ಭೋಪಾಲ್ (ಮಧ್ಯಪ್ರದೇಶ): ರಾಜೀವ್ ಗಾಂಧಿ ಪ್ರತಿಷ್ಠಾನ (ಆರ್‌ಜಿಎಫ್) ಚೀನಾದಿಂದ ಹಣ ಏಕೆ ತೆಗೆದುಕೊಂಡಿತು ಎಂದು ದೇಶದ ಜನರು ತಿಳಿದುಕೊಳ್ಳಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
"ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣ ಏಕೆ ತೆಗೆದುಕೊಂಡಿತು ಎಂದು ದೇಶ ತಿಳಿಯಲು ಬಯಸುತ್ತದೆ ಸೋನಿಯಾ ಗಾಂಧಿ ದೇಶಕ್ಕೆ ಸತ್ಯ ಹೇಳಬೇಕಾಗುತ್ತದೆ. ಅವರು ಚೀನಾದಿಂದ ದೇಣಿಗೆ ಪಡೆಯುತ್ತಿದ್ದು, ಚೀನೀ ಕಮ್ಯುನಿಸ್ಟ್ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅವರು ದೇಶದ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ದೇಶವನ್ನು ರಕ್ಷಿಸುವ ವಿಷಯದಲ್ಲಿ ಮಾತನಾಡುವ ಹಕ್ಕನ್ನೂ ಸಹ ಹೊಂದಿಲ್ಲ" ಎಂದು ಚೌಹಾಣ್ ಹೇಳಿದ್ದಾರೆ.
"2005-06ರಲ್ಲಿ ಚೀನಾವು ಕಾಂಗ್ರೆಸ್ಗೆ 90 ಲಕ್ಷ ರೂ. ದೇಣಿಗೆ ನೀಡಿತ್ತು. ಆ ಸಮಯದಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದರು. ಜವಾಹರಲಾಲ್ ನೆಹರೂ ಚೀನಾವನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯರನ್ನಾಗಿ ಮಾಡುವಂತೆಯೂ ಪ್ರತಿಪಾದಿಸಿದ್ದರು" ಎಂದು ಅವರು ಹೇಳಿದ್ದಾರೆ.