಗಳನ್ನು ಸಂಪೂರ್ಣವಾಗಿ ನಾಶಗೊಳಿಸುವ ಎಚ್ಚರಿಕೆ ನೀಡಿದೆ. ಇನ್ನು ಬೆಂಕಿಯಲ್ಲಿ ಸಾವಿರಾರು ಕೋಲಾಗಳು ಮತ್ತು ಕಾಂಗರೂಗಳು ಸಾವನ್ನಪ್ಪಿದ್ದು, ಇಲಿಯಂತಹ ಮಾರ್ಸ್ಪಿಯಲ್ ಪ್ರಭೇದದ ಯಾವುದೇ ಜೀವಿ ಬದುಕುಳಿದಿಲ್ಲ ಎನ್ನುವ ಶಂಕೆ ಕೂಡಾ ವ್ಯಕ್ತವಾಗಿದೆ. ಅಂತೆಯೇ, ಹೊಳಪುಳ್ಳ ಕಪ್ಪು- ಕೋಕಾಟೂಗಳ ವಿಶಿಷ್ಟ ಹಿಂಡುಗಳಿಗೂ ಸಹ ಕಾಳ್ಗಿಚ್ಚು ಮಾರಕವಾಗಿ ಪರಿಣಮಿಸಿದೆ.
![Deadly inferno batters Australia](https://etvbharatimages.akamaized.net/etvbharat/prod-images/5620675_aaaa.png)
ದಕ್ಷಿಣ ಆಸ್ಟ್ರೇಲಿಯಾ ರಾಜ್ಯದ ಕರಾವಳಿಯಲ್ಲಿರುವ ಕಾಂಗರೂ ದ್ವೀಪವು ರೋಡ್ ದ್ವೀಪಕ್ಕಿಂತ ಸುಮಾರು ಶೇ50 ರಷ್ಟು ದೊಡ್ಡದಾಗಿದೆ ಮತ್ತು 4,500 ಜನರಿಗೆ ನೆಲೆಯಾಗಿದೆ. ಅಲ್ಲದೇ ಅಭಿವೃದ್ಧಿ ಹೊಂದುತ್ತಿರುವ ಪರಿಸರ ಪ್ರವಾಸೋದ್ಯಮ ಕೂಡಾ ಆಗಿತ್ತು. ಆದರೆ ಕಾಳ್ಗಿಚ್ಚು ದ್ವೀಪದ ಮೂರನೇ ಒಂದು ಭಾಗದಷ್ಟು ಸುಟ್ಟುಹಾಕಿವೆ.
ಸಮಸ್ಯೆ ಸರಿಪಡಿಸಲು ಸರ್ಕಾರದ ಪ್ರಯತ್ನ: ಇನ್ನೂ ಕಾಳ್ಗಿಚ್ಚಿನಿಂದ ಸಮುದಾಯಗಳು ಚೇತರಿಸಿಕೊಳ್ಳಲು ಹಣವನ್ನು ಪಾವತಿಸಲು ಸಿದ್ಧವಾಗಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ಸೋಮವಾರ ಘೋಷಿಸಿದೆ. ಈಗಾಗಲೇ ಭರವಸೆ ನೀಡಲಾದ ಹತ್ತಾರು ಮಿಲಿಯನ್ ಡಾಲರ್‌ಗಳ ಜೊತೆಗೆ ಚೇತರಿಕೆಯ ಪ್ರಯತ್ನಕ್ಕೆ ಸರ್ಕಾರವು ಹೆಚ್ಚುವರಿ 2 ಬಿಲಿಯನ್ ಆಸ್ಟ್ರೇಲಿಯಾ ಡಾಲರ್‌ಗಳನ್ನು (4 1.4 ಬಿಲಿಯನ್) ನೀಡಲು ಸಿದ್ದವಾಗಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಭೀಕರ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಸಮುದಾಯಗಳಿಗೆ ಆಹಾರ, ಇಂಧನ ಮತ್ತು ನೀರನ್ನು ಒದಗಿಸಲು ಮಿಲಿಟರಿ ಪ್ರಯತ್ನಿಸುತ್ತಿದೆ ಮತ್ತು ರಸ್ತೆಗಳನ್ನು ಪುನಃ ತೆರೆಯಲು ಮತ್ತು ಸ್ಥಳಾಂತರಿಸುವ ಕೇಂದ್ರಗಳನ್ನು ಮರು ಸರಬರಾಜು ಮಾಡಲು ಇಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
![Deadly inferno batters Australia](https://etvbharatimages.akamaized.net/etvbharat/prod-images/5620675_aaaa.png)
ತಜ್ಞರು ಹೇಳುವ ಪ್ರಕಾರ, ಮಾರಿಸನ್ ಘೋಷಿಸಿದ ಪರಿಹಾರ ನಿಧಿಗಳು ಉಂಟಾಗಿರುವ ಸಮಸ್ಯೆಗೆ ಹೋಲಿಸಿದರೆ "ಸಾಗರದಲ್ಲಿ ಒಂದು ಹನಿ". ಮಾನವ ನಿರ್ಮಿತ ಮಾಲಿನ್ಯವು ಈ ಹವಾಮಾನ ಬಿಕ್ಕಟ್ಟನ್ನು ಉಂಟುಮಾಡಿದ್ದು, ಇದು ದೇಶಾದ್ಯಂತ ಈ ತೀವ್ರ ಬೆಂಕಿಯ ಪರಿಸ್ಥಿತಿಗಳನ್ನು ಸೃಷ್ಟಿಸಿದೆ ಎಂದು ಗ್ರೀನ್‌ಪೀಸ್ ಆಸ್ಟ್ರೇಲಿಯಾ ಪೆಸಿಫಿಕ್ ಅಭಿಯಾನದ ಮುಖ್ಯಸ್ಥ ಜೇಮೀ ಹ್ಯಾನ್ಸನ್ ಹೇಳಿದ್ದಾರೆ.