ETV Bharat / bharat

ಶ್ವಾಸಕೋಶದ ಹೊರತಾಗಿ ಇತರ ಅಂಗಗಳ ಮೇಲೂ ಕೊರೊನಾ ಪರಿಣಾಮ ಬೀರಬಹುದು: ಏಮ್ಸ್​

ಕೋವಿಡ್​ -19 ಕೇವಲ ಶ್ವಾಸಕೋಶ ಮಾತ್ರವಲ್ಲದೇ, ದೇಹದ ಅನೇಕ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಏಮ್ಸ್​ ವೈದ್ಯರ ತಂಡ ತಿಳಿಸಿದೆ.

ಕೊರೊನಾ
ಕೊರೊನಾ
author img

By

Published : Aug 27, 2020, 12:30 PM IST

ನವದೆಹಲಿ: ಶ್ವಾಸಕೋಶ ಮಾತ್ರವಲ್ಲದೇ ದೇಹದ ಎಲ್ಲ ಅಂಗಗಳ ಮೇಲೆ ಕೊರೊನಾ ಪರಿಣಾಮ ಬೀರಬಹುದು ಎಂದು ಏಮ್ಸ್​ನ ತಜ್ಞರ ತಂಡ ತಿಳಿಸಿದೆ.

ಕೇವಲ ಉಸಿರಾಟದ ರೋಗಲಕ್ಷಣಗಳ ಆಧಾರದ ಮೇಲೆ ಪ್ರಕರಣಗಳನ್ನು ಸೌಮ್ಯ, ಮಧ್ಯಮ ಮತ್ತು ತೀವ್ರ ವರ್ಗಗಳಾಗಿ ವರ್ಗೀಕರಿಸಲಾಗುವುದಿಲ್ಲ. ಏಕೆಂದರೆ ಇತರ ಅಂಗಗಳ ಮೇಲೂ ಕೊರೊನಾದ ಪ್ರಭಾವ ಇರುತ್ತದೆ ಎಂದು ಅವರು ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ಡಾ.ರಂದೀಪ್ ಗುಲೇರಿಯಾ, ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ವಿ.ಪದ್ಮ ಶ್ರೀವಾಸ್ತವ, ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಅಂಬುಜ್ ರಾಯ್, ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನೀರಜ್ ನಿಸ್ಚಾಲ್ ಸೇರಿದಂತೆ ಕೆಲ ತಜ್ಞರು ಆಯೋಜಿಸಿದ "ಕೊರೊನಾದಿಂದ ಶ್ವಾಸಕೋಶಗಳ ಮೇಲೆ ಸಂಭವಿಸಬಹುದಾದ ಸಮಸ್ಯೆಗಳ ಕುರಿತಾದ ಚರ್ಚೆ"ಯಲ್ಲಿ ಈ ವಿಚಾರವಾಗಿ ಮಾತನಾಡಿದರು.

ಕೊರೊನಾ ದೇಶಕ್ಕೆ ಕಾಲಿಟ್ಟು 8 ತಿಂಗಳಾಗಿದೆ. ಈ ಸಂದರ್ಭದಲ್ಲಿ ಅನೇಕ ವಿಚಾರಗಳನ್ನು, ಕಾರ್ಯತಂತ್ರಗಳನ್ನು ಕಲಿತಿದ್ದು, ಅವುಗಳಿಗೆ ಬೇಕಾದಂತೆ ಬದಲಾಯಿಸಲಾಗುತ್ತಿದೆ ಎಂದು ತಜ್ಞರು ಹೇಳಿದರು.

ಇನ್ನು ಕೊರೊನಾ, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ಎಸಿಇ-2 ಎಂಬ ಕೋಶದ ಗ್ರಾಹಕದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಈ ಹಿನ್ನೆಲೆಯಲ್ಲಿ ಶ್ವಾಸಕೋಶಗಳಲ್ಲಿ ಹೇರಳವಾಗಿ ವೈರಸ್​ ಕಂಡು ಬರುತ್ತದೆ. ಆದರೆ, ಅವುಗಳು ದೇಹದ ಅನೇಕ ಅಂಗಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಇದರಿಂದ ಪರಿಣಾಮ ಹೆಚ್ಚಿರಬಹುದು ಎಂದು ಡಾ. ಗುಲೇರಿಯಾ ಹೇಳಿದರು.

"ಈ ಸಾಂಕ್ರಾಮಿಕ ಸಮಯದಲ್ಲಿ ವೈದ್ಯರಾಗಿರುವ ನಾವು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಮೂಲಕ ರೋಗಿಗಳನ್ನು ಪರೀಕ್ಷಿಸುವಾಗ, ಚಿಕಿತ್ಸೆ ನೀಡುವಾಗ ನಾವು ಅವರಿಗೆ ಉತ್ತಮ ಗುಣಮಟ್ಟದ ಆರೈಕೆ ಒದಗಿಸಬಹುದು" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.