ಚಂಡೀಗಢ: ಗೆಳೆಯನೊಂದಿಗೆ ಹೋಟೆಲ್ ರೂಂನಲ್ಲಿ ವಾಸವಾಗಿದ್ದ 29 ವರ್ಷದ ಯುವತಿಯೊಬ್ಬಳು ಮೃತದೇಹ ಇದೀಗ ಪತ್ತೆಯಾಗಿದ್ದು, ತಲೆ ಮರೆಸಿಕೊಂಡಿರುವ ಲವರ್ಗಾಗಿ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ.
29 ವರ್ಷದ ಮಹಿಳೆ ಸರ್ಭಜಿತ್ ಕೌರ್ ಚಂಡೀಗಢನ ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ನಲ್ಲಿ ತನ್ನ ಗೆಳೆಯ ಮನಿದರ್ ಸಿಂಗ್ನೊಂದಿಗೆ ವಾಸವಾಗಿದ್ದರು. ಈ ರೂಂನಲ್ಲಿ ಉಳಿದುಕೊಂಡಿದ್ದ ವೇಳೆ, ಇವರು ಹೋಟೆಲ್ನಿಂದ ಯಾವುದೇ ರೀತಿಯ ಆಹಾರ ಆರ್ಡರ್ ಮಾಡಿರಲಿಲ್ಲ. ಜತೆಗೆ ಮರುದಿನ ರೂಂ ಚೆಕ್ಔಟ್ ಕೂಡ ಮಾಡಿರಲಿಲ್ಲ. ಹೀಗಾಗಿ ಸಿಬ್ಬಂದಿ ರೂಂ ಲಾಕ್ ಓಪನ್ ಮಾಡಿ ನೋಡಿದಾಗ ಮಹಿಳೆ ಮೃತದೇಹ ಸಿಕ್ಕಿದೆ. ಆದರೆ ವ್ಯಕ್ತಿ ಮಾತ್ರ ಅಲ್ಲಿಂದ ಪರಾರಿಯಾಗಿದ್ದಾನೆ.
ಇನ್ನು ಹೋಟೆಲ್ ಸಿಸಿಟಿವಿ ದೃಶ್ಯಾವಳಿ ಪ್ರಕಾರ ಮನಿದರ್ ಸಿಂಗ್ ಡಿಸೆಂಬರ್ 30ರ ರಾತ್ರಿ ರೂಂನಿಂದ ಹೊರಗಡೆ ಹೋಗಿರುವ ದೃಶ್ಯ ಸೆರೆಯಾಗಿದೆ. ಈ ಜೋಡಿ ಮೇಲಿಂದ ಮೇಲೆ ರೂಂ ಬುಕ್ ಮಾಡ್ತಿದ್ದರು ಎಂಬ ಮಾಹಿತಿ ಸಹ ಹೋಟೆಲ್ ಮಾಲೀಕರಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿಸಿದ್ದು, ವ್ಯಕ್ತಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.