ETV Bharat / bharat

ಬಿಹಾರದ ಆರ್ಥಿಕತೆ ಸುಧಾರಿಸುವಲ್ಲಿ ನಿತೀಶ್ ಕುಮಾರ್ ಉತ್ತಮವಾಗಿ ಕೆಲಸ ಮಾಡಿದ್ದಾರಾ? - ಬಿಹಾರದ ಆರ್ಥಿಕತೆ

ಬಿಹಾರದ ಸ್ಥಿತಿ ಅತ್ಯಂತ ಕೆಟ್ಟದಾಗಿದ್ದಾಗ ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದಿದ್ದರು. ಆ ಸಮಯದಲ್ಲಿ ನಿತೀಶ್ ಕುಮಾರ್ ಅವರಿಂದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಜನರು ಅಂದುಕೊಂಡಂತೆ ಯಾವುದೇ ಪವಾಡ ಸಂಭವಿಸಿಲ್ಲ.

nithish
nithish
author img

By

Published : Oct 27, 2020, 8:22 PM IST

ಪಾಟ್ನಾ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಅಕ್ಟೋಬರ್ 28ರಂದು ನಡೆಯಲಿದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆತ್ಮವಿಶ್ವಾಸದಿಂದ ಇರುವಂತೆ ಕಾಣುತ್ತಿಲ್ಲ ಮತ್ತು ಅವರ 'ವಿಕಾಸ್ ಪುರುಷ' ಎಂಬ ಚಿತ್ರಣವೂ ಎದ್ದುಕಾಣುತ್ತಿಲ್ಲ.

ನಿತೀಶ್ ಕುಮಾರ್ ಅವರ ಆಡಳಿತದ ಕಾರ್ಯಕ್ಷಮತೆಯು "ಅಭಿವೃದ್ಧಿ" ಮತ್ತು "ಉತ್ತಮ ಆಡಳಿತ" ಎಂಬ ಎರಡು ವಿಚಾರಗಳನ್ನು ಕೇಂದ್ರೀಕರಿಸಿದೆ.

2020ರ ಚುನಾವಣೆಯು ವಿಭಿನ್ನ ಸನ್ನಿವೇಶ ಪ್ರಸ್ತುತಪಡಿಸುತ್ತದೆ. ತಮ್ಮ 15 ವರ್ಷಗಳ ಆಳ್ವಿಕೆಯಲ್ಲಿ ನಿತೀಶ್ ಕುಮಾರ್ ಬಿಹಾರವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸುತ್ತಿರುವ ಇತರ ಪಕ್ಷಗಳು ಈ ಬಾರಿ ನಿತೀಶ್ ಕುಮಾರ್ ಅವರನ್ನು ಪ್ರಶ್ನಿಸುತ್ತಿವೆ.

ಬಿಹಾರದಲ್ಲಿ ಆರ್‌ಜೆಡಿ - ಕಾಂಗ್ರೆಸ್ ಆಳ್ವಿಕೆಯಲ್ಲಿ ಜನರು ಮೂಲ ಸೌಲಭ್ಯಗಳು, ರಸ್ತೆ, ನೀರು ಮತ್ತು ವಿದ್ಯುತ್‌ನಂತಹ ಸೌಲಭ್ಯಗಳಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಯಿತು ಮತ್ತು ಚಾಲ್ತಿಯಲ್ಲಿರುವ ‘ಜಂಗಲ್ ರಾಜ್’ ಭಯದಿಂದ ಕೈಗಾರಿಕೋದ್ಯಮಿಗಳು ಬಿಹಾರದಿಂದ ಪರಾರಿಯಾಗಿದ್ದಾರೆ ಎಂದು ಇತರ ಪಕ್ಷಗಳು ಆರೋಪಿಸುತ್ತಿವೆ.

ಬಿಹಾರದ ಸ್ಥಿತಿ ಅತ್ಯಂತ ಕೆಟ್ಟದಾಗಿದ್ದಾಗ ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದಿದ್ದರು. ಆ ಸಮಯದಲ್ಲಿ ನಿತೀಶ್ ಕುಮಾರ್ ಅವರಿಂದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರು ನಿತೀಶ್ ಕುಮಾರ್​ ಬದಲಾವಣೆ ತರುತ್ತಾರೆ ಎಂದು ಭಾವಿಸಿದ್ದರು.

ಆದರೆ ಜನರು ಅಂದುಕೊಂಡಂತೆ ಯಾವುದೇ ಪವಾಡ ಸಂಭವಿಸಿಲ್ಲ. ಬಿಹಾರವನ್ನು ಬದಲಾಯಿಸಲು ಅವರು ಪ್ರಯತ್ನಿಸಿದರೂ ಬದಲಾವಣೆಯಾಗಲಿಲ್ಲ.

ಬದಲಾದ ನಿತೀಶ್ ಕುಮಾರ್ ಚಿತ್ರಣ:

ನಿತೀಶ್ ಕುಮಾರ್ ಕುರಿತು ಸಾರ್ವಜನಿಕರ ಗ್ರಹಿಕೆ ಬದಲಾಗಿದೆ. ಈ ಹಿಂದಿದ್ದ ಚಿತ್ರಣ ಬದಲಾಗಿದೆ. ಅಭಿವೃದ್ಧಿ ಕುರಿತು ಅವರು ಮಾತುನಾಡುತ್ತಾರೆ ವಿನಃ ಬಿಹಾರದಲ್ಲಿ ಏಕೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಜನರು ಕೇಳುತ್ತಿದ್ದಾರೆ.

ಕೈಗಾರಿಕಾ ಹೂಡಿಕೆ ಬಿಹಾರಕ್ಕೆ ಏಕೆ ಬರುತ್ತಿಲ್ಲ?

ಬಿಹಾರಕ್ಕೆ ಏಕೆ ಹೂಡಿಕೆ ಬರುತ್ತಿಲ್ಲ? ಶಿಕ್ಷಣ ಪಡೆಯಲು ಯುವಕರು ಬೇರೆ ರಾಜ್ಯಗಳಿಗೆ ಏಕೆ ಹೋಗಬೇಕು? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬಿಹಾರ ಲ್ಯಾಂಡ್ - ಲಾಕ್ ರಾಜ್ಯವಾಗಿರುವುದರಿಂದ ಕೈಗಾರಿಕೆಗಳು ಬಿಹಾರಕ್ಕೆ ಬರಲು ಹಿಂಜರಿಯುತ್ತಿವೆ ಎಂಬ ನಿತೀಶ್ ಕುಮಾರ್ ಅವರ ವಿವರಣೆ ಇಂದಿನ ಯುವಕರಿಗೆ ಮನವರಿಕೆಯಾಗುತ್ತಿಲ್ಲ.

ಬಿಹಾರದ ಅಭಿವೃದ್ಧಿಯ ಕುರಿತಾದ ಹೇಳಿಕೆಗಳು ನಿಜವಾಗುತ್ತಿಲ್ಲ:

ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ಬಿಹಾರವು ಆರ್ಥಿಕವಾಗಿ ಹಿಂದುಳಿದಿದೆ. ನಿತೀಶ್ ಆಳ್ವಿಕೆಯಿಂದ ರಾಜ್ಯದ ಆರ್ಥಿಕತೆಯು ಭಾರಿ ಪ್ರಗತಿ ಸಾಧಿಸುತ್ತದೆ ಮತ್ತು ಬಿಹಾರ ಸಮೃದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ವಿರುದ್ಧವಾಗಿದೆ.

ಬಿಹಾರದ ಒಟ್ಟು ದೇಶೀಯ ಉತ್ಪನ್ನವು ಇತರ ರಾಜ್ಯಗಳ ಜಿಡಿಪಿಯಿಂದ ನಿರಂತರವಾಗಿ ಹಿಂದುಳಿದಿದೆ. ಜೆಡಿಯು - ಬಿಜೆಪಿ ನಿಯಮದಡಿ ಬಿಹಾರದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) 6.16 ಆಗಿದ್ದರೆ, ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 7.73ಕ್ಕಿಂತ ಹೆಚ್ಚಿವೆ.

ಉತ್ತಮ ಆರ್ಥಿಕ ಬೆಳವಣಿಗೆ ಸಾಧಿಸಲು ಬಿಹಾರಕ್ಕೆ ಸಾಧ್ಯವಾಯಿತೇ?

ಆರ್ಥಿಕ ವ್ಯವಹಾರಗಳ ಬಗ್ಗೆ ತಿಳಿದಿರುವ ಜನರ ಪ್ರಕಾರ, ವಾಸ್ತವ ಬೆಳವಣಿಗೆ ಬದಲು ಪ್ರಚಾರದ ಮೂಲಕವೇ ಹೆಚ್ಚಿನ ಸಾಧನೆ ಮಾಡಲಾಗಿದೆ. 2019ರಲ್ಲಿ ಬಿಹಾರದ ಬೆಳವಣಿಗೆಯ ದರವು ರಾಷ್ಟ್ರಮಟ್ಟದಲ್ಲಿ ಶೇಕಡಾ 11ರಷ್ಟಿತ್ತು. ಆದರೆ, ಶೇ 15ರಷ್ಟಿದೆ ಎಂದು ಹೇಳಲಾಗಿತ್ತು.

ಏರುತ್ತಿರುವ ರೈತರ ಸಮಸ್ಯೆಗಳು:

ಬಿಹಾರದ ಜನಸಂಖ್ಯೆಯ ಶೇಕಡಾ 70ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೂ ಇಲ್ಲಿನ ಪ್ರತಿ ಹೆಕ್ಟೇರ್ ಉತ್ಪಾದಕತೆ ಇತರ ರಾಜ್ಯಗಳಿಗಿಂತ ಕಡಿಮೆಯಾಗಿದೆ. ಬಿಹಾರದಲ್ಲಿ, ಒಂದು ಹೆಕ್ಟೇರ್‌ನಲ್ಲಿ 1679 ಕೆಜಿ ಧಾನ್ಯ ಉತ್ಪಾದಿಸಿದರೆ, ರಾಷ್ಟ್ರೀಯ ಸರಾಸರಿ ಹೆಕ್ಟೇರ್​ಗೆ 1,739 ಕೆ.ಜಿ. ಇದೆ. ಕೃಷಿಯಲ್ಲಿ ಹೆಚ್ಚಿನ ಹೂಡಿಕೆ ಇದ್ದಿದ್ದರೆ ಉತ್ಪಾದಕತೆ ಹೆಚ್ಚಾಗುತ್ತಿತ್ತು.

ಸಕ್ಕರೆ ಕಾರ್ಖಾನೆಗಳ ಮುಚ್ಚುವಿಕೆಯಿಂದಾಗಿ ಬಿಹಾರದ ರೈತರು ಹೆಚ್ಚು ತೊಂದರೆ ಅನುಭವಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಡಾ. ಸಂಜಯ್ ಕುಮಾರ್ ಹೇಳುತ್ತಾರೆ. ಬಿಹಾರದ ರೈತರು ತಮ್ಮ ಕಬ್ಬಿನ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತರ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಇದಲ್ಲದೇ ಸೆಣಬು, ಸಿಮೆಂಟ್ ಮತ್ತು ಪೇಪರ್ ಗಿರಣಿಗಳ ಮುಚ್ಚುವಿಕೆಯಿಂದ ರಾಜ್ಯದ ಆರ್ಥಿಕತೆಯೂ ನಷ್ಟ ಅನುಭವಿಸಿದೆ. ನಿತೀಶ್ ಕುಮಾರ್ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಆದರೆ, ಕೃಷಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಏನೂ ಮಾಡಲಿಲ್ಲ ಎಂದು ಸಂಜಯ್ ಕುಮಾರ್ ಹೇಳುತ್ತಾರೆ.

ಬೆಳವಣಿಗೆ ಕಾಣದ ಆರ್ಥಿಕತೆ: ಅರ್ಥಶಾಸ್ತ್ರಜ್ಞ ಡಾ.ಬಕ್ಷಿ ಅಮಿತ್ ಕುಮಾರ್ ಪ್ರಕಾರ, ಬಿಹಾರಕ್ಕೆ ಅಪಾರ ಸಾಮರ್ಥ್ಯವಿದೆ. ಆದರೆ, ಹೂಡಿಕೆ ಆಕರ್ಷಿಸಲು ಮೊದಲು ರಸ್ತೆಗಳು, ನೀರು ಮತ್ತು ವಿದ್ಯುತ್ ಒದಗಿಸುವುದು ಅವಶ್ಯಕ. ಬಿಹಾರಕ್ಕೆ ಸಂಭವಿಸಿದ ಕೆಟ್ಟ ಸಂಗತಿ ಎಂದರೆ ಅಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. 1990ರ ದಶಕದಲ್ಲಿ, ಕೈಗಾರಿಕಾ ಬೆಳವಣಿಗೆಯ ದರವು ಮೈನಸ್ 2 ಆಗಿತ್ತು. ಇದಲ್ಲದೇ ಕೈಗಾರಿಕೋದ್ಯಮಿಗಳ ದೃಷ್ಟಿಯಲ್ಲಿ ಬಿಹಾರದ ಕಾನೂನು ಸುವ್ಯವಸ್ಥೆ ಕೆಟ್ಟದಾಗಿತ್ತು ಎಂದು ಅವರು ಹೇಳುತ್ತಾರೆ.

ಇದಕ್ಕೆಲ್ಲ ಕಾರಣ ಐತಿಹಾಸಿಕ ಅಂಶಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಸಿದ್ದಾರೆ. ಉದಾಹರಣೆಗೆ, ರಾಜ್ಯವನ್ನು ವಿಭಜಿಸಿದಾಗಿನಿಂದ ಬಿಹಾರ ಸಮಸ್ಯೆಗಳನ್ನು ಎದುರಿಸಲಾರಂಭಿಸಿತು. ಬಿಹಾರವು ಅಭಿವೃದ್ಧಿಯಾಗದೇ ಇರಲು ಒಂದು ಮುಖ್ಯ ಕಾರಣ ಎಂದರೆ, ಅದರ ಎಲ್ಲ ಖನಿಜ ಉತ್ಪಾದನಾ ಪ್ರದೇಶಗಳು ಜಾರ್ಖಂಡ್‌ಗೆ ಹೋದವು. ಈ ಕಾರಣದಿಂದಾಗಿ ಬಿಹಾರ ಖನಿಜಗಳನ್ನು ಕಳೆದುಕೊಂಡಿರುವುದು ಮಾತ್ರವಲ್ಲದೇ, ಬಿಹಾರಕ್ಕೆ ಒಂದೇ ಒಂದು ಕೈಗಾರಿಕಾ ನಗರವೂ ​​ಸಿಗಲಿಲ್ಲ. 2005ರಿಂದ ಬಿಹಾರ ವಿಶೇಷ ಸ್ಥಾನಮಾನವನ್ನು ಕೋರಲು ಇದು ಕಾರಣವಾಗಿದೆ. ಆದರೆ, ಬಿಹಾರಕ್ಕೆ ಕೇವಲ ಭರವಸೆಗಳು ಹೊರತುಪಡಿಸಿ ಬೇರೇನೂ ಸಿಗಲಿಲ್ಲ.

2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ 1.25 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದರು. ಆದರೆ, ಅದು ಕೇವಲ ಚುನಾವಣಾ ಭರವಸೆಯಾಗಿಯೇ ಉಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.