ಹೈದರಾಬಾದ್: ದೇಶದಲ್ಲಿ ಕೊರೊನಾ ಹರಡುವಿಕೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದೀಗ ಒಟ್ಟು ಸೋಂಕಿತ ಸಂಖ್ಯೆ 6 ಲಕ್ಷ ಗಡಿ ದಾಟಿದೆ. ಜತೆಗೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.ಈ ಮೂಲಕ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
ದೇಶದಲ್ಲಿ 2,20,114 ಲಕ್ಷಕ್ಕೂ ಅಧಿಕ ಆ್ಯಕ್ಟಿವ್ ಕೇಸ್ಗಳಿದ್ದು, 3,47,978 ಜನರು ಕೋವಿಡ್ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆ ಮಹಾಮಾರಿಯಿಂದ 17,400 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲೇ 500 ಜನರು ಸಾವನ್ನಪ್ಪಿದ್ದು, ಇಂದು 18,522 ಕೇಸ್ ಕಾಣಿಸಿಕೊಂಡಿವೆ.
ಶೇ.90ರಷ್ಟು ಕೋವಿಡ್ ಕೇಸ್ ಕೇವಲ 10 ರಾಜ್ಯಗಳಿಂದ ಕಂಡು ಬಂದಿದ್ದು, ಅವುಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ನವದೆಹಲಿ, ಗುಜರಾತ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ ಹಾಗೂ ಕರ್ನಾಟಕ ಸೇರಿಕೊಂಡಿವೆ.
ರಾಜ್ಯವಾರು ಕೋವಿಡ್ ಪ್ರಕರಣ
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು,ಅತಿ ಹೆಚ್ಚು ಜನರು ಗುಣಮುಖರಾಗುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿಂದು ಒಟ್ಟು 2442 ಹೊಸ ಪ್ರಕರಣ ಪತ್ತೆಯಾಗಿದ್ದು, 61 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತ ಸಂಖ್ಯೆ 89,802 ಆಗಿದ್ದು, 59,992 ಜನರು ಗುಣಮುಖರಾಗಿದ್ದಾರೆ. ಸದ್ಯ 27,007 ಸಕ್ರಿಯ ಪ್ರಕರಣಗಳಿವೆ.
ಮಧ್ಯಪ್ರದೇಶ: ಮಧ್ಯಪ್ರದೇಶ ಮುಖ್ಯಮಂತ್ರಿ ಕಿಲ್ ಕೊರೊನಾ ಕ್ಯಾಂಪೆನ್ ಆರಂಭಿಸಿದ್ದು, ಪ್ರತಿದಿನ 11,458 ತಂಡ ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದೆ. ಮುಂದಿನ 15 ದಿನಗಳ ಕಾಲ ಈ ಕ್ಯಾಂಪೆನ್ ನಡೆಯಲಿದೆ. ಸದ್ಯ ಮಧ್ಯಪ್ರದೇಶದಲ್ಲಿ 9344 ಸೋಂಕಿತ ಪ್ರಕರಣಗಳಿದ್ದು, ಇಂದು ಕೂಡ 268 ಹೊಸ ಪ್ರಕರಣ ಕಾಣಿಸಿಕೊಂಡಿವೆ.
ಗುಜರಾತ್: ಗುಜರಾತ್ನಲ್ಲಿಂದು 675 ಹೊಸ ಕೇಸ್ ಕಾಣಿಸಿಕೊಂಡಿದ್ದು, 21 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 33318 ಆಗಿದ್ದು, 1869 ಜನರು ಸಾವನ್ನಪ್ಪಿದ್ದಾರೆ.
ಜಮ್ಮು-ಕಾಶ್ಮೀರ: ಕಣಿವೆ ನಾಡಿನಲ್ಲಿ 198 ಹೊಸ ಪ್ರಕರಣ ದಾಖಲಾಗಿದ್ದು, ಉತ್ತರಾಖಂಡದಲ್ಲಿ 66, ಮಣುಪುರದಲ್ಲಿ 26, ಪಂಜಾಬ್ನಲ್ಲಿ 101, ಕೇರಳದಲ್ಲಿ 151 ಜನರಿಗೆ ಇಂದು ಕೋವಿಡ್ ದೃಢಪಟ್ಟಿದೆ.
ತಮಿಳುನಾಡು: ತಮಿಳುನಾಡಿನಲ್ಲಿ 3,882 ಕೋವಿಡ್ ಕೇಸ್ ಕಾಣಿಸಿಕೊಂಡಿದ್ದು, 63 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತ ಸಂಖ್ಯೆ 94049 ಆಗಿದೆ. ಜತೆಗೆ 1264 ಜನರು ಸಾವನ್ನಪ್ಪಿದ್ದು, ಇದೀಗ 39,856 ಸಕ್ರಿಯ ಪ್ರಕರಣಗಳಿವೆ.
ಪಶ್ಚಿಮ ಬಂಗಾಳದಲ್ಲೂ 611 ಹೊಸ ಪ್ರಕರಣ ಕಾಣಿಸಿಕೊಂಡಿದ್ದು, 15 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಂಖ್ಯೆ 19,170 ಆಗಿದೆ.
ರಾಜಸ್ಥಾನ: ಇಂದು 298 ಹೊಸ ಕೇಸ್ ಕಾಣಿಸಿಕೊಂಡಿದ್ದು, ಇದರಲ್ಲಿ 42 ಪ್ರಕರಣ ಜೈಪುರದಲ್ಲಿ ಕಾಣಿಸಿಕೊಂಡಿವೆ. ಸದ್ಯ ರಾಜಸ್ಥಾನದಲ್ಲಿ 18,312 ಸೋಂಕು ಕಾಣಿಸಿಕೊಂಡಿವೆ. ಜತೆಗೆ ಒಟ್ಟು ಸಾವಿನ ಸಂಖ್ಯೆ 421ಕ್ಕೆ ತಲುಪಿದೆ.
ಮಹಾರಾಷ್ಟ್ರ: 5,537 ಕೋವಿಡ್ ಕೇಸ್ ಕಾಣಿಸಿಕೊಂಡಿದ್ದು, 2,242 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣ 1,80,298 ಆಗಿದ್ದು, 8053 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 198 ಜನರು ನಿಧನರಾಗಿದ್ದಾರೆ.
ಕರ್ನಾಟಕ: ರಾಜ್ಯದಲ್ಲೂ ಕೊರೊನಾ ಅಬ್ಬರ ಜೋರಾಗಿದ್ದು, ಇಂದು 1272 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲೇ 735 ಜನರಿಗೆ ಕಾಣಿಸಿಕೊಂಡಿದ್ದು, ಈ ಮೂಲಕ 16,514ಕ್ಕೇರಿದೆ. ರಾಜ್ಯದಲ್ಲಿ 253 ಜನರು ಸಾವನ್ನಪ್ಪಿದ್ದಾರೆ.
ಹರಿಯಾಣದಲ್ಲಿ 393 ಹೊಸ ಕೇಸ್, ಲಡಾಕ್ನಲ್ಲಿ 17 ಕೇಸ್ ಕಾಣಿಸಿಕೊಂಡಿವೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿರುವ ಪ್ರಕಾರ, ಸದ್ಯ ಗುಣಮುಖರಾಗುತ್ತಿರುವ ಸಂಖ್ಯೆ ಶೇ.59.43 ಆಗಿದೆ.
ತೆಲಂಗಾಣ: ತೆಲಂಗಾಣದಲ್ಲಿಂದು 1018 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 788 ಜನರು ಗುಣಮುಖರಾಗಿದೆ. 881 ಕೇಸ್ ಗ್ರೇಟರ್ ಹೈದರಾಬಾದ್ನಲ್ಲಿ ಕಾಣಿಸಿಕೊಂಡಿದ್ದು, ಒಟ್ಟು ಸಂಖ್ಯೆ 17, 357ಆಗಿದೆ.