ETV Bharat / bharat

ಮುಂಬೈನಿಂದ ರೈಲಿನಲ್ಲಿ ಗೋವಾಕ್ಕೆ ಬಂದ 7 ಜನರಿಗೆ ಕೋವಿಡ್​ ಪಾಸಿಟಿವ್

author img

By

Published : May 18, 2020, 11:26 AM IST

ಮುಂಬೈನಿಂದ ಬಂದ 7 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಗ್ರೀನ್​ ಝೋನ್​ ಆಗಿದ್ದ ಗೋವಾಕ್ಕೂ ಮತ್ತೆ ಮಹಾಮಾರಿ ವಕ್ಕರಿಸಿದೆ.

COVID-19: Seven on Mumbai-Goa train test positive; tally touches 29
ರೈಲಿನಲ್ಲಿ ಗೋವಾಕ್ಕೆ ಬಂದ 7 ಜನರಿಗೆ ಕೋವಿಡ್​ ಪಾಸಿಟಿವ್

ಪಣಜಿ(ಗೋವಾ): ಮುಂಬೈಯಿಂದ ರೈಲಿನಲ್ಲಿ ಆಗಮಿಸಿದ್ದ ಏಳು ಜನರಿಗೆ ಕೋವಿಡ್​ ಪಾಸಿಟಿವ್ ಬಂದಿದ್ದು, ಈ ಮೂಲಕ ರಾಜ್ಯದಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಮುಂಬೈನಿಂದ 100 ಜನರ ಸ್ಯಾಂಪಲ್ಸ್ ವರದಿಯಲ್ಲಿ 7 ಜನರಿಗೆ ಪಾಸಿಟಿವ್ ಬಂದಿದೆ. ಅವರ ಸ್ಯಾಂಪಲ್ಸ್​ಗಳ ಅಂತಿಮ ದೃಢೀಕರಣಕ್ಕಾಗಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಏಳು ಜನ ರೈಲು ಪ್ರಯಾಣಿಕರು ಸೇರಿದಂತೆ ಭಾನುವಾರ ರಾಜ್ಯದಲ್ಲಿ ಒಟ್ಟು 16 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 29 ಆಗಿದೆ. ಎಲ್ಲಾ 29 ಜನರನ್ನು ಮಾರ್ಗಾವೊ ಪಟ್ಟಣದ ವಿಶೇಷ ಕೋವಿಡ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಪತ್ತೆಯಾದ 7 ಪ್ರಕರಣಗಳಲ್ಲಿ ಎಲ್ಲರೂ ಚೇತರಿಕೆ ಕಂಡು ಗೋವಾವನ್ನು ಮೇ 1ರಂದು ಗ್ರೀನ್ ಝೋನ್ ಎಂದು ಘೋಷಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.