ETV Bharat / bharat

ಕೋವಿಡ್​​ನಿಂದಾಗಿ ಚುನಾವಣೆ ಮಹತ್ವದ ಸವಾಲಾಗಿದೆ: ವಿಶೇಷ ಸಂದರ್ಶನದಲ್ಲಿ ಸುನಿಲ್ ಅರೋರಾ - ಈಟಿವಿ ಭಾರತದ ಜೊತೆ ಸುನಿಲ್ ಅರೋರಾ

ಈಟಿವಿ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಚುನಾವಣೆಯ ಮೇಲೆ ಕೊರೊನಾ ಪ್ರಭಾವ ಹಾಗೂ ಡಿಜಿಟಲ್ ಕ್ಯಾಂಪೇನ್​ಗಳಲ್ಲಿ ನೀತಿ ಸಂಹಿತೆ ಜಾರಿಗೊಳಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Sunil Arora with Etv Bharat
ಸುನಿಲ್ ಅರೋರಾ
author img

By

Published : Jul 18, 2020, 2:41 PM IST

ರಾಜ್ಯಸಭೆ ಚುನಾವಣೆಗಳು ಯಶಸ್ವಿಯಾಗಿವೆ. ಆದರೆ ಬಿಹಾರ ವಿಧಾನಸಭೆ ಚುನಾವಣೆ ನಡೆಸುವಾಗ ನಮಗೆ ಸರಕು ಸಾಗಣೆ ಮತ್ತು ಆರೋಗ್ಯ ಸಮಸ್ಯೆಯ ಸವಾಲು ಎದುರಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹೇಳಿದ್ದಾರೆ.

ಈಟಿವಿ ಭಾರತದ ಅರ್ಶದೀಪ್ ಕೌರ್ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಅರೋರಾ, ಅಂಚೆ ಮತಪತ್ರದ ಮೂಲಕ 65 ವರ್ಷಕ್ಕಿಂತ ಹಿರಿಯರಿಗೆ ಮತ ಚಲಾಯಿಸುವ ಅವಕಾಶ, ಚುನಾವಣೆಯ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮ, ನಿವಾರಣೆ ಕ್ರಮಗಳು ಮತ್ತು ಡಿಜಿಟಲ್ ಕ್ಯಾಂಪೇನ್​ಗಳಲ್ಲಿ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂದರ್ಶನದ ಸಾರಾಂಶ ಇಲ್ಲಿದೆ:

ಪ್ರಶ್ನೆ: ಸಾಂಕ್ರಾಮಿಕ ರೋಗ ಹರಡುತ್ತಿರುವ ಮಧ್ಯೆಯೇ 2020 ಜೂನ್​ನಲ್ಲಿ ರಾಜ್ಯಸಭೆ ಚುನಾವಣೆಗಳನ್ನು ಆಯೋಗ ನಡೆಸಿದೆ. ನೀವು ಎದುರಿಸಿದ ಸವಾಲುಗಳನ್ನು ದಯವಿಟ್ಟು ಹಂಚಿಕೊಳ್ಳಿ.

ಉತ್ತರ: 8 ರಾಜ್ಯಗಳಲ್ಲಿನ 19 ಸ್ಥಾನಗಳಿಗೆ 2020 ಜೂನ್ 19 ರಂದು ರಾಜ್ಯಸಭೆಗೆ ಚುನಾವಣಾ ಆಯೋಗವು ಯಶಸ್ವಿಯಾಗಿ ಚುನಾವಣೆ ನಡೆಸಿದೆ. ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಚುನಾವಣೆಯನ್ನು ನಡೆಸಲಾಗಿತ್ತು. ಚುನಾವಣಾ ಆಯೋಗದ ನಿರ್ದೇಶನಕ್ಕೆ ಅನುಗುಣವಾಗಿ, ಎಲ್ಲ ರಾಜ್ಯ ಸರ್ಕಾರಗಳು ಕೋವಿಡ್ 19 ಗೆ ಸಂಬಂಧಿಸಿದ ನೀತಿಗಳನ್ನು ಪಾಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದವು. ಇದೇ ರೀತಿ, ಚುನಾವಣೆಯ ದಿನದಂದು 1000 ಮತದಾರರ ಪೈಕಿ ಕೇವಲ ಒಬ್ಬರು ಕೋವಿಡ್ 19 ಪಾಸಿಟಿವ್ ಮತದಾರರು (ಮಧ್ಯಪ್ರದೇಶದಲ್ಲಿ) ಕಂಡುಬಂದಿದ್ದರು. ಇತರ ಎಲ್ಲರೂ ಮತ ಹಾಕಿದ ನಂತರ ಅವರಿಗೆ ಮತ ಹಾಕಲು ಅವಕಾಶ ಕಲ್ಪಿಸಲಾಗಿತ್ತು. ಇನ್ನೊಬ್ಬ ಶಂಕಿತ ಕೋವಿಡ್ 19 ಮತದಾರರು ರಾಜಸ್ಥಾನದಲ್ಲಿ ಕಂಡುಬಂದಿದ್ದರು. ಅವರಿಗೂ ಎಲ್ಲರು ಮತ ಹಾಕಿದ ನಂತರ ಮತ ಹಾಕಲು ಅವಕಾಶ ನೀಡಲಾಗಿತ್ತು. ಆದರೆ, ಮತದಾರರ ಪೈಕಿ ಯಾರೂ ಆಸ್ಪತ್ರೆಯಲ್ಲಿ ದಾಖಲಾಗಿರಲಿಲ್ಲ. ಆದರೂ, ಇಂತಹ ಸನ್ನಿವೇಶವನ್ನು ಎದುರಿಸಲೆಂದೇ ಆಯೋಗವು ವಿಶೇಷ ಸೌಲಭ್ಯವನ್ನು ರೂಪಿಸಿತ್ತು.

ಪ್ರಶ್ನೆ: ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಬಿಹಾರ ವಿಧಾನಸಭೆ ಮತ್ತು ಸಂಸತ್ತಿನ ಉಪಚುನಾವಣೆಗಳನ್ನು ನಡೆಸಲಾಗುತ್ತದೆಯೇ? ಮತದಾರರು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ನಿಮ್ಮ ಸಿದ್ಧತೆ ಹೇಗಿದೆ?

ಉತ್ತರ: ಬಿಹಾರ ವಿಧಾನಸಭೆ ಚುನಾವಣೆಯನ್ನು ಸಕಾಲಕ್ಕೆ ನಡೆಸಲಾಗುತ್ತದೆ. ಇದಕ್ಕಾಗಿ ಅಗತ್ಯ ಸಿದ್ಧತೆಯು ಭಾರತೀಯ ಚುನಾವಣಾ ಆಯೋಗ, ಬಿಹಾರ್ ಸಿಇಒ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದೆ. ಎಲ್ಲ ಅಗತ್ಯ ಸಾಮಗ್ರಿಗಳ ಸಾಗಣೆ ಮತ್ತು ಸಾಂಕ್ರಾಮಿಕ ರೋಗದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡೇ ಚುನಾವಣೆ ವೇಳಾಪಟ್ಟಿಯನ್ನು ನಿಗದಿಸಲಾಗುತ್ತದೆ. ಕೊರೊನಾ ಹರಡುತ್ತಿರುವ ಈ ಸನ್ನಿವೇಶದಲ್ಲಿ, ಚುನಾವಣಾ ಪ್ರಕ್ರಿಯೆ ಕುರಿತ ಎಲ್ಲ ಸೂಚನೆಗಳನ್ನು ಸೂಕ್ತವಾಗಿ ಬದಲಾವಣೆ ಮಾಡಲಾಗುತ್ತದೆ. ಈ ಮೂಲಕ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸೇಶನ್​​ಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ರಾಜಕೀಯ ಪಕ್ಷಗಳು ಸೇರಿದಂತೆ ಸಂಬಂಧಿಸಿದ ಎಲ್ಲರೂ ತಮ್ಮ ಕ್ಯಾಂಪೇನ್ ವೇಳೆ ಎಲ್ಲ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಚುನಾವಣಾ ವ್ಯವಸ್ಥೆ, ಮತದಾರರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಇತರ ಸಂಬಂಧಿಸಿದವರಿಗೆ ಸಂಬಂಧಿಸಿದ ಚುನಾವಣಾ ಆಯೋಗದ ಸೂಚನೆಗಳನ್ನು ಸೂಕ್ತವಾಗಿ ಬದಲಾವಣೆ ಮಾಡಲಾಗುತ್ತದೆ. ಚುನಾವಣೆಯ ವಿವಿಧ ಹಂತದಲ್ಲಿ ಕ್ರಮಗಳ ಮರುಪರಿಶೀಲನೆಯನ್ನು ಆಯೋಗದಲ್ಲಿನ ಅಧಿಕಾರಿಗಳ ತಂಡವು ಮಾಡಲಿದೆ.

ಬಲ್ಕ್ ಎಸ್ಎಂಎಸ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಡಿಜಿಟಲ್ ಹಾಗೂ ಮಾಧ್ಯಮ ಪ್ಲಾಟ್​​ಫಾರಂಗಳನ್ನು ಆಯೋಗ ಬಳಕೆ ಮಾಡಿಕೊಳ್ಳಲಿದೆ. ಕೋವಿಡ್ -19 ಕುರಿತ ಮಾರ್ಗಸೂಚಿಗಳನ್ನು ಮತದಾರರ ಮಾರ್ಗಸೂಚಿಯಲ್ಲಿ ಸೇರಿಸಲಾಗುತ್ತದೆ. ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು ಒಂದು ಸಾವಿರಕ್ಕೆ ಮಿತಿಗೊಳಿಸಬೇಕು ಎಂದು ಆಯೋಗ ಸೂಚಿಸಿದೆ. ಮೊದಲು 1500 ಮತದಾರರಿಗೆ ಒಂದು ಮತಗಟ್ಟೆಯನ್ನು ನಿಯೋಜಿಸಲಾಗಿರುತ್ತಿತ್ತು. ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಉದಾಹರಣೆಗೆ, ಬಿಹಾರಕ್ಕೆ ಹೆಚ್ಚುವರಿಯಾಗಿ 33,797 ಮತಗಟ್ಟೆಗಳನ್ನು ತೆರೆಯಲು ನಿರ್ಧರಿಸಲಾಗುತ್ತದೆ. ಹಿರಿಯ ನಾಗರಿಕರು (65 ವರ್ಷಕ್ಕೂ ಹೆಚ್ಚಿನವರು), ಅಂಗವಿಕಲರು ಹಾಗೂ ಕೋವಿಡ್ ಪಾಸಿಟಿವ್ ಮತದಾರರಿಗೆ ಅಂಚೆ ಮತಪತ್ರವನ್ನು ಒದಗಿಸಲಾಗುತ್ತದೆ. ಇವರು ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇದ್ದುಕೊಂಡು ಮತ ಹಾಕಬಹುದು. ಇದರಿಂದಾಗಿ ರಿಸ್ಕ್ ಹೆಚ್ಚಿರುವವರಿಗೂ ಮತದಾನದ ಅವಕಾಶ ನೀಡಿದಂತಾಗಲಿದೆ.

ಪ್ರಶ್ನೆ: ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ರ್ಯಾಲಿಗಳು ನಡೆಯುತ್ತವೆ ಮತ್ತು ಮತದಾನದ ವೇಳೆಯೂ ಜನ ಸೇರುತ್ತಾರೆ. ಈ ಸಮಯದಲ್ಲಿ ಆರೋಗ್ಯದ ರಿಸ್ಕ್ ಕಡಿಮೆ ಮಾಡಲು ಚುನಾವಣಾ ಆಯೋಗ ಯಾವ ಕ್ರಮಗಳನ್ನು ಕೈಗೊಂಡಿದೆ ಮತ್ತು ವರ್ಚುವಲ್ ರ್ಯಾಲಿಗಳಲ್ಲಿ ನೀವು ಹೇಗೆ ನೀತಿ ಸಂಹಿತೆಯನ್ನು ಜಾರಿಗೊಳಿಸುತ್ತೀರಿ?

ಉತ್ತರ: ಕೋವಿಡ್ 19 ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾರ್ವಜನಿಕ ಕ್ಯಾಂಪೇನ್ಗಳನ್ನು ನಡೆಸುವ ಕುರಿತು ರಾಷ್ಟ್ರೀಯ ಮತ್ತು ಸಂಬಂಧಿಸಿದ ರಾಜ್ಯದ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಆಯೋಗ ಕೇಳಿದೆ. ಬಿಹಾರ ಸಿಇಒ ಕಳುಹಿಸಿದಂತೆ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ರ್ಯಾಲಿಗಳಲ್ಲಿ ಸಾರ್ವಜನಿಕರು ಸೇರುವ ಕುರಿತು ಮಾತನಾಡುವುದಾದರೆ, ಸಾಮಾಜಿಕ ಅಂತರದ ಬಗ್ಗೆ ಈಗಾಗಲೇ ಕೋವಿಡ್ 19 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಉಲ್ಲಂಘನೆಯಾಗಲಿದೆ. ಚುನಾವಣಾ ಕ್ಯಾಂಪೇನ್ ಅನ್ನು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ಸೂಕ್ತ ಮುನ್ನೆಚ್ಚರಿಕೆ ವಹಿಸಿದೆ. ಪ್ರತಿ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸುವ ಸಮಯದಲ್ಲಿ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳ ವಿವರಗಳನ್ನು ನೀಡಬೇಕು. ಇನ್ನೂ ಚುನಾವಣೆ ಪ್ರಚಾರ ಕಾರ್ಯ ಆರಂಭವಾಗದ್ದರಿಂದ ‘ಡಿಜಿಟಲ್ ಕ್ಯಾಂಪೇನ್​ಗಳು ಮತ್ತು ವರ್ಚುವಲ್ ರ್ಯಾಲಿಗಳನ್ನು ನಡೆಸುವ ರಾಜಕೀಯ ಪಕ್ಷಗಳ’ ವ್ಯಾಪ್ತಿಯನ್ನು ನಾವು ಇನ್ನಷ್ಟೇ ಪರಿಶೀಲಿಸಬೇಕಿದೆ. ಅಭ್ಯರ್ಥಿಗಳು ಯಾವ ಮಟ್ಟಕ್ಕೆ ವರ್ಚುವಲ್ ಕ್ಯಾಂಪೇನ್ ಮಾಡುತ್ತಾರೆ, ವೆಚ್ಚ ವ್ಯಾಪ್ತಿಯಲ್ಲಿ ಯಾರು ಒಳಪಡುತ್ತಾರೆ ಎಂಬುದನ್ನು ನಾವು ಇನ್ನಷ್ಟೇ ಗಮನಿಸಬೇಕಿದೆ. ರಾಜಕೀಯ ಪಕ್ಷಗಳ ಕ್ಯಾಂಪೇನ್​ಗಳಿಗೆ ಯಾವುದೇ ವೆಚ್ಚ ಮಿತಿ ಇಲ್ಲದ್ದರಿಂದ, ರಾಜಕೀಯ ಪಕ್ಷಗಳಿಗೆ ಯಾವುದೇ ಮಿತಿ ಅನ್ವಯಿಸುವುದಿಲ್ಲ.

ಪ್ರಶ್ನೆ: 65 ವರ್ಷದವರು, ಕೋವಿಡ್ ರೋಗಿಗಳು ಹಾಗೂ ಶಂಕಿತರಿಗೆ ಅಂಚೆ ಮತಪತ್ರವನ್ನು ಒದಗಿಸುವ ನಿರ್ಧಾರದಿಂದಾಗಿ, ಅವರ ಗೌಪ್ಯತೆಗೆ ಧಕ್ಕೆಯಾಗುತ್ತದೆ ಎಂದು ಕೆಲವು ರಾಜಕೀಯ ಪಕ್ಷಗಳು ವಿರೋಧಿಸಿವೆ. ಇದರ ಬಗ್ಗೆ ನೀವು ಏನು ಹೇಳುತ್ತೀರಿ?

ಉತ್ತರ: ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಡಿಯಲ್ಲಿನ ರಾಷ್ಟ್ರೀಯ ಕಾರ್ಯನಿರ್ವಹಣೆ ಸಮಿತಿ ಪ್ರಕಟಿಸಿದ ಮಾರ್ಗಸೂಚಿಗಳ ಪ್ರಕಾರ, 65 ವರ್ಷಗಳಿಗಿಂತ ಹೆಚ್ಚಿನವರು, ಇತರ ರೋಗಗಳು ಇರುವವರು, ಗರ್ಭಿಣಿಯರು ಮತ್ತು 10 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಆರೋಗ್ಯ ಸಂಬಂಧಿ ಅಗತ್ಯಗಳನ್ನು ಹೊರತುಪಡಿಸಿ ಮನೆಯಲ್ಲೇ ಇರಬೇಕು. ಇದನ್ನು ವಿಶೇಷ ಸನ್ನಿವೇಶ ಎಂದು ಆಯೋಗ ಎಂದು ಪರಿಗಣಿಸಿದೆ. ಹೀಗಾಗಿ 65 ವರ್ಷಕ್ಕಿಂತ ಹೆಚ್ಚಿನವರು ಮತ್ತು ಮನೆಯಲ್ಲಾಗಲೀ ಅಥವಾ ಸಾಂಸ್ಥಿಕವಾಗಲೀ ಕ್ವಾರಂಟೈನ್ನಲ್ಲಿರುವ ಕೋವಿಡ್ 19 ಶಂಕಿತರು/ಸೋಂಕಿತರು ಸೇರಿದಂತೆ ಒಟ್ಟು ಎರಡು ವರ್ಗದ ಜನರಿಗೆ ಅಂಚೆ ಮತಪತ್ರದ ಸೌಲಭ್ಯವನ್ನು ಒದಗಿಸಲು ಶಿಫಾರಸು ಮಾಡಲು ನಿರ್ಧರಿಸಿದೆ. ಇವರು ಮತಗಟ್ಟೆಗೆ ಆಗಮಿಸಲು ಸಾಧ್ಯವಾಗದಿದ್ದರೂ, ಮತದಾನದ ಹಕ್ಕುಗಳಿಂದ ವಂಚಿತರಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂಚೆ ಮತಪತ್ರದ ಒಟ್ಟು ಪ್ರಕ್ರಿಯೆಯು ಕರ್ತವ್ಯದಲ್ಲಿರುವ ಚುನಾವಣಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ ಮತ್ತು ಇಡೀ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಿಸಲಾಗುತ್ತದೆ ಮತ್ತು ಅಭ್ಯರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೀಗಾಗಿ, ಪ್ರತಿ ಮತ ಪತ್ರವೂ ಸುರಕ್ಷಿತ, ಸುಭದ್ರ ಮತ್ತು ಪಾರದರ್ಶಕವಾಗಿರುತ್ತದೆ. ಅಷ್ಟಕ್ಕೂ, 65 ವರ್ಷದ ಮತದಾರರಿಗೆ ಮತದಾನದಲ್ಲಿ ಚುನಾವಣಾ ಆಯೋಗ ನೀಡಿರುವ ಅನುಕೂಲವನ್ನು ಹಿರಿಯ ನಾಗರಿಕ ಸಂಘಟನೆಗಳು ಮೆಚ್ಚಿವೆ.

ಪ್ರಶ್ನೆ: ಒಟ್ಟಾರೆಯಾಗಿ, ಸಾಂಕ್ರಾಮಿಕ ರೋಗದಿಂದಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಉಂಟಾಗುವ ಬದಲಾವಣೆಯನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ: ಚುನಾವಣೆ ಸೇರಿದಂತೆ ಜೀವನದ ಪ್ರತಿ ಅಂಶದ ಮೇಲೂ ಕೋವಿಡ್ 19 ಪರಿಣಾಮ ಬೀರಿದೆ. ನಮ್ಮೆಲ್ಲರಿಗೂ ಇದು ಹೊಸ ಸವಾಲುಗಳನ್ನು ಒಡ್ಡಿದೆ. ಈ ಸನ್ನಿವೇಶದಲ್ಲಿ ಚುನಾವಣೆಗಳನ್ನು ನಡೆಸುವುದು ಸುಲಭವಲ್ಲ. ಸಂಪನ್ಮೂಲಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಮೊದಲೇ ಯೋಜನೆ ರೂಪಿಸುವುದು ಯಶಸ್ಸಿನ ಪ್ರಮುಖ ಸೂತ್ರವಾಗಿದೆ. ಇತ್ತೀಚೆಗೆ ನಡೆಸಿದ ರಾಜ್ಯಸಭೆ ಚುನಾವನೆಯ ವ್ಯಾಪ್ತಿ ಕಡಿಮೆಯಾಗಿತ್ತು. ಆದರೆ, ನಮ್ಮ ಹೊಸ ನೀತಿ ಸಂಹಿತೆಯ ಪರೀಕ್ಷೆ ಅಲ್ಲಿ ನಡೆದಿದೆ ಮತ್ತು ಅಲ್ಲಿನ ಅನುಭವದಿಂದ ನಾವು ಅವುಗಳನ್ನು ಪರಿಷ್ಕರಿಸುತ್ತಿದ್ದೇವೆ. ಸಾಗಾಟದಲ್ಲಿ ಬದಲಾವಣೆ ಉಂಟಾಗಬೇಕಿದೆ ಎಂಬುದನ್ನು ಆಯೋಗ ಮನಗಂಡಿದೆ. ಅದಕ್ಕೆ ಅನುಗುಣವಾಗಿ ವಿಧಾನಸಭೆ ಚುನಾವಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ಪ್ರಯಾಣದ ಮೇಲೆ ಹೇರಿರುವ ನಿರ್ಬಂಧದ ಕುರಿತು ಅನುಭವವನ್ನು ನೀವು ಹೇಗೆ ಹಂಚಿಕೊಳ್ಳುತ್ತೀರಿ?

ಉತ್ತರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಹಾರಾಟ ನಿರ್ಬಂಧ ಸೇರಿದಂತೆ ಎಲ್ಲ ಕಡೆ ಹೇರಿರುವ ಪ್ರಯಾಣ ನಿರ್ಬಂಧಗಳು ಹಿಂದೆಂದೂ ಕಂಡು ಕೇಳರಿಯದಂಥದ್ದು. ಈ ವರ್ಷದ ಮಾರ್ಚ್ 7 ರಂದು ನಾನು ಮಿಶಿಗನ್ಗೆ ಹೊರಟಾಗಿ 2020 ಏಪ್ರಿಲ್ 4 ರಂದು ವಾಪಸಾಗುವ ಯೋಚನೆ ಇತ್ತು. ಪ್ರಯಾಣ ನಿರ್ಬಂಧ ಇದ್ದಾಗಲೂ ಚುನಾವಣಾ ಆಯೋಗದ ಕೆಲಸಗಳಿಗೆ ಅಡ್ಡಿ ಉಂಟಾಗಲು ನಾವು ಅವಕಾಶ ನೀಡಿಲ್ಲ. ಈ ಕಾಲದ ತಂತ್ರಜ್ಞಾನವು ಹಲವು ಮಿತಿಗಳನ್ನು ನಿವಾರಿಸಿದೆ. ಜಗತ್ತಿನ ಯಾವುದೇ ಮೂಲೆಯಲ್ಲೇ ಇದ್ದರೂ ಸಂವಹನದ ಅಡ್ಡಿಯನ್ನು ತಂತ್ರಜ್ಞಾನವು ನಿವಾರಿಸುತ್ತದೆ. ಬೇರೆ ಸಮಯ ವಲಯದಲ್ಲಿ ಇದ್ದರೂ ನನ್ನ ಸಹೋದ್ಯೋಗಿಗಳ ಜೊತೆಗೆ ಸಂಪರ್ಕದಲ್ಲಿ ಇರಲು ಸಾಧ್ಯವಾಗಿದೆ ಮತ್ತು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಸಾಮಾನ್ಯ ಸಮಸ್ಯೆಗಳನ್ನು ಹೊರತುಪಡಿಸಿ, ಅಮೆರಿಕದಿಂದಲೇ ನಾನು ಸಂಪೂರ್ಣವಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ಆಯೋಜಿಸಲು ಸಾಧ್ಯವಾಯಿತು. 2020 ಮೇ 1 ರಂದು ನಡೆದ ಈ ಸಭೆಯಲ್ಲಿ ಒಂಬತ್ತು ಕ್ಷೇತ್ರಕ್ಕಾಗಿ ಮಹಾರಾಷ್ಟ್ರದ ಪರಿಷತ್ ಚುನಾವಣೆಗಳ ವೇಳಾಪಟ್ಟಿ ನಿರ್ಧರಿಸಲು ಸಾಧ್ಯವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.