ಹೈದರಾಬಾದ್ : ಕೋವಿಡ್-19ರ ಪಿಡುಗನ್ನು ಹತ್ತಿಕ್ಕುವ ಪ್ರಯತ್ನದಲ್ಲಿರುವ ಎಲ್ಲಾ ದೇಶಗಳನ್ನು ಬೆಂಬಲಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಭದ್ರತೆ ಮತ್ತು ಸನ್ನದ್ಧತೆ ವಿಭಾಗವು ವಿವಿಧ ಮಾದರಿಗಳನ್ನು ಅಭಿವೃದ್ಧಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಡನ್‍ನ ಇಂಪೀರಿಯಲ್ ಕಾಲೇಜಿನಲ್ಲಿ ಅಭಿವೃದ್ಧಿಪಡಿಸಲಾದ ಮಾದರಿ ಪ್ರಕಾರ ಕೋವಿಡ್-19ರಿಂದಾಗಿ ಬ್ರಿಟನ್‍ನ ಸುಮಾರು 5 ಲಕ್ಷ ಜನರು ಮತ್ತು ಅಮೆರಿಕಾದಲ್ಲಿ 22 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಬಹುದು ಎಂದು ಮಾರ್ಚ್‍ನಲ್ಲಿಯೇ ಅಂದಾಜಿಸಲಾಗಿತ್ತು. ಆದರೆ, ಈ ವೈರಸ್ ಹರಡುವುದನ್ನು ತಡೆಗಟ್ಟಲು ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗಿರಲಿಲ್ಲ.
ಇದೇ ವೇಳೆ ವಿಶ್ವಾದ್ಯಂತ ವಿವಿಧ ಸರ್ಕಾರಗಳು ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಗಣಿತ ಮಾದರಿಗಳನ್ನು ಅವಲಂಬಿಸಿವೆ. ತಜ್ಞರ ಪ್ರಕಾರ ಗಣಿತ ಮಾದರಿಗಳನ್ನು ತಯಾರಿಸಲು ಬಳಸಿದ ದತ್ತಾಂಶಗಳ ವಿಶ್ಲೇಷಣೆಗೆ ಹೋಲಿಸಿದರೆ, ಕಂಪ್ಯೂಟರ್ ಪ್ರತ್ಯಾನುಕರಣೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ದತ್ತಾಂಶ ವಿಶ್ಲೇಷಣೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಫರ್ಗುಸನ್ ನೋಟ್‍ಗಳು ಈ ಸಂಬಂಧದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿವೆ.
ಆದರೆ, ಫರ್ಗುಸನ್ ಮತ್ತು ಇತರರಿಗೆ ಸಾರ್ಸ್ ಕೋವ್-2 ಹೇಗೆ ಹರಡುತ್ತದೆ ಎಂಬುದರ ಬಗೆಗೂ ಹೆಚ್ಚಿನ ಮಾಹಿತಿ ನೀಡಲು ಈವರೆಗೂ ಲಭ್ಯವಾಗಿಲ್ಲ. ಅದನ್ನು ಕೇವಲ ಅಂದಾಜು ಮಾಡಹುದಾಗಿದೆ ಅಷ್ಟೇ ಹೊರತು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಸಂಶೋಧನೆಗಳ ಪ್ರಕಾರ ಹೆಚ್ಚಿನ ಗಣಿತ ಮಾದರಿಗಳು ಹೇಗೆ ಕಾಯಿಲೆ ಹರಡುತ್ತಿದೆ ಎಂಬುದನ್ನು ಅನುಕರಿಸುತ್ತಿವೆ. ಆದರೆ, ಪ್ರತಿ ಅಧ್ಯಯನದ ಗುಂಪಿಗೂ ಬೇರೆ ಬೇರೆಯೇ ಮಾದರಿ ಲಭಿಸುತ್ತಿದ್ದು ಮತ್ತು ಅದನ್ನು ಹಲವಾರು ವರ್ಷಗಳಿಂದ ಅವುಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ. ಆದರೆ, ಈ ಅಧ್ಯಯನಕ್ಕೆ ಅನುಸರಿಸುತ್ತಿರುವ ಸಂಖ್ಯಾಶಾಸ್ತ್ರದ ಮಾದರಿಗಳು ಒಂದೇ..
1) ವೈರಸ್‍ನ ಸೋಂಕಿಗೆ ಜನ ಒಳಗಾಗುತ್ತಿದ್ದಾರೆಯೇ(ಎಸ್), 2) ಸೋಂಕು ತಗುಲಿದೆಯೇ ಮತ್ತು 3) ಅದರಿಂದಾಗಿ ಗುಣಮುಖರಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ? ಎಂಬ ಈ ಮೂರು ಸ್ಥಿತಿಗಳ ಆಧಾರದ ಮೇಲೆ ಮತ್ತು ಎಷ್ಟು ತ್ವರಿತವಾಗಿ ಈ ಸ್ಥಿತಿಗಳನ್ನು ತಲುಪುತ್ತಿದ್ದಾರೆ ಎಂಬ ಆಧಾರದ ಮೇಲೆ ಅಧ್ಯಯನಗಳನ್ನು ನಡೆಸಲಾಗುತ್ತಿದೆ.
ಮೇಲೆ ಹೇಳಿದ ಮೂರು ಸ್ಥಿತಿಗಳನ್ನು ಆಧರಿಸಿದ ಎಸ್‍ಐಆರ್ ಮಾದರಿಯನ್ನು ಅನುಸರಿಸಿ ಕೆಲವು ಊಹೆಗಳನ್ನು ಮಾಡಲಾಗಿದೆ. ಅವು ವೈರಸ್ ಸೋಂಕಿತ ಮನುಷ್ಯನಿಂದ ಇತರರಿಗೂ ಸೋಂಕು ಹರಡಬಹುದಾದ ಸಾಧ್ಯತೆಗಳು ದಟ್ಟವಾಗಿರುತ್ತದೆ ಎಂದು ಅಭಿಪ್ರಾಯಪಡುತ್ತವೆ. ಏಕೆಂದರೆ ಅವರು ಜನರ ಮಧ್ಯೆಯೇ ಇರುತ್ತಾರೆ. ಮತ್ತು ಈ ಸೋಂಕು ಪೀಡಿತರೆಲ್ಲರು ಅವರು ಸಾವನ್ನಪ್ಪುವವರೆಗೂ ಅಥವಾ ಗುಣಮುಖರಾಗುವವರೆಗೂ ಸಮಾನರು. ಅವರನ್ನು ಒಂದೇ ರೀತಿ ನೋಡಲಾಗುತ್ತದೆ. ಮಾದರಿಗಳನ್ನು ಸಿದ್ಧಪಡಿಸುವವರು ಜನರ ಚಟುವಟಿಕೆಗಳನ್ನು ವಿವಿಧ ರೀತಿಯಲ್ಲಿ ಅಭ್ಯಸಿಸುತ್ತಾರೆ.
ಸಮನಾಗಿರುವ ಮಾದರಿಗಳಲ್ಲಿ ಜನಸಾಮಾನ್ಯರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆದರೆ, ಈ ಗುಂಪುಗಳನ್ನು ಸಣ್ಣದಾಗಿ ವಿಂಗಡಿಸಿದಾಗಲೆಲ್ಲ, ಈ ಪ್ರಾತಿನಿಧಿಕ ಸಾಮಾಜಿಕ ಉಪವರ್ಗಗಳು ವಾಸ್ತವವನ್ನು ಹೆಚ್ಚು ಪ್ರತಿಬಿಂಬಿಸುತ್ತವೆ. ಆಗ ಮಾದರಿಗಳು ಇನ್ನಷ್ಟು ಜಟಿಲವಾಗುತ್ತಾ ಹೋಗುತ್ತವೆ. ಇಂಪೀರಿಯಲ್ ತಂಡ ಮಾರ್ಚ್ ಆರಂಭದಲ್ಲಿ ಹೇಳಿದ್ದ ಮಾದರಿಯ ಆಧಾರದ ಮೇಲೆ ಈ ಸಾಂಕ್ರಾಮಿಕ ರೋಗದ ಬಗೆಗೆ ಬ್ರಿಟನ್ ಸರ್ಕಾರ ತನ್ನ ಸಂಪೂರ್ಣ ನೀತಿಯನ್ನೇ ಬದಲಾಯಿಸಿತು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಸಂಶೋಧಕರು ಆರಂಭದಲ್ಲಿ ಸುಮಾರು ಶೇ.15 ರಷ್ಟು ಆಸ್ಪತ್ರಗೆ ದಾಖಲಾದ ಕೇಸುಗಳನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಬೇಕಾಗಬಹುದೆಂದು ಅಂದಾಜಿಸಿದ್ದರು. ಆದರೆ, ನಂತರದಲ್ಲಿ ಇದನ್ನು ಶೇ. 30ರಷ್ಟು ಎಂದು ಇನ್ನೊಮ್ಮೆ ಪರಿಷ್ಕರಿಸಲಾಯಿತು. ಇದನ್ನು ಮಾರ್ಚ್ 16ರಂದು ಅವರ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.