ಹೈದರಾಬಾದ್ : ಸಾಂಕ್ರಾಮಿಕವಲ್ಲದ ಕಾಯಿಲೆಗಳ (NCDs) ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಸೇವೆಗಳಿಗೆ ಕೋವಿಡ್-19 ತೀವ್ರವಾಗಿ ಅಡ್ಡಿಪಡಿಸಿದೆ ಎಂದು ಡಬ್ಲ್ಯೂಹೆಚ್‌ಒ ಸಮೀಕ್ಷೆಯಿಂದ ತಿಳಿದು ಬಂದಿದೆ. ಮೇ ತಿಂಗಳ 3 ವಾರಗಳಲ್ಲಿ 155 ದೇಶಗಳು ಪೂರ್ಣಗೊಳಿಸಿದ ಸಮೀಕ್ಷೆಯು ಕೊರೊನಾ ಪರಿಣಾಮ ಜಾಗತಿಕವಾಗಿದೆ ಎಂದು ದೃಢಪಡಿಸಿದೆ. ಆದರೆ, ಇದು ಕಡಿಮೆ ಆದಾಯದ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಕಳೆದ ಹಲವು ವಾರಗಳಿಂದ ಈ ಸಮೀಕ್ಷೆಯ ಫಲಿತಾಂಶಗಳನ್ನ ವಿವಿಧ ದೇಶಗಳಿಂದ ಸಂಗ್ರಹಿಸಿರುವುದರ ಬಗ್ಗೆ ನಾವು ಖಚಿತಪಡಿಸುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು. ಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಚಿಕಿತ್ಸೆಯ ಅಗತ್ಯವಿರುವ ಅನೇಕ ಜನ ಕೊರೊನಾ ಪ್ರಾರಂಭವಾದಾಗಿನಿಂದ ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳು ಮತ್ತು ಔಷಧಿಗಳನ್ನು ಸ್ವೀಕರಿಸುತ್ತಿಲ್ಲ. ಕೋವಿಡ್-19 ವಿರುದ್ಧ ಹೋರಾಡುವಾಗಲೂ ಎನ್‌ಸಿಡಿಗಳಿಗೆ ಅಗತ್ಯ ಸೇವೆಗಳು ಮುಂದುವರಿಯುತ್ತವೆ ಎಂದು ಖಚಿತಪಡಿಸಲು ದೇಶಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅತ್ಯಗತ್ಯ.
ಸೇವೆಯ ಅಡೆತಡೆಗಳು ವ್ಯಾಪಕವಾಗಿ ಹರಡಿವೆ : ಅನೇಕ ದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಭಾಗಶಃ ಅಥವಾ ಸಂಪೂರ್ಣ ಅಡ್ಡಿಪಡಿಸಲಾಗಿದೆ ಎಂಬುದು ಸಮೀಕ್ಷೆಯ ಮುಖ್ಯ ಶೋಧನೆಯಾಗಿದೆ. ಸಮೀಕ್ಷೆ ನಡೆಸಿದ ದೇಶಗಳಲ್ಲಿ ಅರ್ಧಕ್ಕಿಂತ ಹೆಚ್ಚು (53%) ಅಧಿಕ ರಕ್ತದೊತ್ತಡ ಚಿಕಿತ್ಸೆಗಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ಅಡ್ಡಿಪಡಿಸಿದ ಸೇವೆಗಳನ್ನು ಹೊಂದಿವೆ. ಮಧುಮೇಹ ಮತ್ತು ಸಂಬಂಧಿತ ತೊಂದರೆಗಳ ಚಿಕಿತ್ಸೆಗಾಗಿ 49%, ಕ್ಯಾನ್ಸರ್ ಚಿಕಿತ್ಸೆಗೆ 42% ಮತ್ತು ಹೃದಯ ರಕ್ತನಾಳದ ತುರ್ತು ಪರಿಸ್ಥಿತಿಗಳಿಗೆ 31% ಅಡ್ಡಿಯುಂಟಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಸುಮಾರು ಮೂರನೇ ಎರಡರಷ್ಟು (63%) ದೇಶಗಳಲ್ಲಿ ಪುನರ್ವಸತಿ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಸಿಬ್ಬಂದಿ ಮರು ನಿಯೋಜನೆ ಮತ್ತು ಸ್ಕ್ರೀನಿಂಗ್ ಮುಂದೂಡಿಕೆ : ಸಮೀಕ್ಷೆಗೆ ಒಳಗಾದ ಬಹುಪಾಲು (94%) ದೇಶಗಳಲ್ಲಿ, ಎನ್‌ಸಿಡಿಗಳ ಪ್ರದೇಶದಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಸಚಿವಾಲಯವು ಭಾಗಶಃ ಅಥವಾ ಸಂಪೂರ್ಣವಾಗಿ ಕೊರೊನಾಗೆಂದೆ ಮರು ನಿಯೋಜಿಸಲಾಗಿದೆ ಎಂದು ಸಮೀಕ್ಷೆಯು ಕಂಡು ಹಿಡಿದಿದೆ. ಸಾರ್ವಜನಿಕ ತಪಾಸಣೆ ಕಾರ್ಯಕ್ರಮಗಳ ಮುಂದೂಡಿಕೆ (ಉದಾಹರಣೆಗೆ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್) ಸಹ ವ್ಯಾಪಕವಾಗಿ ಹರಡಿತು. ಇದನ್ನು 50%ಕ್ಕೂ ಹೆಚ್ಚು ದೇಶಗಳು ವರದಿ ಮಾಡಿವೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಾಗ ತುರ್ತು ಅಲ್ಲದ ಸೌಲಭ್ಯ ಆಧಾರಿತ ಆರೈಕೆಯನ್ನು ಕಡಿಮೆ ಮಾಡಲು ಇದು ಆರಂಭಿಕ WHO ಶಿಫಾರಸುಗಳಿಗೆ ಅನುಗುಣವಾಗಿತ್ತು.
ಆದರೆ, ಸೇವೆಗಳನ್ನು ಸ್ಥಗಿತಗೊಳಿಸಲು ಅಥವಾ ಕಡಿಮೆ ಮಾಡಲು ಸಾಮಾನ್ಯ ಕಾರಣಗಳು ಯೋಜಿತ ಚಿಕಿತ್ಸೆಗಳ ರದ್ಧತಿ, ಸಾರ್ವಜನಿಕ ಸಾರಿಗೆಯಲ್ಲಿನ ಇಳಿಕೆ ಮತ್ತು ಸಿಬ್ಬಂದಿ ಕೊರತೆಯಾಗಿದೆ. ಯಾಕೆಂದರೆ, ಆರೋಗ್ಯ ಕಾರ್ಯಕರ್ತರನ್ನು ಕೊರೊನಾ ಸೇವೆಗಳನ್ನು ಬೆಂಬಲಿಸಲು ಮರು ನಿಯೋಜಿಸಲಾಗಿದೆ. ಐದು ದೇಶಗಳಲ್ಲಿ (20%) ಅಡೆತಡೆಗಳನ್ನು ವರದಿ ಮಾಡುವಲ್ಲಿ, ಸೇವೆಗಳನ್ನು ನಿಲ್ಲಿಸಲು ಒಂದು ಮುಖ್ಯ ಕಾರಣವೆಂದರೆ ಔಷಧಿಗಳ ಕೊರತೆ, ರೋಗನಿರ್ಣಯ ಮತ್ತು ಇತರ ತಂತ್ರಜ್ಞಾನಗಳು. ಜಾಗತಿಕವಾಗಿ ಮೂರನೇ ಎರಡರಷ್ಟು ದೇಶಗಳು ತಮ್ಮ ರಾಷ್ಟ್ರೀಯ ಕೋವಿಡ್-19 ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಯೋಜನೆಗಳಲ್ಲಿ ಎನ್‌ಸಿಡಿ ಸೇವೆಗಳನ್ನು ಸೇರಿಸಿಕೊಂಡಿವೆ ಎಂದು ವರದಿ ಮಾಡಿದೆ.
ಕಡಿಮೆ ಆದಾಯದ 42% ದೇಶಗಳಿಗೆ ಹೋಲಿಸಿದರೆ 72% ಹೆಚ್ಚಿನ ಆದಾಯದ ದೇಶಗಳು ಸೇರ್ಪಡೆ ವರದಿಯಾಗಿದೆ. ಹೃದಯ ರಕ್ತನಾಳದ ಕಾಯಿಲೆ, ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳನ್ನು ಪರಿಹರಿಸುವ ಸೇವೆಗಳನ್ನು ಹೆಚ್ಚಾಗಿ ಸೇರಿಸಲಾಯಿತು. ಹಲ್ಲಿನ ಸೇವೆಗಳು, ಪುನರ್ವಸತಿ ಮತ್ತು ತಂಬಾಕು ನಿಲುಗಡೆ ಚಟುವಟಿಕೆಗಳನ್ನು ದೇಶದ ವರದಿಗಳ ಪ್ರಕಾರ ಪ್ರತಿಕ್ರಿಯೆ ಯೋಜನೆಗಳಲ್ಲಿ ವ್ಯಾಪಕವಾಗಿ ಸೇರಿಸಲಾಗಿಲ್ಲ. ವರದಿ ಮಾಡುವ 17 ಪ್ರತಿಶತ ದೇಶಗಳು ತಮ್ಮ ರಾಷ್ಟ್ರೀಯ ಕೊರೊನಾ ಯೋಜನೆಯಲ್ಲಿ ಎನ್‌ಸಿಡಿ ಸೇವೆಗಳನ್ನು ಒದಗಿಸಲು ಸರ್ಕಾರದ ಬಜೆಟ್‌ನಿಂದ ಹೆಚ್ಚುವರಿ ಹಣ ವಿನಿಯೋಗಿಸಲು ಪ್ರಾರಂಭಿಸಿವೆ.
ಆರೈಕೆಯನ್ನು ಮುಂದುವರೆಸಲು ಪರ್ಯಾಯ ತಂತ್ರಗಳು : ಎನ್‌ಸಿಡಿಗಳಿಗೆ ಚಿಕಿತ್ಸೆ ಮುಂದುವರೆಸಲು ಹೆಚ್ಚಿನ ಅಪಾಯದಲ್ಲಿರುವ ಜನರನ್ನು ಬೆಂಬಲಿಸಲು ಹೆಚ್ಚಿನ ದೇಶಗಳಲ್ಲಿ ಪರ್ಯಾಯ ಕಾರ್ಯತಂತ್ರಗಳನ್ನು ಸ್ಥಾಪಿಸಲಾಗಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಸೇವಾ ಅಡೆತಡೆಗಳನ್ನು ವರದಿ ಮಾಡುವ ದೇಶಗಳಲ್ಲಿ ಜಾಗತಿಕವಾಗಿ 58% ದೇಶಗಳು ಈಗ ವೈಯಕ್ತಿಕ ಸಮಾಲೋಚನೆಗಳನ್ನು ಬದಲಿಸಲು ಟೆಲಿಮೆಡಿಸಿನ್ (ದೂರವಾಣಿ ಅಥವಾ ಆನ್‌ಲೈನ್ ವಿಧಾನಗಳ ಸಲಹೆ) ಬಳಸುತ್ತಿವೆ. ಕಡಿಮೆ ಆದಾಯದ ದೇಶಗಳಲ್ಲಿ ಈ ಸಂಖ್ಯೆ 42% ಆಗಿದೆ. 70% ಕ್ಕಿಂತ ಹೆಚ್ಚು ದೇಶಗಳು ಎನ್‌ಸಿಡಿ ಹೊಂದಿರುವ COVID-19 ರೋಗಿಗಳ ಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ.
"ಈಗ ನಮಗೆ ತಿಳಿದಿರುವ ಸಂಗತಿಯೆಂದರೆ, ಎನ್‌ಸಿಡಿ ಹೊಂದಿರುವ ಜನರು ವೈರಸ್‌ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಲು ಹೆಚ್ಚು ಗುರಿಯಾಗುತ್ತಾರೆ. ಆದರೆ, ಅನೇಕರು ತಮ್ಮ ಕಾಯಿಲೆಗಳನ್ನು ನಿರ್ವಹಿಸಲು ಅಗತ್ಯವಾದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಎನ್‌ಸಿಡಿಗಳೊಂದಿಗೆ ವಾಸಿಸುವ ಜನರ ಕಾಳಜಿಯನ್ನು ರಾಷ್ಟ್ರೀಯ ಪ್ರತಿಕ್ರಿಯೆ ಮತ್ತು ಕೋವಿಡ್ಗಾಗಿ ಸಿದ್ಧತೆ ಯೋಜನೆಗಳಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯ. ಆದರೆ, ಆ ಯೋಜನೆಗಳನ್ನು ಕಾರ್ಯಗತಗೊಳಿಸಲು ನವೀನ ಮಾರ್ಗಗಳನ್ನ ಕಂಡು ಹಿಡಿಯಬೇಕು. ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲೂ ಎನ್‌ಸಿಡಿಗಳನ್ನು ತಡೆಗಟ್ಟಲು, ರೋಗನಿರ್ಣಯ ಮಾಡಲು ಮತ್ತು ಆರೈಕೆಯನ್ನು ಒದಗಿಸಲು ಆರೋಗ್ಯ ಸೇವೆಗಳನ್ನು ಬಲಪಡಿಸಲು ಸಿದ್ಧರಾಗಿರಬೇಕು ಎಂದು ಡಬ್ಲ್ಯೂಹೆಚ್‌ಒ ಎನ್‌ಸಿಡಿ ವಿಭಾಗದ ನಿರ್ದೇಶಕ ಡಾ.ಬೆಂಟೆ ಮೈಕೆಲ್ಸೆನ್ ಹೇಳಿದರು.