ETV Bharat / bharat

ಕೊರೊನಾ ದೇಶದಿಂದ ಹೊರ ಹಾಕಲು ಬ್ಯಾಟ್‌ ಬೀಸಿದ ಹಿಟ್​ ಮ್ಯಾನ್.. 80 ಲಕ್ಷ ರೂಪಾಯಿ ನೆರವು!!

ಮಹಾಮಾರಿ ವಿರುದ್ಧ ಹೋರಾಡಲು ಟೀಂ ಇಂಡಿಯಾ ಆಟಗಾರ ರೋಹಿತ್​ ಶರ್ಮಾ ಆರ್ಥಿಕ ಸಹಕಾರ ನೀಡಿದ್ದಾರೆ. ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳಿಗೆ ನೆರವು ನೀಡಿದ್ದಾರೆ.

rohit sharma
ರೋಹಿತ್​ ಶರ್ಮಾ
author img

By

Published : Mar 31, 2020, 4:26 PM IST

ಮುಂಬೈ: ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಟೀಂ ಇಂಡಿಯಾ ಆಟಗಾರ ರೋಹಿತ್​ ಶರ್ಮಾ ಆರ್ಥಿಕ ಸಹಕಾರ ನೀಡಿದ್ದಾರೆ. ಪಿಎಂ ಕೇರ್ಸ್ ನಿಧಿಗೆ 45 ಲಕ್ಷ ಹಾಗೂ​​ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ಜೊತೆಗೆ ಲಾಕ್​ಡೌನ್​ ವೇಳೆ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿರುವ ಝೊಮೊಟೋ ಫೀಡಿಂಗ್​ ಇಂಡಿಯಾ ಕ್ಯಾಂಪೇನ್​ಗೆ 5 ಲಕ್ಷ ರೂ. ನೆರವು ನೀಡಿದ್ದಾರೆ.

ಇದೆಲ್ಲದರ ಜೊತೆಗೆ ಶ್ವಾನಗಳ ಹಸಿವನ್ನು ನೀಗಿಸಲು 5 ಲಕ್ಷ ರೂಪಾಯಿ ಸಂಸ್ಥೆಯೊಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇದನ್ನು ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ನೆರವು ನೀಡುವುದರೊಂದಿಗೆ ಸಚಿನ್​ ತೆಂಡೋಲ್ಕರ್​, ವಿರಾಟ್​ ಕೊಹ್ಲಿ ಹಾಗೂ ಅಂಜಿಕ್ಯಾ ರಹಾನೆ ಸಾಲಿಗೆ ಇವರೂ ಸೇರ್ಪಡೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.