ನವದೆಹಲಿ: ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡು ಪ್ರಪಂಚದ ಹಲವು ಭಾಗಗಳಿಗೆ ಹಬ್ಬಿರುವ ಕೊರೊನಾ ಸೋಂಕು ದಿನೇ ದಿನೇ ಹಲವರನ್ನು ಬಲಿ ಪಡೆಯುತ್ತಿದ್ದು, ನೆದರ್ಲ್ಯಾಂಡ್ನಲ್ಲಿ ಮೊದಲ ಸಾವು ದಾಖಲಾಗಿದೆ.
-
#BREAKING Netherlands health officials report first #coronavirus death pic.twitter.com/IoM7xcxCvP
— AFP news agency (@AFP) March 6, 2020 " class="align-text-top noRightClick twitterSection" data="
">#BREAKING Netherlands health officials report first #coronavirus death pic.twitter.com/IoM7xcxCvP
— AFP news agency (@AFP) March 6, 2020#BREAKING Netherlands health officials report first #coronavirus death pic.twitter.com/IoM7xcxCvP
— AFP news agency (@AFP) March 6, 2020
ಕೊರೊನಾ ಸೋಂಕು ತಗುಲಿದ್ದ 86 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತ ಚೀನಾದಲ್ಲಿ ಕೂಡ ಸಾವಿನ ಸರಣಿ ಮುಂದುವರೆದಿದ್ದು, ಇಲ್ಲಿಯವರೆಗೆ 3,042 ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಹೊಸದಾಗಿ 31 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 23,784 ಜನ ಚಿಕಿತ್ಸೆ ಪಡೆಯುತ್ತಿದ್ದು, 5,737 ಮಂದಿ ಗಂಭೀರವಾಗಿದ್ದಾರೆ. ಇಲ್ಲಿಯವರೆಗೆ 53,726 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಅದರ ನಿರ್ವಹಣೆಗಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ನವದೆಹಲಿಯ ವ್ಯಕ್ತಿಯೋರ್ವನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಇಲ್ಲಿಯವರೆಗೆ 31 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.