ETV Bharat / bharat

ಕೋವಿಡ್ -19 ಭೀತಿ: ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುನ್ನ ನಡೆಯುವ ಸರ್ವಪಕ್ಷ ಸಭೆಗೆ ಬ್ರೇಕ್​ - ಸಂಸತ್ತಿನ ಮಾನ್ಸೂನ್ ಅಧಿವೇಶನ

ಕೊರೊನಾ ಸೋಂಕಿನ ನಡುವೆಯೂ, ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಅವರು ಈ ಬಾರಿ ಸರ್ವಪಕ್ಷ ಸಭೆ ನಡೆಸುತ್ತಿಲ್ಲ.

covid-19-no-all-party-meeting-ahead-of-monsoon-session-of-parliament
ಕೋವಿಡ್ -19 ಹಿನ್ನೆಲೆ, ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಯಾವುದೇ ಪಕ್ಷದ ಸಭೆ ಇಲ್ಲ
author img

By

Published : Sep 13, 2020, 10:58 AM IST

Updated : Sep 13, 2020, 11:24 AM IST

ನವದೆಹಲಿ: ಕೋವಿಡ್-19 ಹಿನ್ನೆಲೆ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಅವರು ಸರ್ವಪಕ್ಷ ಸಭೆ ನಡೆಸುವುದಿಲ್ಲ ಎಂದು ವರದಿಯಾಗಿದೆ.

ಕಾರ್ಯಸೂಚಿಯನ್ನು ಚರ್ಚಿಸಲು ಮತ್ತು ಗುರಿಗಳನ್ನು ನಿಗದಿಪಡಿಸಲು ಸಂಸದೀಯ ಅಧಿವೇಶನಗಳನ್ನು ಪ್ರಾರಂಭಿಸುವ ಮೊದಲು ಸರ್ವಪಕ್ಷ ಸಭೆ ಕರೆಯಲಾಗುತ್ತದೆ. ಆದರೆ, ಇಂದು ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯ ಸಭೆ ಸಂಸತ್ತಿನಲ್ಲಿ ನಡೆಯಲಿದೆ.

ಸಂಸತ್ತಿನ ಮಾನ್ಸೂನ್ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಲಿದೆ. ಮಾನ್ಸೂನ್ ಅಧಿವೇಶನದಲ್ಲಿ ಯಾವುದೇ ಪ್ರಶ್ನಾವಳಿ ಸಮಯ ಮತ್ತು ಖಾಸಗಿ ಸದಸ್ಯರ ಉದ್ಯಮ ವ್ಯವಹಾರ ವಿಷಯ ಚರ್ಚೆ ಇರುವುದಿಲ್ಲ.

ಎಲ್ಲಾ ಉದ್ಯೋಗಿಗಳು ಮತ್ತು ಅಧಿಕಾರಿಗಳು ಅಧಿವೇಶನಕ್ಕೆ ಮುಂಚಿತವಾಗಿ ಆರ್​​ಟಿ-ಪಿಸಿಆರ್ ಕೋವಿಡ್-19 ಪರೀಕ್ಷೆಗೆ ಒಳಗಾಗುತ್ತಾರೆ. ಸೋಂಕು ಹರಡುವುದನ್ನು ಕಡಿಮೆ ಮಾಡಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ವಿನ್ಯಾಸಗೊಳಿಸಿದ ಮೊಬೈಲ್ ಆ್ಯಪ್ ಮೂಲಕ ಸಂಸದರ ಹಾಜರಾತಿಯನ್ನು ದಾಖಲಿಸಲಾಗುವುದು.

ಸೆಪ್ಟೆಂಬರ್ 14 ರಂದು ನಡೆಯುವ ಅಧಿವೇಶನದ ಮೊದಲ ದಿನ, ಲೋಕಸಭೆ, ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಸಭೆ ಸೇರುತ್ತದೆ. ರಾಜ್ಯಸಭೆ ಮಧ್ಯಾಹ್ನ 3 ರಿಂದ 7ರವರೆಗೆ ನಡೆಯಲಿದೆ.

Last Updated : Sep 13, 2020, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.