ETV Bharat / bharat

ವಿಶೇಷ ಅಂಕಣ: ಭಾರತವು ಎಪಿಐ ಮೇಲಿನ ಅವಲಂಬನೆಗೆ ಅಂತ್ಯ ಹಾಡಬಹುದೆ..? - ಕೊರೋನಾ ವೈರಸ್‍ಗೆ ಚಿಕಿತ್ಸೆ

ಭಾರತವು ವಿಶ್ವದ ಮೂರನೇ ಅತಿದೊಡ್ಡ ಔಷಧೀಯ ಉದ್ಯಮ ಹೊಂದಿದೆ. ವಾಸ್ತವವಾಗಿ, ಕಳೆದ ಎರಡು ಮೂರು ದಶಕಗಳಲ್ಲಿ ಭಾರತದಲ್ಲಿ ಫಾರ್ಮಾ ಉದ್ಯಮವು ವಿಸ್ತರಿಸಿದೆ.

active pharmaceutical ingredient
ಭಾರತವು ಎಪಿಐ ಮೇಲಿನ ಅವಲಂಬನೆಗೆ ಅಂತ್ಯ ಹಾಡಬಹುದೆ..?
author img

By

Published : Apr 21, 2020, 10:44 AM IST

ನವದೆಹಲಿ: ಹೊಸ ಕೊರೋನಾ ವೈರಸ್‍ಗೆ ಇನ್ನೂ ಚಿಕಿತ್ಸೆ ಲಭ್ಯವಿಲ್ಲ. ಫಾರ್ಮಾ ಉದ್ಯಮವು ಸಹ ಔಷಧಿಗಳನ್ನು ಪ್ರಸ್ತುತಪಡಿಸಿಲ್ಲ. ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಕೆಲವು ಔಷಧಿಗಳು ಕೊವಿಡ್-19 ರೋಗಿಗಳಿಗೆ ಪರಿಹಾರವನ್ನು ನೀಡುತ್ತವೆ ಎಂದು ಸಾಬೀತಾಗಿದೆ. ಪರಿಣಾಮವಾಗಿ, ಅಂತಹ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅವುಗಳಲ್ಲಿ ಕೆಲವು ಎಚ್‌ಐವಿ ವಿರೋಧಿ, ಆಂಟಿಮಲೇರಿಯಲ್ ಮತ್ತು ಪ್ರತಿಜೀವಕ ಔಷಧಿಗಳನ್ನು ಒಳಗೊಂಡಿವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಔಷಧೀಯ ಉದ್ಯಮವಾಗಿದೆ. ವಾಸ್ತವವಾಗಿ, ಕಳೆದ ಎರಡು ಮೂರು ದಶಕಗಳಲ್ಲಿ ಭಾರತದಲ್ಲಿ ಫಾರ್ಮಾ ಉದ್ಯಮವು ವಿಸ್ತರಿಸಿದೆ.

ಆಫ್ರಿಕಾದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಹಿಡಿದು ಯುಎಸ್ ನಂತಹ ಅಭಿವೃದ್ಧಿ ಹೊಂದಿದ ದೇಶಗಳವರೆಗೆ ಹಲವಾರು ರಾಷ್ಟ್ರಗಳು ಭಾರತದಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಇದಲ್ಲದೆ, ಭಾರತವು ಆಂಟಿಮಲೇರಿಯಲ್ ಔಷಧಿಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಅಮೇರಿಕಾ, ಬ್ರೆಜಿಲ್ ಮತ್ತು ಇಸ್ರೇಲ್ ಸೇರಿದಂತೆ ಹಲವು ದೇಶಗಳು ಭಾರತಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸುವಂತೆ ವಿನಂತಿಸಿವೆ. ಅದೇ ಸಮಯದಲ್ಲಿ, ನಾವು ನಮ್ಮ ದೇಶೀಯ ಅಗತ್ಯಗಳನ್ನು ಕೂಡಾ ಪೂರೈಸಬೇಕಿದೆ. ಈ ಸಂದರ್ಭಗಳಲ್ಲಿ, ರಾಷ್ಟ್ರೀಯ ಔಷಧ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿವೆ. ಆದರೆ ಇಲ್ಲಿ ಸಮಸ್ಯೆಯಿದೆ, ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಫಾರ್ಮಾ ಕಂಪನಿಗಳು ಪ್ರಮುಖ ಪದಾರ್ಥಗಳ ಕೊರತೆಯನ್ನು ಎದುರಿಸುತ್ತಿವೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಂಪನಿಗಳು ತಮ್ಮ ಸಂಗ್ರಹವನ್ನು ಖಾಲಿ ಮಾಡಿವೆ. ಪದಾರ್ಥಗಳನ್ನು ಪೂರೈಸದ ಹೊರತು ಉತ್ಪಾದನೆಯನ್ನು ಮುಂದುವರಿಸುವುದು ಅಸಾಧ್ಯ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಸ್ಥಳೀಯ ಫಾರ್ಮಾ ಕಂಪನಿಗಳು ವಿಶೇಷವಾಗಿ ಎಚ್‌ಸಿಕ್ಯು ಉತ್ಪಾದನೆಗೆ ಅಗತ್ಯವಾದ ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ಕೊರತೆಯನ್ನು ಎದುರಿಸುತ್ತಿವೆ.

ಆಂಧ್ರ ಮತ್ತು ತೆಲಂಗಾಣದಲ್ಲಿನ ಫಾರ್ಮಾ ಕಂಪನಿಗಳು ಪ್ರಾಥಮಿಕವಾಗಿ ಎಚ್‌ಐವಿ ವಿರೋಧಿ ಔಷಧಿಗಳಾದ ಅಜಿಥ್ರೊಮೈಸಿನ್ ಮತ್ತು ಕ್ಲೋರೊಕ್ವಿನ್ ಅನ್ನು ಉತ್ಪಾದಿಸುತ್ತವೆ. ಪ್ರಸ್ತುತ, ಕ್ಲೋರೊಕ್ವಿನ್‌ಗೆ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯ ಔಷಧ ಕಂಪನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೊಕ್ವಿನ್ ಫಾಸ್ಫೇಟ್ ಮಾತ್ರೆಗಳನ್ನು ತಯಾರಿಸುತ್ತಿರುವುದರಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಔಷಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ ಉತ್ಪಾದನಾ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಎಪಿಐ ಸಂಗ್ರಹ ಇಲ್ಲ.

ಕೊವಿಡ್-19 ಪ್ರಾರಂಭವಾಗುವ ಮೊದಲು, ಎಚ್‍ಸಿಕ್ಯೂ ಟ್ಯಾಬ್ಲೆಟ್‌ಗಳಿಗೆ ಮಾರುಕಟ್ಟೆ ಇರಲಿಲ್ಲ. ಮಲೇರಿಯಾ, ರುಮಟಾಯ್ಡ್ ಸಂಧಿವಾತ ಮತ್ತು ಲೂಪಸ್ ಮುಂತಾದ ಕಾಯಿಲೆಗಳಿಗೆ ಇದನ್ನು ತಯಾರಿಸಲಾಗುತ್ತಿತ್ತು. ಎಚ್‍ಸಿಕ್ಯೂ ಬಳಕೆ ಮತ್ತು ರಫ್ತು ಕೂಡ ಕಡಿಮೆ ಇತ್ತು. ಪರಿಣಾಮವಾಗಿ, ಕಂಪನಿಗಳು ಎಚ್‍ಸಿಕ್ಯೂ ಉತ್ಪಾದನೆಗೆ ಅಗತ್ಯವಾದ ಎಪಿಐ ಸಂಗ್ರಹಣೆಯತ್ತ ಗಮನಹರಿಸಿಲಿಲ್ಲ. ಕೊವಿಡ್-19 ಸಂಭವಿಸಿದ ನಂತರ ಎಚ್‍ಸಿಕ್ಯೂ ಗೆ ಬೇಡಿಕೆ ಹೆಚ್ಚಾಗಿದೆ. ಫಾರ್ಮಾ ಕಂಪನಿಗಳು ಎಪಿಐಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿ ಉತ್ಪಾದಿಸಲು ಪ್ರಾರಂಭಿಸಿದವು. ಎಪಿಐನ ಹೊಸ ಸ್ಟಾಕ್ ಅನ್ನು ಆಮದು ಮಾಡಿಕೊಳ್ಳದ ಹೊರತು ಹೆಚ್ಚಿನ ಉತ್ಪಾದನೆಯನ್ನು ಇನ್ನು ಮುಂದುವರಿಸಲು ಸಾಧ್ಯವಿಲ್ಲ.

ಕ್ಲೋರೊಕ್ವಿನ್ ತಯಾರಕರಲ್ಲಿ ಪ್ರಮುಖ ಔಷಧೀಯ ಉದ್ಯಮಗಳಾದ ಇಪ್ಕಾ ಲ್ಯಾಬೊರೇಟರೀಸ್, ಝೈಡಸ್, ಸಿಪ್ಲಾ ಮತ್ತು ಹೈದರಾಬಾದ್ ಮೂಲದ ಹೆಟೆರೊ ಡ್ರಗ್ಸ್, ನ್ಯಾಟ್ಕೊ ಫಾರ್ಮಾ ಮತ್ತು ಲಾರಸ್ ಲ್ಯಾಬ್ಸ್ ಅನ್ನು ಒಳಗೊಂಡಿದೆ. ಅವರು ಎಚ್‌ಸಿಕ್ಯು ಉತ್ಪಾದನೆಯನ್ನು ಹೆಚ್ಚಿಸಿದ್ದರೂ, ಎಪಿಐ ಕೊರತೆ ಇದೆ. ಈ ಕೆಲವು ಕಂಪನಿಗಳು ಚೀನಾದಿಂದ ಕಚ್ಚಾ ವಸ್ತುಗಳಿಗೆ ಆರ್ಡರ್ ನೀಡಿದ್ದು ಕಂಟೈನರ್ ಗಳಿಗಾಗಿ ಕಾಯುತ್ತಿದ್ದಾರೆ.

ಮತ್ತೊಂದೆಡೆ, ಕೆಲವು ಸ್ಥಳೀಯ ಬೃಹತ್ ಮತ್ತು ಎಪಿಐ ಘಟಕಗಳು ಈಗ ಎಚ್‌ಸಿಕ್ಯು ತಯಾರಿಕೆಗಾಗಿ ಕಚ್ಚಾ ವಸ್ತುಗಳು ಮತ್ತು ಸಂಯುಕ್ತಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ತೆಲಂಗಾಣದ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ಸಹ ಈ ಸವಾಲನ್ನು ಗುರುತಿಸಿ ಸಂಯುಕ್ತಗಳನ್ನು ತಯಾರಿಸಲು ಕೆಲವು ಬೃಹತ್ ಔಷಧ ಘಟಕಗಳನ್ನು ವಿನಂತಿಸಿದೆ. ಇವುಗಳಲ್ಲಿ ಬಹುತೇಕ ಘಟಕಗಳನ್ನು ಕ್ಲೋರೊಕ್ವಿನ್‌ನ ಬೇಡಿಕೆ ಕಡಿಮೆಯಾದ ನಂತರ ಸ್ಥಗಿತಗೊಳಿಸಲಾಗಿತ್ತು. ಅವುಗಳನ್ನು ಈಗ ಮತ್ತೆ ತೆರೆಯಲಾಗುತ್ತಿದೆ.

ಸ್ಥಳೀಯ ಫಾರ್ಮಾ ಕಂಪೆನಿಗಳ ವಕ್ತಾರರು ಚೀನಾದಿಂದ ಎಪಿಐ ಸರಕುಗಳಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಎಚ್‌ಸಿಕ್ಯು ಹೊರತುಪಡಿಸಿ, ಬ್ರಾಡ್-ಸ್ಪೆಕ್ಟ್ರಮ್ ಪ್ರತಿಜೀವಕಗಳು ಮತ್ತು ಆಂಟಿವೈರಲ್ ಔಷಧಿಗಳಾದ ಅಜಿಥ್ರೊಮೈಸಿನ್, ಕ್ಲೋರೊಕ್ವಿನ್ ಫಾಸ್ಫೇಟ್, ಪ್ಯಾರೆಸಿಟಮಾಲ್, ಮಾಂಟೆಲುಕಾಸ್ಟ್, ಒಸೆಲ್ಟಾಮಿವಿರ್, ಫೆವಿಪಿರವಿರ್, ಲೋಪಿನಾವಿರ್, ರೆಮ್ಡೆಸಿವಿರ್ ಮತ್ತು ಐವರ್ಮೆಕ್ಟಿನ್ ಕೊವಿಡ್-19 ವಿರುದ್ಧ ಬಳಕೆಗೆ ವೇಗವನ್ನು ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.