ನವದೆಹಲಿ: ಕಳೆದ ವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದ ನವದೆಹಲಿ ಮೂಲದ ಪಿಜ್ಜಾ ಡೆಲಿವರಿ ಬಾಯ್ ಜೊತೆ ಸಂಪರ್ಕಕ್ಕೆ ಬಂದಿದ್ದ ಹೆಚ್ಚಿನ ಅಪಾಯದ ಸಾಧ್ಯತೆ ಹೊಂದಿದ್ದ 16 ಮಂದಿಯಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಪ್ರಿಲ್.14 ರಂದು ಪಿಜ್ಜಾ ಡೆಲಿವರಿ ಬಾಯ್ಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಹೀಗಾಗಿ ಆತನಿಂದ ಪಿಜ್ಜಾ ಸ್ವೀಕರಿಸಿದ್ದ 72 ಕುಟುಂಬಗಳನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಹೆಚ್ಚಿನ ಅಪಾಯದ ಸಾಧ್ಯತೆ ಹೊಂದಿದ್ದ 16 ಮಂದಿಯಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ಇವರೆಲ್ಲರೂ ಆತನ ಜೊತೆ ಕೆಲಸ, ಮಾಡುತ್ತಿದ್ದ ಸಹೋದ್ಯೋಗಿಗಳಾಗಿದ್ದಾರೆ ಎಂದು ದಕ್ಷಿಣ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎಂ. ಮಿಶ್ರಾ ತಿಳಿಸಿದ್ದಾರೆ.
72 ಕುಟುಂಬಗಳ ಸದಸ್ಯರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡುಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೋವಿಡ್-19 ಪರೀಕ್ಷೆ ನಡೆಸಿಲ್ಲ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.