ETV Bharat / bharat

ನಿಧಾನವಾಗಿ ಸುಧಾರಿಸುತ್ತಿದೆ ಚೀನಾ: ಯೂರೋಪ್,ಅಮೆರಿಕ ತಲ್ಲಣ, ಕೊಲ್ಲಿಯಲ್ಲಿ 70 ಕ್ಕೂ ಹೆಚ್ಚು ಮರಣ

ಇಲ್ಲಿಯವರೆಗೆ ವಿಶ್ವಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗೆ ಕೊವಿಡ್​​-19 ಸೋಂಕು ತಗುಲಿದ್ದು, 7,500 ಜನ ಮೃತ ಪಟ್ಟಿದ್ದಾರೆ. 80 ಸಾವಿರ ಜನ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.

Coronavirus
ಕೊರೊನಾ ವೈರಸ್
author img

By

Published : Mar 18, 2020, 11:01 AM IST

ಹೊಸದಿಲ್ಲಿ: ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಭೀತಿ ಹಾಗೆಯೇ ಮುಂದುವರೆದಿದೆ. ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಪ್ರತಿ ಗಂಟೆಗೊಮ್ಮೆ ಮತ್ತಷ್ಟು ಜನರಿಗೆ ವೈರಸ್ ಸೋಂಕು ತಗುಲುತ್ತಿರುವ ಹಾಗೂ ಮರಣ ಹೊಂದುತ್ತಿರುವ ವರದಿಗಳು ಬರುತ್ತಲೇ ಇವೆ.

ಇಲ್ಲಿಯವರೆಗೆ ವಿಶ್ವಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್​​-19 ಸೋಂಕು ತಗುಲಿದ್ದು, 7 ಸಾವಿರಕ್ಕೂ ಅಧಿಕ ಜನ ಮೃತ ಪಟ್ಟಿದ್ದಾರೆ. 80 ಸಾವಿರ ಜನ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.

Coronavirus
ಕೊರೊನಾ ವೈರಸ್ ಸಾಂದರ್ಭಿಕ ಚಿತ್ರ

ಚೀನಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ:

ಈ ಮಧ್ಯೆ ಕೊರೊನಾ ವೈರಸ್ ಹುಟ್ಟಿನ ತಾಣ ಚೀನಾದಲ್ಲಿ ಪರಿಸ್ಥಿತಿ ಅತ್ಯಂತ ನಿಧಾನವಾಗಿಯಾದರೂ ಸುಧಾರಿಸುತ್ತಿದೆ. ಚೀನಾದಲ್ಲಿ ಈವರೆಗೆ 3237 ಜನ ಸಾವನ್ನಪ್ಪಿದ್ದಾರೆ. ಮಂಗಳವಾರವೇ 11 ಜನ ಮೃತ ಪಟ್ಟಿದ್ದು, ವುಹಾನ್​​ನಲ್ಲಿ ಮಂಗಳವಾರ ಓರ್ವ ವ್ಯಕ್ತಿಗೆ ಮಾತ್ರ ಸೋಂಕು ತಗುಲಿದೆ. ಒಟ್ಟಾರೆ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಹುಬೇ ಪ್ರಾಂತ್ಯದಲ್ಲಿ ನಿಯೋಜಿಸಲಾಗಿರುವ ಸಾವಿರಾರು ವೈದ್ಯಕೀಯ ಸಿಬ್ಬಂದಿಯನ್ನು ಹಂತ ಹಂತವಾಗಿ ಚೀನಾ ಸರಕಾರ ಹಿಂದೆ ಕರೆಸಿಕೊಳ್ಳುತ್ತಿದೆ.

ಯುರೋಪ್​ ರಾಷ್ಟ್ರಗಳಲ್ಲಿ ಹೆಚ್ಚಿದ ಕೊರೊನಾ ಸೋಂಕು:

ಯುರೋಪ್ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಖಂಡಗಳ ಜನ ತಮ್ಮ ದೇಶಕ್ಕೆ ಬರದಂತೆ 30 ದಿನಗಳವರೆಗೆ ಗಡಿಗಳನ್ನು ಮುಚ್ಚಲು ಯುರೋಪಿಯನ್ ಒಕ್ಕೂಟ ನಿರ್ಧರಿಸಿದೆ. ಐರೋಪ್ಯ ರಾಷ್ಟ್ರ ಫ್ರಾನ್ಸ್​ನಲ್ಲಿ ಸುಮಾರು 6000 ಜನರಿಗೆ ಸೋಂಕು ತಗುಲಿದ್ದು, 150 ಜನ ಮೃತ ಪಟ್ಟಿದ್ದಾರೆ.

ಮತ್ತೊಂದು ಐರೋಪ್ಯ ರಾಷ್ಟ್ರ ಇಟಲಿಯಲ್ಲಿ ಕೊರೊನಾ ವೈರಸ್ ಸೋಂಕು ಮಿತಿ ಮೀರಿ ಬೆಳೆಯುತ್ತಿದೆ. ವಿಶ್ವದಲ್ಲಿ ಚೀನಾ ಬಿಟ್ಟರೆ ಇಟಲಿಯೇ ಅತಿ ಹೆಚ್ಚು ಕೊರೊನಾ ಪ್ರಭಾವಿತ ದೇಶವಾಗಿದ್ದು, 2500 ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಲ್ಲಿ 32 ಸಾವಿರಕ್ಕೂ ಅಧಿಕ ಜನ ಸೋಂಕಿಗೊಳಗಾಗಿದ್ದು, ಪರಿಸ್ಥಿತಿ ಭೀಕರವಾಗಿದೆ.

ಸ್ಪೇನ್​ನಲ್ಲಿ ಕೂಡ ಸೋಂಕು ಹಾವಳಿ ಹೆಚ್ಚಾಗಿದ್ದು, ಈವರೆಗೆ ಇಲ್ಲಿ ಸುಮಾರು 500 ಜನ ಮೃತ ಪಟ್ಟಿದ್ದಾರೆ. ಈಗ ಸ್ಪೇನ್ ಸಹ ಈಗ ತನ್ನ ನಗರಗಳನ್ನು ಸಂಪೂರ್ಣ ಮುಚ್ಚಿದೆ.

Coronavirus
ಕೊರೊನಾ ವೈರಸ್ ಸಾಂದರ್ಭಿಕ ಚಿತ್ರ

ಭಾರತದಲ್ಲಿ ಮೂರು ಸಾವು:

ಭಾರತದಲ್ಲಿಯೂ ಕೊರೊನಾ ಭೀತಿ ಮುಂದುವರೆದಿದ್ದು ಇಲ್ಲಿಯವರೆಗೆ 147 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 14 ಜನ ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ 237 ಜನರಿಗೆ ಸೋಂಕು ತಗುಲಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ಅಮೆರಿಕಾದ ಎಲ್ಲ ರಾಜ್ಯಗಳಿಗೂ ಹರಡಿದ ಕೊರೊನಾ:

ಅಮೆರಿಕಾದ ಎಲ್ಲ 50 ರಾಜ್ಯಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಮೆರಿಕದಲ್ಲಿ ಸುಮಾರು 6300 ಜನರಿಗೆ ಸೋಂಕು ತಗುಲಿದ್ದು, ಈವರೆಗೆ 108 ಜನ ಮೃತ ಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ 5 ಸಾವು:

ಆಸ್ಟ್ರೇಲಿಯಾದಲ್ಲಿ 450 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಸೋಂಕು ಹರಡುವಿಕೆ ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಸ್ಥಳದಲ್ಲಿ 100 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಆದೇಶಿಸಿದ್ದಾರೆ. ಪ್ರಥಮ ವಿಶ್ವ ಯುದ್ಧದ ನಂತರದ ಅತಿ ಕೆಟ್ಟ ಸಂದರ್ಭವನ್ನು ಆಸ್ಟ್ರೇಲಿಯಾ ಎದುರಿಸುತ್ತಿದೆ ಎಂದು ಪ್ರಧಾನಿ ಮಾರಿಸನ್ ಹೇಳಿದ್ದು, ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತದೆ.

Coronavirus
ಕೊರೊನಾ ವೈರಸ್ ಸಾಂದರ್ಭಿಕ ಚಿತ್ರ

ಕೊಲ್ಲಿ ರಾಷ್ಟ್ರಗಳಲ್ಲಿ 77 ಜನ ಬಲಿ:

ಕೊಲ್ಲಿ ರಾಷ್ಟ್ರಗಳಲ್ಲಿ 2476 ಜನರಿಗೆ ಸೋಂಕು ತಗುಲಿದೆ. ಇರಾನ್ ದೇಶದಲ್ಲಿ ಅತಿ ಹೆಚ್ಚು ಅಂದರೆ 2336 ಜನರಿಗೆ ಸೋಂಕು ತಗುಲಿದ್ದು, 77 ಜನ ಮೃತಪಟ್ಟಿದ್ದಾರೆ. ಕತಾರ್​ನಲ್ಲಿ ಮಂಗಳವಾರ ಮತ್ತೊಂದು ಕೊರೊನಾ ಪ್ರಕರಣ ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.