ನವದೆಹಲಿ: ಶಾಲೆ, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಆಯುಷ್ ಇಲಾಖೆ ಸೂಚಿಸಿದ ಕ್ರಮಗಳನ್ನು ಪಾಲಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಿರ್ದೇಶನ ನೀಡಿದೆ.
ಈ ಕುರಿತು ಸಿಬಿಎಸ್ಇ, ಯುಜಿಸಿ, ಏಐಸಿಟಿಇ, ಎನ್ಸಿಇಆರ್ಟಿಗೆ ಪತ್ರ ಬರೆದಿರುವ ಮಾನವ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಮಿತ್ ಖರೆ ಕೊರೊನಾ ವಿರುದ್ಧ ಹೋರಾಡಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಇದರ ಜೊತೆಯಲ್ಲೇ '' ಆಯುಷ್ ಇಲಾಖೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದು ಮಾರ್ಗದರ್ಶನಗಳನ್ನು ನೀಡಿದ್ದು ಅವುಗಳನ್ನು ಪಾಲಿಸಿ ಹಾಗೂ ಪ್ರಧಾನಿ ಹೇಳಿದಂತೆ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಗಳಲ್ಲಿ ಮೊಬೈಲ್ ಟಾರ್ಚ್, ಮೇಣದ ಬತ್ತಿಯನ್ನು ಬೆಳಗಿಸೋಣ'' ಎಂದು ಪತ್ರದಲ್ಲಿ ಮನವಿ ಮಾಡಿದೆ.