ETV Bharat / bharat

ಗಂಜಲ, ಸಗಣಿಯ ಪಂಚಾಮೃತದಿಂದ ಕೊರೊನಾ ವೈರಸ್​ ಗುಣಮುಖ: ಬಿಜೆಪಿ ಶಾಸಕಿ - ಗೋ ಮೂತ್ರ ಸಗಣಿಯಿಂದ ಕೊರೊನಾ ಗುಣಮುಖ

ಹಸುವಿನ ಸಗಣಿ ಮತ್ತು ಗೋ ಮೂತ್ರವನ್ನು ಕ್ಯಾನ್ಸರ್ ಮತ್ತು ಕೊರೊನಾ ವೈರಸ್ ನಿಯಂತ್ರಣಕ್ಕೆ ಬಳಸಬಹುದು ಎಂದು ಅಸ್ಸೋಂ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳಿದ್ದಾರೆ.

MLA Suman Haripriyaಹಸುವಿನ ಸಗಣಿ ಮತ್ತು ಮೂತ್ರದ 'ಪಂಚಾಂಮೃತ'ದಿಂದ ಕ್ಯಾನ್ಸರ್-ಕರೊನಾ ವಾಸಿ
ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ
author img

By

Published : Mar 2, 2020, 9:01 PM IST

Updated : Mar 2, 2020, 9:14 PM IST

ಅಸ್ಸೋಂ: ಹಸುವಿನ ಸಗಣಿ ಮತ್ತು ಗೋ ಮೂತ್ರವನ್ನು ಕ್ಯಾನ್ಸರ್ ಮತ್ತು ಕೊರೊನಾ ವೈರಸ್ ನಿಯಂತ್ರಣಕ್ಕೆ ಬಳಸಬಹುದು ಎಂದು ಅಸ್ಸೋಂ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳಿದ್ದಾರೆ.

ಅಸ್ಸೋಂ ರಾಜ್ಯದ ಕಾಮ್ ರೂಪ್ ಜಿಲ್ಲೆಯ ಹಜೋ ಕ್ಷೇತ್ರದ ಬಿಜೆಪಿ ಶಾಸಕಿ ವಿಧಾನಸಭೆಯಲ್ಲಿ ವೈರಸ್ ಸೋಂಕಿಗೆ ಇಂತಹ ವಿಲಕ್ಷಣ ಚಿಕಿತ್ಸೆಯನ್ನು ಸೂಚಿಸಿದ್ದಾರೆ.

ಬಜೆಟ್​ಗೆ ಸಂಬಂಧಿಸಿದಂತೆ ವಿಧಾನಸಭೆ ಕಲಾಪದ ವೇಳೆ ಮಾತನಾಡಿದ ಅವರು, 'ಹಸುವಿನ ಮೂತ್ರ ಮತ್ತು ಸಗಣಿ ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ. ನಮಗೆ ಪುರಾವೆಗಳು ಸಿಕ್ಕಿವೆ, ಗುಜರಾತ್‌ನ ಆಯುರ್ವೇದ ಆಸ್ಪತ್ರೆ ಕೂಡ ಕ್ಯಾನ್ಸರ್ ರೋಗಿಗಳಿಗೆ ಹಸುವಿನ ಸಗಣಿ ಬಳಸುತ್ತಿದೆ. ಅವರಿಗೆ ಗೋಮೂತ್ರ ಮತ್ತು ಹಸುವಿನ ಸಗಣಿಯಿಂದ ತಯಾರಿಸಿದ ಪಂಚಾಮೃತ ನೀಡಲಾಗುತ್ತದೆ ಎಂದು ಪ್ರಾಚೀನ ಋಷಿ ಮುನಿ ಮತ್ತು ಸಾಂಪ್ರದಾಯಿಕ ಆಯುರ್ವೇದವನ್ನು ಉಲ್ಲೇಖಿಸಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿರುವ ಶಾಸಕಿ, ಹೋಮ ಹವನಗಳು ಗಾಳಿಯನ್ನು ಶುದ್ಧೀಕರಿಸಬಲ್ಲವು, ಆದ್ದರಿಂದ ಗಾಳಿಯಲ್ಲಿ ಹುಟ್ಟುವ ರೋಗವನ್ನು ಸಹ ತಡೆಯಬಹುದು ಎಂದಿದ್ದಾರೆ.

Last Updated : Mar 2, 2020, 9:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.