ಜೋಧ್‌ಪುರ (ರಾಜಸ್ಥಾನ): ಎನ್-95 ಮಾಸ್ಕ್ಗಳು, ಏಪ್ರನ್‌ಗಳು, ಪಿಪಿಇ ಕಿಟ್‌ಗಳು ಇತ್ಯಾದಿಗಳನ್ನು ಕೇವಲ ಐದು ನಿಮಿಷಗಳಲ್ಲಿ ಸೋಂಕು ನಿವಾರಕಗೊಳಿಸಲು ಸಹಾಯ ಮಾಡುವ ಸಾಧನವನ್ನು ಜೋಧ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧಕರ ತಂಡ ಅಭಿವೃದ್ಧಿಪಡಿಸಿದೆ.
ಈ ಸಾಧನವು ನೇರಳಾತೀತ ಕಿರಣಗಳು(ಅಲ್ಟ್ರಾ ವೈಲಟ್) ಮತ್ತು ಆಕ್ಸಿಡೈಸಿಂಗ್ ನ್ಯಾನೊಟ್ಯೂಬ್‌ಗಳ ಸಹಾಯದಿಂದ ಉಪಕರಣವನ್ನು ಸ್ವಚ್ಛಗೊಳಿಸುತ್ತದೆ. ಜೋಧಪುರ ಜಿಲ್ಲಾಡಳಿತದ ನೇತೃತ್ವದಲ್ಲಿ ಜೋಧಪುರದ ಐಐಟಿ ಈ ಸಾಧನವನ್ನು ಸಿದ್ಧಪಡಿಸಿದೆ.
ಪ್ರೊ.ಶಂತನು ಚೌಧರಿ ಮಾತನಾಡಿ, "ಈ ಸಾಧನವನ್ನು ತಯಾರಿಸಿದ ಬಳಿಕ ಜೋಧ್‌ಪುರದ ಏಮ್ಸ್ನಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿತ್ತು. 15 ದಿನಗಳ ಬಳಕೆಯ ನಂತರ ಗ್ರೀನ್ ಸಿಗ್ನಲ್ ನೀಡಲಾಗಿದೆ" ಎಂದರು.
ಈ ಸಾಧನವು ದಿನದಲ್ಲಿ ಸುಮಾರು 200 ಮಾಸ್ಕ್ಗಳನ್ನು ಸೋಂಕುರಹಿತಗೊಳಿಸಬಹುದಾಗಿದ್ದು, ಇದರಿಂದ ಮಾಸ್ಕ್ ಕೊರತೆಯ ಸಮಸ್ಯೆ ಪರಿಹಾರವಾಗಲಿದೆ.