ETV Bharat / bharat

ಕರಾಚಿಯಲ್ಲಿ ದಾವೂದ್: ನಿಷೇಧಿತ ಭಯೋತ್ಪಾದಕ ಸಂಘಟನೆ ಹೊಸಪಟ್ಟಿ ಒಪ್ಪಿಕೊಂಡ ಪಾಕ್​

ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಎಟಿಎಫ್)ಯ ಕಪ್ಪು ಪಟ್ಟಿಯಿಂದ ಹೊರಗುಳಿಯುವ ಉದ್ದೇಶದಿಂದ ಭಾರತಕ್ಕೆ ಅಗತ್ಯವಾಗಿ ಬೇಕಾಗಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕರಾವಳಿ ನಗರ ಕರಾಚಿಯಲ್ಲಿ ವಾಸಿಸುತ್ತಿರುವುದನ್ನು ಪಾಕಿಸ್ತಾನ ಅಂತಿಮವಾಗಿ ಒಪ್ಪಿಕೊಂಡಿದೆ‌.

ಕರಾಚಿಯಲ್ಲಿ ದಾವುದ್
ಕರಾಚಿಯಲ್ಲಿ ದಾವುದ್
author img

By

Published : Aug 23, 2020, 9:18 AM IST

ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಎಟಿಎಫ್)ಯ ಕಪ್ಪು ಪಟ್ಟಿಯಿಂದ ಹೊರಗುಳಿಯುವ ಉದ್ದೇಶದಿಂದ ಭಾರತಕ್ಕೆ ಅಗತ್ಯವಾಗಿ ಬೇಕಾಗಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕರಾವಳಿ ನಗರ ಕರಾಚಿಯಲ್ಲಿ ವಾಸಿಸುತ್ತಿರುವುದನ್ನು ಪಾಕಿಸ್ತಾನ ಅಂತಿಮವಾಗಿ ಒಪ್ಪಿಕೊಂಡಿದೆ‌. ಅಲ್ಲದೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿದ್ದ 88 ಭಯೋತ್ಪಾದಕರನ್ನು ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ತಿಳಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ‌.

ಪಾಕಿಸ್ತಾನ- ಅಫ್ಘಾನ್ ಗಡಿ ಪ್ರದೇಶಗಳಲ್ಲಿ ಅಡಗಿರುವ ಎಲ್ಲಾ ಉಗ್ರ ನಾಯಕರು ಮತ್ತು ನಿಷ್ಕ್ರಿಯ ತೆಹ್ರಿಕ್​ ಎ ತಾಲಿಬಾನ್ ಪಾಕಿಸ್ತಾನದ ಟಿಟಿಪಿ ಸದಸ್ಯರ ಮೇಲೆ ಪಾಕಿಸ್ತಾನ ಸಂಪೂರ್ಣ ನಿಷೇಧ ಹೇರಿದೆ ಎಂದು ದಿ ನ್ಯೂಸ್ ಇಂಟರ್​ನ್ಯಾಷನಲ್ ವರದಿ ಮಾಡಿದೆ‌. ಜಾಮಾತ್ -ಉದ್ - ದಾವಾದ ಹಫೀಸ್ ಸೈಯದ್ ಅಹಮದ್, ಜೈಷ್-ಎ-ಮಹಮದ್​ನ ಮಹಮದ್ ಮಸೂದ್ ಅಜರ್, ಮುಲ್ಲ ಪಜುಲ್ಲಾ( ಅಲಿಯಾಸ್ ಮುಲ್ಲಾ ರೇಡಿಯೊ), ಜಕಿಯೂರ್ ರೆಹಮಾನ್ ಲಕ್ವಿ, ಮಹಮದ್ ಯಾಹಿಯಾ ಮುಜಾಹಿದ್, ಅಬ್ದುಲ್ ಹಕೀಮ್ ಮುರಾದ್, ಇಂಟರ್ ಪೋಲ್​ಗೆ ಬೇಕಾಗಿದ್ದ ನೂರ್ಬನಾಲ್ ಫಹೇಮ್, ಉಜ್ಬೇಕಿಸ್ತಾನ ವಿಮೋಚನಾ ಚಳವಳಿಯ ಫಜಲ್ ರಹೀಮ್, ತಾಲಿಬಾನ್ ನಾಯಕರಾದ ಜಲಾಲುದ್ದೀನ್ ಹಕ್ಕಾನಿ, ಖಲೀಲ್ ಅಹಮದ್ ಹಕ್ಕಾನಿ, ಯಾಹ್ಯಾ ಹಕ್ಕಾನಿ, ಭಾರತದ ಮಹಾರಾಷ್ಟ್ರ ಮೂಲದ ದಾವೂದ್ ಇಬ್ರಾಹಿಂ ಹಾಗೂ ಅವನ ಸಹಚರರರು ನಿಷೇಧಕ್ಕೆ ಒಳಗಾಗಿದ್ದಾರೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 250 ಜನರ ಸಾವಿಗೆ ಕಾರಣನಾದ ದಾವೂದ್ ಇಬ್ರಾಹಿಂನನ್ನು ಹಸ್ತಾಂತರಿಸಬೇಕೆಂದು ಭಾರತ ಬಹುಕಾಲದಿಂದ ಪ್ರಯತ್ನಿಸುತ್ತಿದೆ. ಈ ಮಧ್ಯೆ 2008ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಸೂತ್ರಧಾರಿಯೆಂದು ಭಾರತದಿಂದ ಗುರುತಿಸಲ್ಪಟ್ಟ ಲಖ್ವಿಯ ಹೆಸರು ಈ ಪಟ್ಟಿಯಲ್ಲಿ ಇರುವುದು ಗಮನಾರ್ಹ.

ಪ್ಯಾರಿಸ್ ಮೂಲದ ಎಫ್ಎಟಿಎಫ್ ಪಾಕಿಸ್ತಾನವನ್ನು ಗ್ರೆ(GREY) ಪಟ್ಟಿಗೆ ಸೇರಿಸಿದ್ದರೂ, ಅದರ ನೆಲದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಭಯೋತ್ಪಾದಕರ ವಿರುದ್ಧ 2019ರ ಒಳಗೆ ಕ್ರಿಯಾ ಯೋಜನೆ ರೂಪಿಸಲು ಗಡುವು ನೀಡಿದ್ದರೂ, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿತ್ತು.

ಜಾಗತಿಕ ಹಣ ವರ್ಗಾವಣೆ, ಭಯೋತ್ಪಾದಕ ಹಣಕಾಸು ಕಾವಲುಗಾರನಾಗಿ, ಎಫ್ಎಟಿಎಫ್ ಅಂತಾರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಈ ಸಂಸ್ಥೆ ಕಾನೂನು ಬಾಹಿರ ಚಟುವಟಿಕೆಗಳನ್ನು ಹಾಗೂ ಅವುಗಳಿಂದ ಸಮಾಜಕ್ಕೆ ಉಂಟಾಗುವ ಹಾನಿಯನ್ನು ಹತ್ತಿಕ್ಕುವ ಗುರಿಯನ್ನು ಹೊಂದಿದೆ. ಈ ವಲಯದಲ್ಲಿ ರಾಷ್ಟ್ರೀಯ ಶಾಸಕಾಂಗ ಹಾಗೂ ನಿಯಂತ್ರಕ ಸುಧಾರಣೆಗಳನ್ನು ತರಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೃಷ್ಟಿಸಲು ಎಫ್ಎಟಿಎಫ್ ಕಾರ್ಯನಿರ್ವಹಿಸುತ್ತಿದೆ‌.

200ಕ್ಕೂ ಹೆಚ್ಚು ದೇಶಗಳನ್ನೊಳಗೊಂಡ ಎಫ್ಎಟಿಎಫ್ ತನ್ನ ಕಾನೂನು ಪರಿಧಿಯೊಳಗೆ ಶಿಫಾರಸ್ಸುಗಳನ್ನು ಮತ್ತು ಮಾನದಂಡಗಳನ್ನು ಅಭಿವೃದ್ಧಿ ಪಡಿಸಿದ್ದು, ಇದು ಸಂಘಟಿತ ಅಪರಾಧ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಹತ್ತಿಕ್ಕುವ ಜಾಗತಿಕ ಪ್ರತಿಕ್ರಿಯೆಗೆ ಸಹಕಾರಿಯಾಗಿದೆ. ಅಕ್ರಮ ಮಾದಕ ದ್ರವ್ಯ, ಮಾನವ ಕಳ್ಳ ಸಾಗಣೆ ಹಾಗೂ ಇತರ ಅಪರಾಧಗಳ ತನಿಖೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಈ ಸಂಸ್ಥೆ ಸಹಾಯ ಹಸ್ತ ನೀಡುತ್ತಿದೆ‌. ಹಾಗೆಯೇ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಗೆ ಧನ ಸಹಾಯ ನೀಡುವುದನ್ನು ನಿಲ್ಲಿಸಲು ಎಫ್ಎಟಿಎಫ್ ಮಾರ್ಗದರ್ಶನ ನೀಡುತ್ತದೆ.

ಎಫ್ಎಟಿಎಫ್ ಈ ಎಲ್ಲಾ ಕಾರ್ಯಗಳೊಂದಿಗೆ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ತಂತ್ರಗಳನ್ನು ಕೂಡ ಪರಿಶೀಲಿಸುತ್ತದೆ. ಇದರೊಂದಿಗೆ ವರ್ಚುವಲ್ ಅಸ್ತಿ ನಿಯಂತ್ರಣದಂತಹ ಹೊಸ ಅಪಾಯಗಳನ್ನು ಎದುರಿಸಲು ಬೇಕಾದ ಮಾನದಂಡಗಳನ್ನು ಬಲಪಡಿಸುತ್ತದೆ. ಇತ್ತೀಚಿನ ಕ್ರಿಪ್ಟೊ ಕರೆನ್ಸಿ ಜನಪ್ರಿಯತೆಯೊಂದಿಗೆ ಈ ಪ್ರತೀತಿ ಹೆಚ್ಚಾಗುತ್ತಿದೆ. ಸದಸ್ಯ ದೇಶಗಳು ಈ ಎಲ್ಲಾ ಮಾನದಂಡಗಳನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಎಫ್ಎಟಿಎಫ್ ಅವುಗಳನ್ನು ಮೇಲ್ವಿಚಾರಣೆ ಮಾಡುತ್ತದೆ‌. ಮಾನದಂಡಗಳನ್ನು ಪಾಲಿಸದ ದೇಶಗಳ ಬಗ್ಗೆ ಅದು ಕಣ್ಣಿಡುತ್ತದೆ.

ಪಾಕಿಸ್ತಾನದ ಸ್ವ-ನಿಯಂತ್ರಕ ಸಂಸ್ಥೆ ಅಥವಾ ಎಸ್ಆರ್​​ಒ ಅಡಿಯಲ್ಲಿ ಒಂದು ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ನಿಷ್ಕ್ರಿಯ ಟಿಟಿಪಿಯ ನಾಯಕತ್ವ ಹಾಗು ಲಷ್ಕರ್-ಇ-ತೋಯಿಬಾ, ಜೈಷ್ ಮಹಮದ್, ಲಷ್ಕರ್-ಎ- ಜಾಂಗ್ವ, ಟಿಟಿಪಿಯ ತಾರಿಕ್-ಗೀದಾರ್, ಹರಕತುಲ್-ಮುಜಾಹಿದ್ದೋನ್, ಅಲ್ರಷೀದ್ ಟ್ರಸ್ಟ್, ಅಲ್ ಅಕ್ತರ್ ಟ್ರಸ್ಟ್, ತಾಂಜಿಮ್-ಜೈಷ್-ಅಲ್-ಮೊಹಜರಿನ್-ಅನ್ಸಾರ್, ಜಮಾತ್-ಉಲ್-ಅಹರಾರ್, ತಾಂಜಿಮ್-ಖುತ್ಬಾ, ಇಮಾಮ್-ಬುಕಾರಿ, ಲಾಹೊರ್ ನ ರಬಿತಾ ಟ್ರಸ್ಟ್, ರಿವೈವಲ್ ಆಫ್ ಇಸ್ಲಾಮಿಕ್ ಹೆರಿಟೇಜ್ ಸೊಸೈಟಿ ಆಫ್ ಪಾಕಿಸ್ತಾನ್, ಇಸ್ಲಮಾಬಾದ್​ನ ಅಲ್-ಹರ್ಮೈನ್ ಫೌಂಡೇಶನ್, ಹರ್ಕತ್ ಜಿಹಾದ್ ಅಲ್ ಇಸ್ಲಾಮಿ, ಇಸ್ಲಾಮಿ ಜಿಹಾದಿ ಗ್ರೂಪ್, ಉಜ್ಬೇಕಿಸ್ತಾನದ ಇಸ್ಲಾಮಿ ತೆಹರಿಕ್, ಇರಾಕ್​ನ ದಾಶ್, ರಷ್ಯಾದ ವಿರುದ್ದ ಹೋರಾಡುತ್ತಿರುವ ಎಮಿರೆಟ್ಸ್ ಆಫ್​ ತಾಂಜಿಮ್ ಕಾಫ್ ಕಾಜ್, ಇಸ್ಲಾಮಿಕ್ ಫ್ರೀಡಮ್ ಮೂವ್​ಮೆಂಟ್ ಭಯೋತ್ಪಾದನಾ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಈ ಭಯೋತ್ಪಾದಕ ಸಂಘಟನೆ ಹಾಗೂ ವ್ಯಕ್ತಿಗಳ ಮೇಲಿನ ನಿಷೇಧವನ್ನು ಪಾಕಿಸ್ತಾನ ಸರ್ಕಾರ ಅಂಗೀಕರಿಸಿದೆ ಎಂದು ಮಾಧ್ಯಮ ವರದಿ ಉಲ್ಲೇಖಿಸಿದೆ‌.

ಪಾಕಿಸ್ತಾನ ವಿದೇಶಾಂಗ ಕಚೇರಿಯನ್ನು ಉಲ್ಲೇಖಿಸಿ ಮಾಡಲಾದ ಈ ವರದಿಯಲ್ಲಿ, ಇದು ಯುಎನ್ಎಸ್​ಸಿ ತಾಲಿಬಾನ್ ನಿರ್ಬಂಧಗಳ ಸಮಿತಿಯಾಗಿದ್ದು, ಇದು ತಾಲಿಬಾನ್ ಹಾಗೂ ಅವುಗಳ ಘಟಕಗಳ ಮತ್ತು ವ್ಯಕ್ತಿಗಳ ಮೇಲಿನ ನಿರ್ಬಂಧಗಳ ಕುರಿತು ಅಧ್ಯಯನ ಮಾಡುತ್ತದೆ. ಈ ಸಮಿತಿ ಮಾಡುವ ಯಾವುದೇ ಬದಲಾವಣೆಗಳನ್ನು ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳು ಈ ನಿರ್ಬಂಧಗಳನ್ನು ಜಾರಿಗೆ ತರುತ್ತವೆ. ಇದರಲ್ಲಿ ಭಯೋತ್ಪಾದಕ ಸಂಫಟನೆಗಳ ಆಸ್ತಿ ಮುಟ್ಟುಗೋಲು, ಶಸ್ತ್ರಾಸ್ತ್ರ ನಿರ್ಬಂಧಗಳ ಹಾಗೂ ಪ್ರಯಾಣ ನಿಷೇಧ ಸೇರಿದೆ. ತಾಲಿಬಾನ್ ನಿರ್ಬಂಧಗಳ ಸಮಿತಿ ಇತ್ತೀಚೆಗೆ ತನ್ನ ನಿರ್ಬಂಧಗಳ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಯಾವುದೇ ನಿರ್ಬಂಧಗಳನ್ನು ಘೋಷಿಸಿಲ್ಲ.‌

ಕಳೆದ ಆಗಸ್ಟ್ 18ರಂದು ಪಾಕಿಸ್ತಾನ ಹೊರಡಿಸಿದ್ದ ಎಸ್ಆರ್​ಒ ಹೇಳಿಕೆ ಪ್ರಕಾರ "ಕೇವಲ ಈ ಹಿಂದೆ ಘೋಷಿಸಿದ್ದ ಎಸ್ಆರ್​ಒಗಳ ಕಾರ್ಯವಿಧಾನವನ್ನು ಕ್ರೋಢೀಕರಿಸುತ್ತದೆ ಮತ್ತು ದಾಖಲಿಸುತ್ತದೆ. ಅದಲ್ಲದೆ ನಿರ್ಬಂಧಗಳ ಪಟ್ಟಿಯಲ್ಲಿ ಅಥವಾ ಅನುಮೋದನೆ ಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ತಿಳಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.