ETV Bharat / bharat

ಆಂಧ್ರಪ್ರದೇಶದಲ್ಲಿ ಅಮಾನವೀಯ ಘಟನೆ: ಜೆಸಿಬಿಯಲ್ಲಿ ಮೃತ ದೇಹ ರವಾನೆ - Andrapradesh corona latest news

ಕೊರೊನಾ ಶಂಕಿತನೋರ್ವ ಮೃತಪಟ್ಟಿದ್ದು, ಸ್ಥಳಕ್ಕೆ ಧಾವಿಸಿದ ಪುರಸಬೆ ಸಿಬ್ಬಂದಿ ಮೃತ ದೇಹವನ್ನು ಜೆಸಿಬಿ ಮುಖಾಂತರ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

Covid-19 Victim's Body Carried by JCB in Andhra
ಜೆಸಿಬಿಯಲ್ಲಿ ಮೃತ ದೇಹ ರವಾನೆ
author img

By

Published : Jun 27, 2020, 4:17 AM IST

ಆಂಧ್ರಪ್ರದೇಶ: ಶ್ರೀಕಾಕುಲಂ ಜಿಲ್ಲೆಯ ಪಲಾಸ ಕಾಸಿಬುಗ್ಗ ಮುನ್ಸಿಪಾಲಿಟಿ ವ್ಯಾಪ್ತಿಯ ಉದಯಪುರಂ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಕೊರೊನಾ ಶಂಕಿತನೋರ್ವ ಮೃತಪಟ್ಟಿದ್ದು,ಈತನ ಶವ ಸಂಸ್ಕಾರಕ್ಕಾಗಿ ಸಂಬಂಧಿಕರು ಎಲ್ಲಾ ತಯಾರಿ ನಡೆಸಿದ್ದರು. ಈತ ಸಾವಿಗೀಡಾದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪುರಸಭೆ ಅಧಿಕಾರಿಗಳು ಮೃತದೇಹವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್​ ಇರುವುದು ತಿಳಿದುಬಂದಿದೆ.

ಜೆಸಿಬಿಯಲ್ಲಿ ಮೃತ ದೇಹ ರವಾನೆ

ತದನಂತರ ಆತನ ದೇಹವನ್ನು ಪ್ಲಾಸ್ಟಿಕ್​ ಕವರ್​ನಲ್ಲಿ ಸುತ್ತಿ ಜೆಸಿಬಿ ಮೂಲಕ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇನ್ನು ಈ ಪ್ರದೇಶವನ್ನು ಕಂಟೋನ್ಮೆಂಟ್​ ಎಂದು ಘೋಷಣೆ ಮಾಡಲಾಗಿದ್ದು, ಮೃತನ ಸಂಬಂಧಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಅಧಿಕಾರಿಗಳು ಅಮಾನತು:

ಘಟನೆಯ ನಂತರ ಜಿಲ್ಲಾಧಿಕಾರಿ ಜೆ.ನಿವಾಸ್ ಅವರು ಪಲಾಸ ಮುನ್ಸಿಪಲ್ ಕಮಿಷನರ್ ಸಿ ನಾಗೇಂದರ್ ಕುಮಾರ್ ಮತ್ತು ನೈರ್ಮಲ್ಯ ನಿರೀಕ್ಷಕರನ್ನು ಅಮಾನತುಗೊಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.