ETV Bharat / bharat

ಮಾಸ್ಕ್​ ಧರಿಸದ್ದಕ್ಕೆ 167 ಜನರಿಗೆ ದಂಡ: ಇದು ಒಡಿಶಾ ಪೊಲೀಸರ ಕ್ರಮ - ಕೋವಿಡ್ -19: ಮಾಸ್ಕ್​ ಧರಿಸದಿದ್ದಕ್ಕಾಗಿ 167 ಜನರಿಗೆ ದಂಡ ವಿಧಿಸಿದ ಒಡಿಶಾ ಪೊಲೀಸರು

ಜನರು ತಮ್ಮ ಮನೆಗಳಿಂದ ಹೊರಬರುವಾಗ ಮಾಸ್ಕ್​ ಧರಿಸಿಬೇಕೆಂದು ಒಡಿಶಾ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ ನಂತರ, ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ 167 ಜನರಿಗೆ ದಂಡ ವಿಧಿಸಲಾಯಿತು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಏಪ್ರಿಲ್ 9 ರಂದು ಮಾಸ್ಕ್​ ಕಡ್ಡಾಯಗೊಳಿಸಿತು.

COVID-19
ಕೋವಿಡ್ -19: ಮಾಸ್ಕ್​ ಧರಿಸದಿದ್ದಕ್ಕಾಗಿ 167 ಜನರಿಗೆ ದಂಡ ವಿಧಿಸಿದ ಒಡಿಶಾ ಪೊಲೀಸರು
author img

By

Published : Apr 14, 2020, 7:02 PM IST

ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್​ಡೌನ್​ ಮಾಡಿದ್ದು, ಈ ನಡುವೆ ಒಡಿಶಾ ಪೊಲೀಸರು ತಮ್ಮ ಮನೆಗಳಿಂದ ಹೊರಗೆ ಹೋಗುವಾಗ ಮಾಸ್ಕ್​ ಧರಿಸದಿದ್ದಕ್ಕಾಗಿ 167 ಜನರಿಗೆ ದಂಡ ವಿಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಭುವನೇಶ್ವರ-ಕಟಕ್ ಪೊಲೀಸ್ ಆಯುಕ್ತರು ದಂಡ ವಿಧಿಸಿದ್ದಾರೆ. ಇದು ಅವಳಿ ನಗರಗಳಲ್ಲಿ ಜನರು ತಮ್ಮ ಮನೆಗಳಿಂದ ಹೊರಬರುವಾಗ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಅಪರಾಧಿಗಳಿಗೆ ಮೊದಲ ಮೂರು ಉಲ್ಲಂಘನೆಗಳಿಗೆ 200 ರೂ. ಮತ್ತು ಅದರ ನಂತರದ ಪ್ರತಿ ಉಲ್ಲಂಘನೆಗೆ 500 ರೂ. ದಂಡ ವಿಧಿಸಲಾಗಿದೆ.

ಸೋಮವಾರ ಒಟ್ಟು 1,145 ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಗತ್ಯ ವಸ್ತುಗಳನ್ನು ಖರೀದಿಸಲು ಮನೆಗಳಿಂದ ಹೊರಬರುವಾಗ ವಾಹನಗಳನ್ನು ಬಳಸದಂತೆ ಪೊಲೀಸರು ಕೇಳಿಕೊಂಡಿದ್ದಾರೆ ಮತ್ತು ಬದಲಾಗಿ ಹತ್ತಿರದ ಅಂಗಡಿಗೆ ತೆರಳುವಂತೆ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

"ಜನರಿಗೆ ಎರಡು ದಿನಗಳ ಕಾಲ ನಿಯಮದ ಬಗ್ಗೆ ಅರಿವು ಮೂಡಿಸಲಾಯಿತು ಮತ್ತು ಪೊಲೀಸ್ ಸಿಬ್ಬಂದಿ ಹಲವಾರು ಸ್ಥಳಗಳಲ್ಲಿ ಮಾಸ್ಕ್​ಗಳನ್ನು ವಿತರಿಸಿದರು. ನಂತರ ದಂಡ ವಿಧಿಸಲಾಯಿತು" ಎಂದು ಪೊಲೀಸ್ ಆಯುಕ್ತ ಸುಧಾಂಶು ಸಾರಂಗಿ ಹೇಳಿದ್ದಾರೆ.

ಮತ್ತೊಂದೆಡೆ, ರಾಜ್ಯದ ಎಲ್ಲಾ 1,600 ಪೆಟ್ರೋಲ್ ಬಂಕ್​ಗಳಲ್ಲಿ ಮಾಸ್ಕ್​ ಧರಿಸದ ಜನರಿಗೆ ಇಂಧನವನ್ನು ನಿರಾಕರಿಸುತ್ತಿವೆ ಎಂದು ಉತ್ಕಲ್ ಪೆಟ್ರೋಲಿಯಂ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಲಾಥ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.