ETV Bharat / bharat

ಕೊರೊನಾದಿಂದ 3.7 ಕೋಟಿ ಮಂದಿಗೆ ಬಡತನದ ಬೇಗುದಿ: ಗೇಟ್ಸ್ ಫೌಂಡೇಶನ್​​​ - ಬಿಲ್​ ಅಂಡ್ ಮಿಲಿಂದಾ ಗೇಟ್ಸ್​ ಫೌಂಡೇಶನ್

ಕೊರೊನಾದಿಂದಾಗಿ ವಿಶ್ವದೆಲ್ಲೆಡೆ ಆಗಿರುವ ದುಷ್ಪರಿಣಾಮಗಳ ಬಗ್ಗೆ ಬಿಲ್​ ಅಂಡ್ ಮಿಲಿಂದಾ ಗೇಟ್ಸ್​ ಫೌಂಡೇಶನ್ ಹಲವು ಕುತೂಹಲಕಾರಿ ಮಾಹಿತಿ ಬಹಿರಂಗಪಡಿಸಿದೆ.

Poverty due to corona
ಕೊರೊನಾದಿಂದ ಆರ್ಥಿಕ ಪರಿಣಾಮ
author img

By

Published : Sep 16, 2020, 10:19 AM IST

ನವದೆಹಲಿ: ಕೊರೊನಾದಿಂದಾಗಿ ವಿಶ್ವದಲ್ಲಿ ಸುಮಾರು 3.7 ಕೋಟಿ ಮಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬಡತನಕ್ಕೆ ಸಿಲುಕಿದ್ದಾರೆ ಎಂದು ಬಿಲ್​ ಅಂಡ್ ಮಿಲಿಂದಾ ಗೇಟ್ಸ್​ ಫೌಂಡೇಶನ್ ತನ್ನ ವರದಿಯಲ್ಲಿ ತಿಳಿಸಿದೆ.

ಬಿಲ್​ ಅಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ಗೋಲ್ ಕೀಪರ್ ರಿಪೋರ್ಟ್ ಎಂಬ ವರದಿಯನ್ನು ಪ್ರಕಟಿಸಿದ್ದು, ಈ ವರದಿಯಲ್ಲಿ ಕೊರೊನಾ ವೈರಸ್​ನಿಂದಾದ ಕೆಲವು ಪರಿಣಾಮಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.

ಕೊರೊನಾ ಮಹಾಮಾರಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಾಗಿ ದುಷ್ಪರಿಣಾಮ ಬೀರಿದ್ದು, ಈ ರಾಷ್ಟ್ರಗಳಲ್ಲಿ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಈ ಹಿನ್ನೆಲೆಯಲ್ಲಿ ಗೋಲ್ ಕೀಪರ್ ರಿಪೋರ್ಟ್ ಬಹಿರಂಗಪಡಿಸಿದ ಮಾಹಿತಿ ಇಂತಿದೆ.

  • ಪ್ರಪಂಚದಾದ್ಯಂತ ಆರ್ಥಿಕ ಚೇತರಿಕೆಗಾಗಿ 18 ಲಕ್ಷ ಕೋಟಿ ಡಾಲರ್​ಗಳ ವ್ಯಯ
  • ಇದರಿಂದಾಗಿ 2021ರ ವೇಳೆಗೆ 12 ಲಕ್ಷ ಕೋಟಿ ಡಾಲರ್​ಗಳ ನಷ್ಟ ಸಾಧ್ಯತೆ
  • ಕೊರೊನಾದಿಂದಾಗಿ ಕೆಲವೇ ತಿಂಗಳಲ್ಲಿ ಶೇಕಡಾ 1ರಷ್ಟು ಬಡತನ ಏರಿಕೆ
  • 20 ವರ್ಷಗಳಲ್ಲಿ ಸಾಧಿಸಿದ್ದ ಅಭಿವೃದ್ಧಿಯಲ್ಲಿ ಭಾರೀ ಕುಂಠಿತ
  • ಕೊರೊನಾ ಸೋಂಕಿನಿಂದ ಮಾತ್ರವಲ್ಲದೇ ಪರೋಕ್ಷವಾಗಿ ಅನೇಕ ಮಂದಿ ಸಾವು
  • ಕೋವಿಡ್​ನಿಂದ ಆರೋಗ್ಯ ವಲಯದ ಮೇಲೆ ದುಷ್ಪರಿಣಾಮ
  • ಕೇವಲ 25 ವಾರಗಳಲ್ಲಿ 25 ವರ್ಷಗಳ ನಷ್ಟ
  • ಶೈಕ್ಷಣಿಕ ಚಟುವಟಿಕೆಗಳ ಮೇಲೆಯೂ ಕೊರೊನಾ ದುಷ್ಪರಿಣಾಮ
  • ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೊಡೆತ

ಇದರ ಜೊತೆಗೆ ಇನ್ನೂ ಹಲವಾರು ಪರಿಣಾಮಗಳನ್ನು ಬಿಲ್​ ಅಂಡ್ ಮಿಲಿಂದಾ ಗೇಟ್ಸ್​ ಫೌಂಡೇಶನ್ ಪಟ್ಟಿ ಮಾಡಿದ್ದು, ಈ ವರದಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಹೆಚ್ಚಾಗಿ ಗಮನ ಕೇಂದ್ರೀಕರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.