ETV Bharat / bharat

24 ಗಂಟೆಯಲ್ಲಿ ದಾಖಲೆಯ 25 ಸಾವಿರ ಕೇಸ್​, 500 ಸಾವು; ಹಲವು ರಾಜ್ಯಗಳಲ್ಲಿ ಲಾಕ್​ಡೌನ್​! - ಕೊರೊನಾ ವೈರಸ್​

ಕೊರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದ್ದು, ಒಟ್ಟು ಸೋಂಕಿತ ಕೇಸ್​​ ಈಗಾಗಲೇ ಏಳು ಲಕ್ಷದ ಗಡಿ ದಾಟಿದೆ.

COVID-19
COVID-19
author img

By

Published : Jul 9, 2020, 5:28 AM IST

ನವದೆಹಲಿ: ದೇಶಾದ್ಯಂತ ದಿನದಿಂದ ದಿನಕ್ಕೆ ಕೋವಿಡ್​-19 ಸೋಂಕಿತ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಹೊಸ ಕೇಸ್​ ಕಾಣಿಸಿಕೊಂಡಿವೆ.

ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇದೀಗ 7 ಲಕ್ಷ, 69 ಸಾವಿರ 41ಕ್ಕೆ ತಲುಪಿದೆ. ಜತೆಗೆ ಕಳೆದ 24 ಗಂಟೆಯಲ್ಲಿ 500 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ ಇದೀಗ 21 ಸಾವಿರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಪ್ರಪಂಚದಲ್ಲಿ ಭಾರತ ಇದೀಗ ಮೂರನೇ ಸ್ಥಾನದಲ್ಲಿದೆ.

ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಮುಂದಿನ ಏಳು ದಿನಗಳ ಕಾಲ ಲಾಕ್​ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಮಧ್ಯಪ್ರದೇಶದಲ್ಲಿ ಪ್ರತಿ ಭಾನುವಾರ ಹಾಗೂ ಪಾಟ್ನಾದಲ್ಲಿ 10ರಿಂದ 15ರವರೆಗೆ ಲಾಕ್​ಡೌನ್​ ಜಾರಿಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಹಾಕಿವೆ.

ದೇಶದಲ್ಲಿ ಇಲ್ಲಿಯವರೆಗೆ 1 ಕೋಟಿ 4 ಲಕ್ಷ 73 ಸಾವಿರದ 771 ಜನರಿಗೆ ಕೋವಿಡ್​ ಟೆಸ್ಟ್​ ಮಾಡಿಸಲಾಗಿದ್ದು, ಇದರಲ್ಲಿ 2 ಲಕ್ಷ 62 ಸಾವಿರ 679 ಸ್ಯಾಂಪಲ್​ 7ನೇ ಜುಲೈ ಮಾಡಲಾಗಿದೆ.

ದೇಶದಲ್ಲಿನ 7 ಲಕ್ಷದ 42 ಸಾವಿರ ಕೇಸ್​ಗಳಲ್ಲಿ ಸದ್ಯ 2 ಲಕ್ಷ 64 ಸಾವಿರ ಆ್ಯಕ್ಟಿವ್​ ಕೇಸ್​ಗಳಿದ್ದು, 4 ಲಕ್ಷ 56 ಸಾವಿರ ಜನರು ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ನಿನ್ನೆ 6,603 ಹೊಸ ಕೇಸ್​ ಕಾಣಿಸಿಕೊಂಡಿದ್ದು, 198 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲೂ 2,062 ಹೊಸ ಕೇಸ್​ ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಇದೀಗ 470ಕ್ಕೆ ಏರಿದೆ.

ಸದ್ಯ ಮಹಾರಾಷ್ಟ್ರದಲ್ಲಿ 2 ಲಕ್ಷದ 23 ಸಾವಿರ, ತಮಿಳುನಾಡಿನಲ್ಲಿ 1 ಲಕ್ಷದ 22 ಸಾವಿರ, ದೆಹಲಿಯಲ್ಲಿ 1 ಲಕ್ಷ, ಗುಜರಾತ್​ನಲ್ಲಿ 36 ಸಾವಿರ, ಉತ್ತರಪ್ರದೇಶ 28 ಸಾವಿರ, ತೆಲಂಗಾಣ 25 ಸಾವಿರ, ಕರ್ನಾಟಕ 25 ಸಾವಿರ, ಪಶ್ಚಿಮ ಬಂಗಾಳ 22 ಸಾವಿರ, ರಾಜಸ್ಥಾನ 20 ಸಾವಿರ, ಆಂಧ್ರಪ್ರದೇಶ 20 ಸಾವಿರ, ಹರಿಯಾಣ 17 ಸಾವಿರ, ಮಧ್ಯಪ್ರದೇಶದಲ್ಲಿ 15 ಸಾವಿರ ಕೇಸ್​ಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.