ETV Bharat / bharat

ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೂರ್ಣ ದಾಖಲಾತಿ ಖಚಿತಪಡಿಸಿಕೊಳ್ಳಿ: ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

author img

By

Published : Jan 10, 2021, 9:12 PM IST

ಪಠ್ಯಕ್ರಮವನ್ನು ಹೊರತುಪಡಿಸಿ ಇತರೆ ಪುಸ್ತಕಗಳನ್ನು ಓದಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಗ್ರಹಿಸುವಿಕೆ, ಸಂಖ್ಯಾ ಕೌಶಲ್ಯದೊಂದಿಗೆ ಓದುವುದನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಸಚಿವಾಲಯ ಸೂಚಿಸಿದೆ..

COVID-19 impact: Door-to-door survey to enroll students, relaxing detention norms recommended by Education Ministry
ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ನವದೆಹಲಿ : ಕೊರೊನಾ ತಗ್ಗಿರುವ ಹಿನ್ನೆಲೆ ಮಕ್ಕಳನ್ನು ಶಾಲೆಗೆ ಕರೆತರುವ ಉದ್ದೇಶಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸಲು ಮತ್ತು ಅವರ ದಾಖಲಾತಿಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಮನೆ-ಮನೆ ಸಮೀಕ್ಷೆ ನಡೆಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ.

ಈ ವರ್ಷ ಡ್ರಾಪ್‌ಔಟ್ ತಡೆಗಟ್ಟಲು ಹಾಗೂ ಕೆಲ ಮಾನದಂಡಗಳನ್ನು ಸಡಿಲಿಸಲು ಸಚಿವಾಲಯ ಶಿಫಾರಸು ಮಾಡಿದೆ. ಲಾಕ್​​ಡೌನ್​ನಿಂದ ಶಾಲೆಗಳನ್ನು ಸ್ಥಗಿತಗೊಳಿಸುವುದರಿಂದ ಕಲಿಕೆಯ ನಷ್ಟವನ್ನು ನಿವಾರಿಸುವ ಕ್ರಮಗಳನ್ನು ಈ ಮುಖಾಂತರ ಕೈಗೊಳ್ಳಲಾಗಿದೆ.

ಸಾಂಕ್ರಾಮಿಕ ಸಮಯದಲ್ಲಿ ಬಾಧಿತರಾದ ವಲಸೆ ಮಕ್ಕಳ ಗುರುತಿಸುವಿಕೆ ಹಾಗೂ ಶಾಲಾ ಪ್ರವೇಶ ಮಾಡಿಸಿ ಶಿಕ್ಷಣ ಮುಂದುವರೆಸಿಕೊಂಡು ಹೋಗಲು ಈ ಕ್ರಮ ಸರಿಯಾಗಿದೆ ಎಂದು ಸಚಿವಾಲಯ ಹೇಳಿದೆ.

ಶಾಲಾ ಮಕ್ಕಳಿಗೆ COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಸಮಸ್ಯೆ ಬಗೆಹರಿಸಲು ಹಾಗೂ ಅವರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಗೆ ಮಾಡಲು ಸರಿಯಾದ ಕಾರ್ಯತಂತ್ರವನ್ನು ರೂಪಿಸುವುದು ಪ್ರತಿ ರಾಜ್ಯ ಮತ್ತು ಯುಟಿಗೆ ಅಗತ್ಯವೆಂದು ಸಚಿವಾಲಯ ತಿಳಿಸಿದೆ.

6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಮನೆ-ಮನೆ ಸಮೀಕ್ಷೆಯ ಮೂಲಕ ಸರಿಯಾಗಿ ಗುರುತಿಸಿ, ಅವರ ದಾಖಲಾತಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲು ರಾಜ್ಯ ಮತ್ತು ಯುಟಿಗಳಿಗೆ ಸೂಚಿಸಲಾಗಿದೆ. ಹಾಗೆ ಶಾಲೆಗಳನ್ನು ತೆರೆದಾಗ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಮಾರ್ಗಸೂಚಿಗಳನ್ನೂ ಸಚಿವಾಲಯ ಹೊರಡಿಸಿದೆ.

ಗ್ರಾಮ ಮಟ್ಟದಲ್ಲಿ ಕ್ಲಾಸ್​ರೂಂ-ಆನ್-ವೀಲ್ಸ್ ತರಗತಿಗಳನ್ನು ನಡೆಸಿಕೊಡುವುದು. ಆನ್‌ಲೈನ್ ಮತ್ತು ಡಿಜಿಟಲ್ ವ್ಯವಸ್ಥೆಗೆ ಮಕ್ಕಳ ಪ್ರವೇಶವನ್ನು ಹೆಚ್ಚಿಸುವುದು. ಕಲಿಕೆಯ ನಷ್ಟ ಕಡಿಮೆ ಮಾಡಲು ಟಿವಿ ಮತ್ತು ರೇಡಿಯೊವನ್ನು ಬಳಸುವುದು ಮತ್ತು ಪಠ್ಯಪುಸ್ತಕಗಳು ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗನ್ನು ಹೆಚ್ಚಾಗಿ ಶಿಕ್ಷಣದ ಕಡೆ ಮುಖ ಮಾಡುವಂತೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ.

ಪಠ್ಯಕ್ರಮವನ್ನು ಹೊರತುಪಡಿಸಿ ಇತರೆ ಪುಸ್ತಕಗಳನ್ನು ಓದಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಗ್ರಹಿಸುವಿಕೆ, ಸಂಖ್ಯಾ ಕೌಶಲ್ಯದೊಂದಿಗೆ ಓದುವುದನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಸಚಿವಾಲಯ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.