ETV Bharat / bharat

ಕೋವಿಡ್-‌19.. ಜಾಗತಿಕವಾಗಿ ಈ ಪಿಡುಗನ್ನ ಮಟ್ಟ ಹಾಕೋದ್ಹೇಗೆ!? - COVID-19 vaccine

ಕೊರೊನಾ ವೈರಸ್‌ ಹರಡದಂತೆ ನಿರ್ಬಂಧಿಸುವ ಕ್ರಮಗಳನ್ನು ಸರಿಯಾಗಿ ಜಾರಿಗೊಳಿಸದೇ ಇದ್ದಲ್ಲಿ ಈ ವೈರಸ್‌ ಮತ್ತೆ ಮರುಕಳಿಸುವುದಲ್ಲದೇ ಅದು ವಿವಿಧೆಡೆ ಏಕಕಾಲಕ್ಕೆ ಪ್ರಸರಣವಾಗದಂತೆ ತಡೆಯುವುದು ಅಸಾಧ್ಯ ಎಂಬುದನ್ನು ಸಂಶೋಧನೆಗಳು ಸಾಬೀತು ಮಾಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

COVID-19 vaccine: Is global immunisation feasible?
ಕೋವಿಡ್-‌19 ಲಸಿಕೆ
author img

By

Published : Apr 5, 2020, 12:35 PM IST

ಹೈದರಾಬಾದ್:‌ ಕೊರೊನಾ ವೈರಸ್‌ ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಹರಡುವುದು ಮುಂದುವರಿದಿದೆ. ಅದಕ್ಕೆ ಸೂಕ್ತ ಲಸಿಕೆಯನ್ನು ಅಭಿವೃದ್ಧಿಪಡಿಸಿ ಜಗತ್ತಿನಾದ್ಯಂತ ಬಳಕೆ ಪ್ರಾರಂಭಿಸಲು ಆದ್ಯತೆ ನೀಡುವುದೊಂದೇ ಈ ಸಾಂಕ್ರಾಮಿಕ ಪಿಡುಗನ್ನು ಕೊನೆಗಾಣಿಸುವ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

2019ರ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗವನ್ನು ತಹಬಂದಿಗೆ ತರಲು ಅದನ್ನು ಹತ್ತಿಕ್ಕುವ ಕ್ರಮವೊಂದಕ್ಕೇ ಹೆಚ್ಚಿನ ಒತ್ತು ನೀಡಲಾಗಿದೆ. ಅಂದರೆ ಪ್ರಕರಣ ಗುರುತಿಸುವಿಕೆ, ಸ್ವ ದಿಗ್ಬಂಧನ ಅಥವಾ ಗೃಹ ದಿಗ್ಬಂಧನ, ಸಂಪರ್ಕ ಮೂಲಗಳ ಪತ್ತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅನುಸರಿಸಲಾಗುತ್ತಿದೆ.

ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿಗೆ ನೆರವು ನೀಡುವ ಎಪಿಡೆಮಿಕ್‌ ಪ್ರಿಪೇರ್ಡ್‌ನೆಸ್‌ ಇನೋವೇಶನ್ಸ್‌ (ಸಿಇಪಿಐ) ಸಹಯೋಗದಲ್ಲಿ ಫೆಬ್ರವರಿ 2020ರಲ್ಲಿ ಜಾಗತಿಕ ಸಮಾಲೋಚನೆಯೊಂದನ್ನು ಪ್ರಾಯೋಜಿಸಲಾಗಿತ್ತು. ಕೋವಿಡ್-‌19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ಕ್ರಿಯಾಪಡೆಯ ಉಗಮಕ್ಕೆ ಕಾರಣವಾದ ಈ ಕ್ರಮಕ್ಕೆ ವಿಶ್ವ ಬ್ಯಾಂಕ್‌ ಸಹಭಾಗಿಯಾಗಿತ್ತು. ಇಡೀ ಜಗತ್ತಿಗೆ ಲಭ್ಯವಾಗುವಂತೆ ಲಸಿಕೆ ಉತ್ಪಾದಿಸುವುದು ಮತ್ತು ಅದಕ್ಕೆ ಹಣಕಾಸು ವ್ಯವಸ್ಥೆ ಮಾಡುವುದು ಹೇಗೆಂಬುದರ ಕುರಿತು ಈ ಕ್ರಿಯಾಪಡೆ ಈಗ ಕೆಲಸ ಮಾಡುತ್ತಿದೆ.

ಇನ್ನೊಂದೆಡೆ 18 ತಿಂಗಳುಗಳ ಅವಧಿಯಲ್ಲಿ ಮೂರು ಮಾದರಿಯ ಲಸಿಕೆಗಳ ಅಭಿವೃದ್ಧಿಗೆ ಕನಿಷ್ಠ 200 ಕೋಟಿ ಅಮೆರಿಕನ್‌ ಡಾಲರ್‌ಗಳ ಹೂಡಿಕೆ ಬೇಕಾಗುತ್ತದೆ ಎಂದು ಸಿಇಪಿಐ ಅಂದಾಜಿಸಿದೆ. ಈ ನಿಧಿಯ ಮೂಲಕ, ಲಸಿಕೆ ಅಭಿವೃದ್ಧಿಗೆ ಹಣಕಾಸು ಒದಗಿಸುವ ಜಾಗತಿಕ ವ್ಯವಸ್ಥೆಯಾಗಿ ಸಿಇಪಿಐ ಕೆಲಸ ಮಾಡಲಿದೆ. ಲಸಿಕೆಗಳಿಗೆ ಅನುಮತಿಸುವ ಅಥವಾ ತುರ್ತು ಸಂದರ್ಭದಲ್ಲಿ ಅವುಗಳ ಬಳಕೆಗೆ ಅನುವು ಮಾಡಿಕೊಡುವುದು ಸಾಧ್ಯವಾಗುವ ತನಕ ಈ ವ್ಯವಸ್ಥೆ ಜಾರಿಯಲ್ಲಿರಲಿದೆ.

ಕೋವಿಡ್-19 ಚಿಕಿತ್ಸೆ ಮತ್ತು ಲಸಿಕೆಗಳಿಗಾಗಿ ಜಂಟಿ ಸಂಶೋಧನಾ ಯೋಜನೆಗಳನ್ನು ಪ್ರಾರಂಭಿಸುವುದಕ್ಕೆ ಬೆಂಬಲ ವ್ಯಕ್ತಪಡಿಸುವ ಬದ್ಧತೆಯನ್ನು ಜಿ7 ಸಂಘಟನೆ ಮಾರ್ಚ್‌ 16,2020 ರಂದು ಪ್ರಕಟಿಸಿತ್ತು. ಅಲ್ಲದೇ, ಈ ಕುರಿತು ಜಿ7 ದೇಶಗಳ ಜಾಗತಿಕ ನಾಯಕರು ನಡೆಸಿದ ವಿಡಿಯೋ ಶೃಂಗ ಸಭೆಯಲ್ಲಿ, ಕೋವಿಡ್‌-19 ಲಸಿಕೆಗಳು ಜಾಗತಿಕವಾಗಿ ಲಭ್ಯವಾಗುವಂತೆ ಮಾಡಲು ಹಾಗೂ ಇದಕ್ಕೆ ಬೇಕಾದ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಬೇಕಾದ ಅವಶ್ಯಕತೆಯ ಕುರಿತು ಪ್ರಸ್ತಾಪಿಸಲಾಗಿತ್ತು.

ಜಗತ್ತಿನಾದ್ಯಂತ ಈಗ 8 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಹಾಗೂ 43,459 ಸಾವುಗಳ ನಂತರ, ಕೋವಿಡ್-19ಕ್ಕೆ ಜಾಗತಿಕವಾಗಿ ಲಸಿಕೆ ಲಭ್ಯವಾಗುವಂತೆ ಮಾಡಬೇಕಾದ ಅವಶ್ಯಕತೆ ಹೆಚ್ಚಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.