ಗಾಜಿಯಾಬಾದ್(ಯು.ಪಿ): ತಮ್ಮ 9 ತಿಂಗಳ ಮಗುವನ್ನು ಬಿಟ್ಟು ತಮ್ಮ ನಿವಾಸದೊಳಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾಪುರಂನ ಜ್ಞಾನ ಖಾಂಡ್ನಲ್ಲಿ ನಡೆದಿದೆ.
ಮೃತ ದಂಪತಿಗಳನ್ನು ನಿಖಿಲ್ ಕುಮಾರ್ (31) ಮತ್ತು ಅವರ ಪತ್ನಿ ಪಲ್ಲವಿ ಭೂಷಣ್ (28) ಎಂದು ಪೊಲೀಸರು ಗುರುತಿಸಿದ್ದಾರೆ. ಈ ದಂಪತಿ ಪಾಟ್ನಾ ಮೂಲದವರಾಗಿದ್ದು, ಕಳೆದೊಂದು ವರ್ಷದಿಂದ ಬಾಡಿಗೆ ವಸತಿ ಮನೆಯಲ್ಲಿ ಇಂದಿರಾಪುರಂನಲ್ಲಿ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ವಿವಾಹವಾದ ಇವರಿಗೆ 9 ತಿಂಗಳ ಗಂಡು ಮಗುವಿತ್ತು. ಈಗ ಆ ಮಗುವನ್ನು ಬಿಟ್ಟು ಇಬ್ಬರೂ ಸಾವಿಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿಲ್ಲ. ಆದರೆ ಮಹಿಳೆಯು ಎಡಗೈ ಕುಯ್ದುಕೊಂಡಿದ್ದಾಳೆ. ದಂಪತಿ ನೇಣು ಹಾಕಿಕೊಳ್ಳಲು ಗಾಮ್ಚಾ (ಶಾಲು) ಬಳಸಿಕೊಂಡಿದ್ದಾರೆ. ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನೋಯ್ಡಾದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಕುಮಾರ್ ಕೆಲಸ ಮಾಡುತ್ತಿದ್ದರೆ, ಭೂಷಣ್ ಗೃಹಿಣಿಯಾಗಿದ್ದರು. ಕುಮಾರ್ ಅವರ ದೇಹವು ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪಲ್ಲವಿ ಶವ ಲಿವಿಂಗ್ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಭೂಷಣ್ ಅವರ ದೇಹ ನೇತಾಡುತ್ತಿದ್ದ ಡ್ರಾಯಿಂಗ್ ರೂಂನಲ್ಲಿ ಅವರ ಮಗು ಆಡುತ್ತಿರುವುದನ್ನು ಪೊಲೀಸರು ನೋಡಿದ್ದಾರೆ.
ಆತ್ಮಹತ್ಯೆಗೆ ಮುಂಚಿತವಾಗಿ ಭೂಷಣ್ ಗ್ರೇಟರ್ ನೋಯ್ಡಾದಲ್ಲಿ ವಾಸಿಸುವ ತನ್ನ ತಂಗಿಗೆ ಸಂದೇಶ ಕಳುಹಿಸಿ, ಬೆಳಿಗ್ಗೆ 6 ಗಂಟೆಗೆ ತಮ್ಮ ನಿವಾಸಕ್ಕೆ ಬಂದು ಮಗುವನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ ಎಂದು ಆ ಪ್ರದೇಶದ ನಿವಾಸಿ ತಿಳಿಸಿದ್ದಾರೆ.
ಪಲ್ಲವಿ ವಾಟ್ಸ್‌ಆ್ಯಪ್‌ನಲ್ಲಿ ಮುಂಜಾನೆ 3: 46 ಕ್ಕೆ ಅಂಜಲಿ (ಭೂಷಣ್ ಸಹೋದರಿ) ಗೆ ಮೆಸೇಜ್ ಮಾಡಿದ್ದಳು. ಬೆಳಿಗ್ಗೆ 6.30 ರ ಸುಮಾರಿಗೆ ಅಂಜಲಿ ಸಂದೇಶವನ್ನು ಓದಿದ್ದಾಳೆ. ತಕ್ಷಣ ತನ್ನ ಸಹೋದರಿ ಮತ್ತು ಸೋದರ ಮಾವನಿಗೆ ಕರೆ ಮಾಡಿದ್ದಾಳೆ. ಅವರು ಅವಳ ಕರೆಗಳಿಗೆ ಸ್ಪಂದಿಸದಿದ್ದಾಗ, ಅವಳು ಇಂದಿರಾಪುರಂನಲ್ಲಿ ವಾಸಿಸುತ್ತಿದ್ದ ತನ್ನ ಸ್ನೇಹಿತೆಗೆ ಅವರ ನಿವಾಸದಲ್ಲಿ ಪರೀಕ್ಷಿಸಲು ಹೇಳಿದ್ದಾಳೆ.
ಆಕೆ ಅಲ್ಲಿಗೆ ಹೋದಾಗ, ಬಾಗಿಲುಗಳು ತೆರೆದಿತ್ತು, ಭೂಷಣ್ ದೇಹವು ಫ್ಯಾನ್‌ನಲ್ಲಿ ನೇತಾಡುತ್ತಿರುವುದನ್ನು ಅವಳು ನೋಡಿದ್ದಾಳೆ. ಕೂಡಲೇ ಮೇಘಾ ಈ ಬಗ್ಗೆ ಅಂಜಲಿಗೆ ಮಾಹಿತಿ ನೀಡಿ ನೆರೆಹೊರೆಯವರಿಗೂ ಮಾಹಿತಿ ನೀಡಿದರು. ಅವರಲ್ಲಿ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ನಮ್ಮ ತಂಡವು ಬೆಳಿಗ್ಗೆ 7.40 ರ ಸುಮಾರಿಗೆ ಸ್ಥಳವನ್ನು ತಲುಪಿತು ಎಂದು ಅದೇ ಪ್ರದೇಶದ ನಿವಾಸಿ ಘಟನೆಯನ್ನು ವಿವರಿಸಿದರು. ಸದ್ಯ ಅಂಜಲಿ ಮಗುವನ್ನು ಪಡೆದುಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ.