ETV Bharat / bharat

ಕೋವಿಡ್​​​ ಸೋಂಕಿತರಲ್ಲಿ ಕಂಡು ಬರ್ತಿದೆ ಅಪರೂಪದ 'ಕಪ್ಪು ಚರ್ಮ ರೋಗ​​': ಎಚ್ಚರಿಕೆ ವಹಿಸಿದ್ರೆ ಉತ್ತಮ - ದೆಹಲಿ ಗಂಗಾರಾಮ್​ ಆಸ್ಪತ್ರೆ

ಕೆಲವು ದಿನಗಳ ಹಿಂದೆ ದೆಹಲಿಯ ಗಂಗಾರಾಮ್​ ಆಸ್ಪತ್ರೆಯಲ್ಲಿ ಕಂಡು ಬಂದ ಚರ್ಮ (ಬ್ಲಾಕ್​​ ಫಂಗಲ್​ ಇನ್ಪೆಕ್ಷನ್) ರೋಗ ಸದ್ಯ ರಾಷ್ಟ್ರ ರಾಜಧಾನಿಯ ಇತರೆ ಆಸ್ಪತ್ರೆಗಳಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಅಲ್ಲದೆ ಇದು ಹೆಚ್ಚಾಗಿ ಕೋವಿಡ್​ ಸೋಂಕಿತರಲ್ಲಿ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

covid-cases-linked-black-fungus-infection-appears-across-delhi-hospitals
ಕಪ್ಪು ಚರ್ಮ ರೋಗ
author img

By

Published : Dec 20, 2020, 9:39 PM IST

ನವದೆಹಲಿ : ಇತ್ತೀಚೆಗೆ ಕೆಲವರಲ್ಲಿ ಪತ್ತೆಯಾಗಿರುವ ಈ 'ಮುಕೊರ್ಮೈಕೋಸಿಸ್ ಕಾಯಿಲೆ' ಬಲು ಅಪರೂಪ. ಆದರೆ ಅದು ಹೊಸದಲ್ಲ. ಈ ರೋಗ ಕೋವಿಡ್​​ನಿಂದ ಬಂದಿದೆ ಎಂಬ ವಿಷಯ ಹೊಸದಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ದೆಹಲಿಯ ಮ್ಯಾಕ್ಸ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಸಾಂಕ್ರಾಮಿಕದ ಮಧ್ಯೆ 24 ಪ್ರಕರಣಗಳು ವರದಿಯಾಗಿವೆ.

ಮುಕೊಮೈರ್ಕೋಸಿಸ್​​ ನಿಂದ ಬಳಲುತ್ತಿರುವ 24 ರೋಗಿಗಳು ಕೋವಿಡ್​ ಸೋಂಕಿತರಾಗಿದ್ದು, ಅದರಲ್ಲಿ ಈಗಾಗಲೇ 20 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಇಎನ್‌ಟಿ ಪ್ರಧಾನ ನಿರ್ದೇಶಕ ಸಂಜಯ್ ಸಚ್‌ದೇವ ಹೇಳಿದರು. ಅಲ್ಲದೆ ಒಬ್ಬರು ಸಾವಿಗೀಡಾಗಿದ್ದು ಮೂವರು ಯಾವುದೇ ಶಸ್ತ್ರಚಕಿತ್ಸೆಗೆ ಒಳಪಡದೆ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಈ ರೋಗವು ಹೆಚ್ಚಾಗಿ ಕೋವಿಡ್​​ ಸೋಂಕಿತರಲ್ಲಿ ಕಂಡು ಬರುತ್ತಿದೆ. ಈ ರೋಗ ಕಂಡು ಬಂದ ಎರಡು ದಿನಗಳಲ್ಲಿ ರೋಗಿಯು ಕಣ್ಣು, ಮೂಗು ಮತ್ತು ದೇಹದ ಇತರ ಭಾಗಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿದರು ಎಂದು ಸಹದೇವ ತಿಳಿಸಿದರು.

ರೋಗ ಲಕ್ಷಣಗಳು:

ಮೂಗಿನಲ್ಲಿ ಕಿರಿಕಿರಿ, ಕಣ್ಣು ಅಥವಾ ಕೆನ್ನೆಗಳ ಊದಿಕೊಳ್ಳುವಿಕೆ ಮತ್ತು ಮರಗಟ್ಟುವಿಕೆ ಹಾಗೂ ಮೂಗಿನೊಳಗೆ ಕಪ್ಪು ಒಣ ಪುಡಿಯಂತಹ (ಕ್ರಸ್ಟ್‌) ಅಂಶ ಕಂಡು ಬರುತ್ತದೆ.

ಏನು ಮಾಡಬೇಕು?

ಕಣ್ಣುಗಳಲ್ಲಿ ಒತ್ತಡ ಮತ್ತು ಕೆನ್ನೆಗಳು ಮರಗಟ್ಟುವಿಕೆ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಹತ್ತಿರ ಇಎನ್​ಟಿ ಚಿಕಿತ್ಸಾಲಯಗಳಿಗೆ ತೆರಳಬೇಕು. ಎಂಡೋಸ್ಕೋಪ್ ಮೂಲಕ ಮೂಗಿನಲ್ಲಿ ಬೆಳೆಯುತ್ತಿರುವ ವಿಶಿಷ್ಟ ನೇರಳೆ ಅಥವಾ ಕಪ್ಪು ಕಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಮತ್ತು ಯಾವುದೇ ವಿಳಂಬವಿಲ್ಲದೆ ಚಿಕಿತ್ಸೆ ಪ್ರಾರಂಭಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.