ETV Bharat / bharat

ನಾಳೆ ಹ್ಯಾಕರ್​ಗಳ ಬೃಹತ್​ ದಾಳಿ ಸಾಧ್ಯತೆ... ಆಮಿಷಗಳಿಗೆ ಬಲಿಯಾಗದಿರಿ! - ಫಿಶಿಂಗ್​​ ದಾಳಿ

ದೇಶದಲ್ಲಿ ಕೊರೊನಾ ವೈರಸ್ ಭೀತಿ ನಡುವೆಯೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಜೂನ್​ 21ರಂದು(ನಾಳೆ) ಅತಿದೊಡ್ಡ ದಾಳಿ ನಡೆಯಬಹುದು ಎಂದು ಅಂದಾಜು ಮಾಡಲಾಗಿದೆ.

CYBERCRIME SERIES PHISHING
CYBERCRIME SERIES PHISHING
author img

By

Published : Jun 20, 2020, 9:15 PM IST

Updated : Jun 22, 2020, 8:23 PM IST

ನವದೆಹಲಿ: ಕೋವಿಡ್​​-19 ವಂಚನೆ ಮತ್ತು ಹಗರಣಗಳಿಗೆ ಸಂಬಂಧಿಸಿದಂತೆ 'ಫಿಶಿಂಗ್ ಅಭಿಯಾನ'ದಡಿ ಜೂನ್ 21ರಂದು ಭಾರತ ಸೇರಿ 6 ರಾಷ್ಟ್ರಗಳ ಇ-ಮೇಲ್​​ಗಳ ಮೇಲೆ ಉತ್ತರ ಕೊರಿಯಾದ ಹ್ಯಾಕರ್‌ಗಳು ಬೃಹತ್​​ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಫಿಶಿಂಗ್​ ಬಗ್ಗೆ ಸಂದರ್ಶನ

ಭಾರತ, ಸಿಂಗಾಪುರ, ದಕ್ಷಿಣ ಕೊರಿಯಾ, ಜಪಾನ್, ಯುಕೆ ಮತ್ತು ಯುಎಸ್ ಹ್ಯಾಕರ್​ಗಳ​ ಗಾಳಕ್ಕೆ ಸಿಲುಕಲಿರುವ ದೇಶಗಳು. ಈ ದಾಳಿ ಲಾಜರಸ್ ಗ್ರೂಪ್‌ನ ದೊಡ್ಡ ಪ್ರಮಾಣದ ಅಭಿಯಾನದ ಒಂದು ಭಾಗ. ಸಣ್ಣ ಮತ್ತು ದೊಡ್ಡ ಉದ್ಯಮಗಳು ಸೇರಿ ಆರು ದೇಶಗಳಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಮತ್ತು ಅವರ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ. ಆರ್ಥಿಕವಾಗಿ ಲಾಭ ಗಳಿಸಲು ಉತ್ತರ ಕೊರಿಯಾದ ಹ್ಯಾಕರ್ಸ್​​​ ಗುಂಪು ಪ್ರಯತ್ನಿಸುತ್ತಿದೆ.

CYBERCRIME SERIES PHISHING
ಹ್ಯಾಕರ್‌ಗಳು ಬೃಹತ್​​ ಸೈಬರ್ ದಾಳಿ ?

ಜಪಾನ್​​​ನ 11 ಲಕ್ಷ ವೈಯಕ್ತಿಕ ಇಮೇಲ್ ಐಡಿ, ಭಾರತದಲ್ಲಿ 20 ಲಕ್ಷ ಮತ್ತು ಯುಕೆ 1,80,000 ವ್ಯಾಪಾರ ಸಂಪರ್ಕಗಳ ವಿವರಗಳನ್ನು ಲಾಜರಸ್ ಹ್ಯಾಕರ್ಸ್​​​​​​ ​ಹ್ಯಾಕ್​​ ಮಾಡಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತೀಯ ಎಟಿಎಂಗಳ ಒಳ ನುಸುಳಲು ಮತ್ತು ಗ್ರಾಹಕರ ಕಾರ್ಡ್ ಡೇಟಾವನ್ನು ಕದಿಯಲು ರಚಿಸಲಾದ ಮಾಲ್‌ವೇರ್‌ ಕ್ಯಾಸ್ಪರ್ಸ್ಕಿ ಭದ್ರತಾ ಸಂಶೋಧಕರು ಲಾಜರಸ್ ಗುಂಪು ಪತ್ತೆಗೆ ಮುಂದಾಗಿದ್ದಾರೆ.

ಫಿಶಿಂಗ್​ ಅಂದರೇನು!?

ಸೈಬರ್​ ಕ್ರೈಂ ಇದೀಗ ಪ್ರಪಂಚದ ಎಲ್ಲೆಡೆ ಆವರಿಸಿದೆ. ಫಿಶಿಂಗ್​(ಗಾಳ) ಅಂತರ್ಜಾಲ ಬಳಕೆದಾರರ ಪಾಸ್​ವರ್ಡ್​, ಯೂಸರ್​​ ನೇಮ್​ ಹಾಗೂ ಕ್ರೆಡಿಟ್​ ಕಾರ್ಡ್​ ಸೇರಿದಂತೆ ವೈಯಕ್ತಿಕ ಡೇಟಾ ಕದಿಯಲು ಬಳಸುವ ವಿಧಾನ. ಫಿಶಿಂಗ್‌ ಅಂದರೆ ಲಿಂಕ್‌ಗಳನ್ನು ಬಳಸಿ ನಿಮ್ಮ ಖಾತೆಯಿಂದ ಹಣ ಸೆಳೆಯುವ ಉಪಾಯ. ಆರಂಭದಲ್ಲಿ ವ್ಯಕ್ತಿಯನ್ನ ತಮ್ಮ ಗಾಳದಲ್ಲೇ ಹಾಕಿಕೊಂಡು ತಂದನಂತರ ವಂಚನೆ ಮಾಡುವ ಸಾಧನವಾಗಿದೆ.

ಫಿಶಿಂಗ್​ ವಿರುದ್ಧದ ಕ್ರಮ

ಏನು ಮಾಡಬೇಕು!?

  • ಇಮೇಲ್​ನ ಲಿಂಕ್​ಗಳಲ್ಲಿ ವೆಬ್​ಸೈಟ್​ URLಗಳಲ್ಲಿನ ಕಾಗುಣಿತ ಪರಿಶೀಲನೆ
  • ವೆಬ್‌ಸೈಟ್‌ ಮತ್ತು ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಮರುಬಳಕೆ ಮಾಡಬೇಡಿ
  • ಯಾವುದೇ ಕಾರಣಕ್ಕೂ ಬೇರೆಯವರು ಗುರುತು ಹಿಡಿಯದಂತಹ ಪಾಸ್​ವರ್ಡ್​ ರಚಿಸಿ
  • ಇಮೇಲ್​​ನಲ್ಲಿ ಮಾಹಿತಿ ಬಂದಿದ್ದರೆ ಆ ವ್ಯಕ್ತಿ ಅಥವಾ ಸಂಸ್ಥೆಗೆ ಕರೆ ಮಾಡಿ

ಏನು ಮಾಡಬಾರದು!?

  • ಯಾವುದೇ ವೈಯಕ್ತಿಕ ವಿವರ ಸೈಟ್‌ಗಳಲ್ಲಿ ಪೋಸ್ಟ್ ಮಾಡಬೇಡಿ
  • ನಿಮ್ಮ ಮೇಲ್​​ಗೆ ಬಂದಿರುವ ಅನುಮಾನಾಸ್ಪದ ಮೇಲೆ ಓಪನ್ ಮಾಡ್ಬೇಡಿ
  • ಸಂಶಯಾಸ್ಪದ ಇಮೇಲ್ ಅಥವಾ ಸಂದೇಶದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
  • ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೈನ್‌ ಅಪ್ ಮಾಡುವ ಮೊದಲು ತನಿಖೆ ಮಾಡಿ

ತಜ್ಞರು ಏನು ಹೇಳುತ್ತಾರೆ!?

  • ಕೊರೊನಾ ವೈರಸ್​ ಹಾವಳಿ ಸಮಯದಲ್ಲಿ ಫಿಶಿಂಗ್ ಪ್ರಕರಣ ಅಧಿಕ
  • ಸೈಬರ್‌ ಸೆಕ್ಯುರಿಟಿ ಕಾನೂನು ಸರ್ಕಾರ ಜಾರಿಗೆ ತರಬೇಕು
  • ಫಿಶಿಂಗ್ ರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರಬಹುದು

Last Updated : Jun 22, 2020, 8:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.