ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ವಿಮಾ ಕಂಪನಿಗಳು ಪಾವತಿಸಿದ ಒಟ್ಟು ಆರೋಗ್ಯ ವಿಮೆಯಲ್ಲಿ ಶೇ.11 ರಷ್ಟು ಕೋವಿಡ್ ಚಿಕಿತ್ಸೆಯ ಪಾಲಾಗಿದೆ ಎಂದು 'ಪಾಲಿಸಿಬಜಾರ್ ಡಾಟ್ ಕಾಮ್' (Policybazaar.com.) ಕಂಪನಿ ನಡೆಸಿದ ಸಂಶೋಧನೆಯೊಂದು ತಿಳಿಸಿದೆ.
2020ರ ಏಪ್ರಿಲ್ 1 ರಿಂದ ಆಗಸ್ಟ್ 31 ರ ಅವಧಿಯಲ್ಲಿ ಆರೋಗ್ಯ ವಿಮೆ ಸೌಲಭ್ಯದ ಶೇ.89 ರಷ್ಟು ಕ್ಯಾನ್ಸರ್, ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಸಮಸ್ಯೆ ಸೇರಿದಂತೆ ಇತರ ಪ್ರಮುಖ ಕಾಯಿಲೆಗಳ ಚಿಕಿತ್ಸೆಗೆ ನೀಡಲಾಗಿದೆ. ಉಳಿದ ಶೇ.11 ರಷ್ಟು ವಿಮೆ ಮಹಾಮಾರಿ ಕೊರೊನಾ ಚಿಕಿತ್ಸೆಗೆ ಜನರು ಪಡೆದುಕೊಂಡಿದ್ದಾರೆ ಎಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಕೊರೊನಾ ಸೋಂಕಿಗೆ ಒಳಗಾಗಿ, ಸೋಂಕಿತನಿಗೆ ಬೇರೆ ಕಾಯಿಲೆಗಳೂ ಇದ್ದು, ದೀರ್ಘಕಾಲ ಆಸ್ಪತ್ರೆಯಲ್ಲಿ ದಾಖಲಾದರೆ ಅವರ ಚಿಕಿತ್ಸಾ ವೆಚ್ಚ 10 ಲಕ್ಷ ರೂ. ದಾಟಬಹುದು ಎಂದು ಪಾಲಿಸಿಬಜಾರ್ ಮಾಹಿತಿ ನೀಡಿದೆ.
ಪಾಲಿಸಿಬಜಾರ್, ಇದು ಭಾರತೀಯ ವಿಮಾ ಸಂಗ್ರಾಹಕ ಮತ್ತು ಭಾರತದ ಗುರುಗ್ರಾಮ್ ಮೂಲದ ಜಾಗತಿಕ ಹಣಕಾಸು ತಂತ್ರಜ್ಞಾನ ಕಂಪನಿಯಾಗಿದೆ.